ಕಲ್ಪ ಮೀಡಿಯಾ ಹೌಸ್ | ಸಾಗರ |
ಇಲ್ಲಿನ ಹಸಿರುಮಕ್ಕಿ ಮತ್ತು ಸಿಗಂದೂರು ಲಾಂಚ್’ನಲ್ಲಿ ಹದಿನೈದು ವರ್ಷಗಳ ಹೆಚ್ಚು ಸೇವೆ ಸಲ್ಲಿಸುತಿದ್ದ ಭಾಸ್ಕರ ಹುಲಿದೇವರಬನ ಅವರು ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ಉತ್ತಮ ಸ್ಪಂದನೆ ನೀಡುತಿದ್ದ ಇವರು ಈ ಭಾಗದಲ್ಲಿ ಉತ್ತಮ ಹೆಸರು, ಪ್ರೀತಿ, ವಿಶ್ವಾಸ ಗಳಿಸಿದ್ದರು.

ಮೃತರು ಪತ್ನಿ, ಮೂವರು ಮಕ್ಕಳನ್ನು ಅಗಲಿದ್ದಾರೆ.
ಭಾಸ್ಕರ್ ನಿಧನಕ್ಕೆ ಬಂದರು ಇಲಾಖೆ, ಶ್ರೀ ಕ್ಷೇತ್ರ ಸಿಗಂಧೂರಿನ ಧರ್ಮದರ್ಶಿ ಡಾ.ರಾಮಪ್ಪ, ಕೋಳೂರು ಗ್ರಾಮ ಪಂಚಾಯ್ತಿ, ಹುಲಿದೇವರಬನ ಗೆಳೆಯರ ಬಳಗ ಕಂಬನಿ ಮಿಡಿದಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















