ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಶಿವಮೊಗ್ಗ |
ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಹಾಲು ಒಕ್ಕೂಟ(ಶಿಮುಲ್)ದ Shimul ಅಧ್ಯಕ್ಷಗಾದಿ ನಡೆದ ಚುನಾವಣೆಯನ್ನು ಅಕ್ರಮ ಎಂದಿರುವ ಹೈಕೋರ್ಟ್ ಇದನ್ನು ಅಸಿಂಧುಗೊಳಿಸಿ, ಆರು ತಿಂಗಳಲ್ಲಿ ಮರು ಚುನಾವಣೆ ನಡೆಸುವಂತೆ ಆದೇಶಿಸಿದೆ.
ಈ ಕುರಿತಂತೆ ಆದೇಶ ನೀಡಿರುವ ನ್ಯಾಯಾಲಯ, ಚುನಾವಣೆಯನ್ನು ಅಸಿಂಧುಗೊಳಿಸಿ, ಅಕ್ರಮ ಚುನಾವಣೆಗೆ ಸಹಕರಿಸಿದ ಆರೋಪದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಹಾಗೂ ಸಹಕಾರ ಇಲಾಖೆಯ ಇಬ್ಬರು ಅಧಿಕಾರಿಗಳಿಗೆ ತಲಾ 10 ಸಾವಿರ ರೂ. ದಂಡ ವಿಧಿಸಿದೆ.

ಜ.1ರಂದು ಶಿಮೂಲ್‌ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸೊರಬದ ಶ್ರೀಪಾದ ರಾವ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಶಿಮೂಲ್ ನಲ್ಲಿ ಬಿಜೆಪಿ 3, ಕಾಂಗ್ರೆಸ್ 2, ಜೆಡಿಎಸ್ 1 ನಿರ್ದೇಶಕರು ಇದ್ದಾರೆ. ಇದರಲ್ಲಿ ಕಳೆದ ಡಿಸಂಬರ್’ನಲ್ಲಿ ಶಿಕಾರಿಪುರ ತಾಲೂಕು ಹೀರೆಬಂಬೂರು ಗ್ರಾಮದ ಶಿವಶಂಕರ್, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕಂಚಗಾರನಹಳ್ಳಿಯ ಟಿ. ಬಸಪ್ಪ ಹಾಗೂ ಹೊಸನಗರ ತಾಲೂಕಿನ ಕಾರ್ಗಡಿ ವಿದ್ಯಾರ್ಧ ರವರಿಗೆ ಸಹಕಾರ ಇಲಾಖೆ 29ರಂತೆ ನೋಟಿಸ್ ನೀಡಿ, ಚುನಾವಣೆಗೆ ಅನರ್ಹರನ್ನಾಗಿಸಲಾಗಿತ್ತು. ಇವರು ಹೈಕೋರ್ಟ್’ಗೆ ಹೋಗಿ ನೀಡಲಾದ ನೋಟಿಸ್’ಗೆ ತಡೆಯಾಜ್ಞೆ ತಂದಿದ್ದರು. ಕಳೆದ ಮೂರು ತಿಂಗಳ ಸತತ ಕೋರ್ಟ್ ಹೋರಾಟದ ಫಲವಾಗಿ ಶಿವಶಂಕರ್ ಪರ ನ್ಯಾಯಾಲಯ ತೀರ್ಪು ನೀಡಿದೆ.
Also read: ಲೇಖಕ ಎನ್.ವಿ. ರಮೇಶ್ ಅವರ 17 ಪುಸ್ತಕಗಳು ನಾಳೆ ಲೋಕಾರ್ಪಣೆ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















