ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ತಲೆನೋವಾಗುತ್ತಿದೆ ಎಂದು ರೂಮಿಗೆ ತೆರಳಿದ್ದ ಸ್ಯಾಕ್ಸೋಫೋನ್ ವಾದಕಿಯೊಬ್ಬರು, ನೇಣುಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಮಂಗಳೂರು ನಗರದ ಶಕ್ತಿನಗರದಲ್ಲಿ ನಡೆದಿದೆ.
ಮೂಲ್ಕಿ ಮೂಲದ 29 ವರ್ಷದ ಸ್ಯಾಕ್ಸೋಫೋನ್ ವಾದಕಿ(ಹೆಸರು ಪ್ರಕಟಿಸುತ್ತಿಲ್ಲ) ತಲೆ ನೋವಾಗುತ್ತಿದೆ ಎಂದು ತನ್ನ ಕೋಣೆಗೆ ಹೋದವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಅವರು ಶಕ್ತಿನಗರದ ಫ್ಲ್ಯಾಟ್ ನಲ್ಲಿ ಪತಿ, ತಂದೆ, ತಾಯಿ ಮತ್ತು ಮಗುವಿನೊಂದಿಗೆ ವಾಸವಿದ್ದರು. ತಲೆ ನೋವೆಂದು ಕೋಣೆಗೆ ತೆರಳಿದ ಅವರು ಎಷ್ಟು ಹೊತ್ತಾದರೂ ವಾಪಸ್ ಬಾರದ ವೇಳೆ ಮನೆಯವರು ಕೋಣೆಗೆ ಹೋಗಿ ನೋಡಿದಾಗ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವುದು ಪತ್ತೆಯಾಗಿದೆ ಎನ್ನಲಾಗಿದೆ.
Also read: ಅಧಿಕಾರಕ್ಕಿಂತ ನಮ್ಮ ವ್ಯಕ್ತಿತ್ವವೇ ಎಂದೆಂದಿಗೂ ಶಾಶ್ವತ : ಗೋವರ್ಧನ ರೆಡ್ಡಿ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















