ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ತಾಲ್ಲೂಕು ರೈತ ಸಂಘ ತಾಲೂಕಾಡಳಿತ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ನೇಗಿಲು ಮನೆ ಅರ್ಥಾತ್ ಹೊನ್ನಾರು ಹೂಡುವ ಕಾರ್ಯಕ್ರಮವನ್ನು ಏ. 27ರಂದು ನನ್ನಿವಾಳ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಹಸಿಲ್ದಾರ್ ಎ.ನ್ ರಘುಮೂರ್ತಿ ಹೇಳಿದರು.
ನಗರದ ತಾಲೂಕ ಕಚೇರಿಯಲ್ಲಿ ವಿವಿಧ ರೈತ ಸಂಘಟನೆಗಳು ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ, ಕಾರ್ಯಕ್ರಮದಲ್ಲಿ ಆಯ್ದ 9 ಜೊತೆ ಹೋರಿ ಜೋಡೆತ್ತುಗಳು ಮತ್ತು ನೇಗಲಿ ಗಳೊಂದಿಗೆ ಭೂಮಿ ಮನೆ ಮಾಡುವಂತ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ತದನಂತರ ಆಯ್ದ ರೈತರೊಂದಿಗೆ ಭೂಮಿಯ ಬಳಕೆ ಹಂಗಾಮಿನಲ್ಲಿ ಬಿತ್ತನೆ ಮತ್ತು ನೀರಿನ ಸದ್ಬಳಕೆ ವಿಚಾರದಲ್ಲಿ ರೈತರೊಂದಿಗೆ ಸಂವಾದ ಕಾರ್ಯಕ್ರಮ ಇರುತ್ತದೆ.
ಸಮಾರಂಭವನ್ನು ಚಳ್ಳಕೆರೆ ಶಾಸಕರು ಟಿ. ರಘುಮೂರ್ತಿ ಉದ್ಘಾಟಿಸಲಿದ್ದು, ತಾಲೂಕಿನ ಪ್ರಗತಿಪರ ರೈತರು, ರೈತ ಮುಖಂಡರುಗಳು, ಚುನಾಯಿತ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ರೈತ ಸಂಘದ ಮುಖಂಡರಾದ ಸೋಮಗುದ್ದು ರಂಗಸ್ವಾಮಿ, ಕೆ.ಪಿ. ಭೂತಯ್ಯ ಮತ್ತು ರೆಡ್ಡಿಹಳ್ಳಿ ವೀರಣ್ಣ, ಸಹಾಯಕ ಕೃಷಿ ನಿರ್ದೇಶಕರಾದ ಅಂತ ಅಶೋಕ್, ತೋಟಗಾರಿಕೆ ಸಹಾಯಕ ನಿರ್ದೇಶಕ ವಿರೂಪಾಕ್ಷಪ್ಪ, ಹಂಪಣ್ಣ ತಿಪ್ಪೇಸ್ವಾಮಿ, ಹನುಮಂತಪ್ಪ, ಚಂದ್ರಣ್ಣ, ರಾಜಣ್ಣ , ತಿಪ್ಪಣ್ಣ ಇನ್ನಿತರರಿದ್ದರು.
Also read: ಸೋಲಿನ ಭಯ ಬಿಟ್ಟು, ಗೆಲ್ಲಲೇಬೇಕು ಎಂಬ ಛಲದೊಂದಿಗೆ ಆಟ ಆಡಿ: ಮುಖ್ಯಮಂತ್ರಿ ಬೊಮ್ಮಾಯಿ ಕರೆ
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post