ಕಲ್ಪ ಮೀಡಿಯಾ ಹೌಸ್ | ಮಂಡ್ಯ |
50 ವರ್ಷದ ಮಹಿಳೆ ತಾನು 20 ವರ್ಷದ ಯುವತಿ ಎಂದು ಹೇಳಿದ್ದನ್ನು ಫೇಸ್’ಬುಕ್ ಮೂಲಕ ನಂಬಿದ ಯುವಕನೊಬ್ಬ ಸುಮಾರು 3 ಲಕ್ಷ ರೂ. ಹಣ ಕಳೆದುಕೊಂಡಿರುವ ಘಟನೆ ನಡೆದಿದೆ.
ಜಿಲ್ಲೆಯ ನಾಗಮಂಗಲ ತಾಲೂಕಿನ ಯುವಕನೊಬ್ಬ ಒಂದು ಸುಂದರ ಡಿಪಿ ಹೊಂದಿದ್ದ ಹುಡುಗಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾನೆ. ಅಲ್ಲದೇ, ಆಕೆಯೊಂದಿಗೆ ಬಹಳಷ್ಟು ಚಾಟ್ ಮಾಡಿದ್ದಾನೆ. ಆಕೆ ತಾನು 20 ವರ್ಷದ ಯುವತಿ ಎಂದು ಹೇಳಿಕೊಂಡು ಆಕೆಗೆ ಸಂತೋಷದಿಂದ ಮೆಸೇಜ್ ಮಾಡಿದ್ದಾನೆ. ಆನಂತರ ಆತ ಪ್ರಪೋಸ್ ಮಾಡಿದ್ದು, ಅದನ್ನು ಆಕೆ ಒಪ್ಪಿಕೊಂಡಿದ್ದಾಳೆ.
ಆಕೆಯೊಂದಿಗೆ ಫೋನ್ ಮೂಲಕ ಮಾತನಾಡಿ ಸಲಿಗೆ ಬೆಳೆಯುತ್ತದೆ. ಆನಂತರ ತನ್ನ ಮನೆಯಲ್ಲಿ ಕಷ್ಟ ಎಂದು ಹೇಳಿಕೊಂಡು 3 ಲಕ್ಷ ರೂ. ಹಣ ಹಾಗೂ 50 ಸಾವಿರ ರೂ. ಬೆಲೆಯ ದಿನಸಿ ವಸ್ತುಗಳನ್ನು ತರಿಸಿಕೊಂಡಿದ್ದಾಳೆ.
Also read: ನಾಯಿ ಕಚ್ಚಿದ್ದಕ್ಕೆ 4 ಲಕ್ಷ ರೂ. ದಂಡ ವಿಧಿಸಿದ ಗ್ರಾಹಕರ ವೇದಿಕೆ
ಆನಂತರ ಮದುವೆ ಆಗೋಣ ಎಂದು ಯುವಕ ಕೇಳಿದ್ದಕ್ಕೆ ಅಕೆ ವಿರೋಧಿಸುತ್ತಾಳೆ. ಕೊನೆಗೆ ಆ 50 ವರ್ಷದ ಆಂಟಿಯೇ ನಾಗಮಂಗಲ ತಾಲೂಕಿನಲ್ಲಿರುವ ಯುವಕನ ಮನೆಗೆ ಹೋಗಿ ಮದುವೆ ಮಾತುಕತೆ ನಡೆಸಿದ್ದಾಳೆ. ಈ ವೇಳೆ ಆಕೆ ಶಾಸ್ತ್ರ ಏನು ಬೇಡಾ ನಮ್ಮ ಭಾವ ಜಗಳ ಮಾಡುತ್ತಿದ್ದಾರೆ. ಇಲ್ಲೇ ಎಲ್ಲಾದರೂ ಮದುವೆ ಮಾಡಿಬಿಡೋಣಾ ಎಂದಿದ್ದಾಳೆ. ಇದಕ್ಕೆ ಒಪ್ಪಿದ ಯುವಕನ ಪೋಷಕರು ಹಾಗೂ ಯುವಕ ಚುಂಚನಗಿರಿಯ ಮುಳಕಟ್ಟಮ್ಮ ದೇವಸ್ಥಾನದಲ್ಲಿ ಮದುವೆ ನಿಶ್ಚಯ ಮಾಡಿದ್ದಾರೆ. ಬಳಿಕ ಯುವಕನ ಮನೆಯವರು ಮದುವೆ ಆಮಂತ್ರಣ ಪತ್ರಿಕೆಯನ್ನು ಪ್ರಿಂಟ್ ಮಾಡಿಸಿ ಸಂಬಂಧಿಕರಿಗೆಲ್ಲಾ ಹಂಚುತ್ತಾರೆ. ಇದಾದ ಬಳಿಕ ಹುಡುಗಿ ರೂಪದಲ್ಲಿದ್ದ ಹುಡುಗಿಗೆ ಯುವಕ ಫೋನ್ ಮಾಡಿ ಮಾತಾಡುವಾಗ ನಿನ್ನ ನೋಡಬೇಕು. ಬಟ್ಟೆ ತೆಗೆದುಕೊಂಡು ಬರೋಣಾ ಎಂದು ಕರೆದಿದ್ದಾನೆ. ಇದಕ್ಕೆ ಆಕೆ ನಿರಾಕರಿಸಿದ್ದಾಳೆ.
ನಂತರ ಆಕೆಯ ವರ್ತನೆ ಬಗ್ಗೆ ಅನುಮಾನಗೊಂಡ ಯುವಕ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಆ 50 ವರ್ಷದ ಆಂಟಿಯನ್ನು ಪೊಲೀಸರು ಕರೆಸುತ್ತಾರೆ. ತನ್ನ ಸಾಕು ಮಗಳನ್ನು ಯಾರೋ ಅಪಹರಿಸಿದ್ದಾರೆ ಎಂದು ನಾಟಕ ಆಡುತ್ತಾಳೆ. ಈ ವೇಳೆ ಆಕೆಯ ಕೈಯಲ್ಲಿ ಹಾಗೂ ಬ್ಲೌಸ್’ನಲ್ಲಿ ಇನ್ನೊಂದು ಮೊಬೈಲ್ ಇರುವುದನ್ನು ಗಮನಿಸಿದ ಪೊಲೀಸರು ಕಾಲ್ ಹಿಸ್ಟರ್ ಹಾಗೂ ಮೆಸೇಜ್ ನೋಡಿದಾಗ ಆಕೆ ವಂಚಕಿ ಎನ್ನುವುದು ಹೊರಬಿದ್ದಿದೆ.
ಅಂತಿಮವಾಗಿ ಯುವಕನಿಗೆ ಹಣ ಹಿಂತಿರುಗಿಸುವಂತೆ ಪೊಲೀಸರು ಆಕೆಗೆ ಸೂಚನೆ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post