ಕಲ್ಪ ಮೀಡಿಯಾ ಹೌಸ್ | ಮೇಲುಕೋಟೆ |
ಮೇಲುಕೋಟೆಯ ಬಾಹುಬಲಿ ಎಂದೇ ಪ್ರಖ್ಯಾತರಾಗಿದ್ದ ಕಲಮೇಘಮ್ ರಾಮಸ್ವಾಮಿ ಅಯ್ಯಂಗಾರ್ ಅವರು ಇಂದು ವಿಧಿವಶರಾಗಿದ್ದಾರೆ.
80ಕ್ಕೂ ಅಧಿಕ ಸಂವತ್ಸರಗಳನ್ನು ಕಂಡಿದ್ದ ರಾಮಸ್ವಾಮಿ ಅಯ್ಯಂಗಾರ್ ಅವರು ಇಂದು ಮುಂಜಾನೆ ಹರಿಪಾದ ಸೇರಿದ್ದು, ಇಡಿಯ ಮೇಲುಕೋಟೆ ಸೂತಕದಲ್ಲಿ ಮುಳುಗಿದೆ.
ಪ್ರತಿನಿತ್ಯ ತಪ್ಪದೇ ಸುಮಾರು 70 ಸಂವತ್ಸರದ ಕಾಲ ಅಭಿಷೇಕ ಮತ್ತು ನೈವೇದ್ಯಕ್ಕಾಗಿ ನೀರನ್ನು ಕೆಳಗಿರುವ ಪುಷ್ಕರಣಿಯಿಂದ ಬೆಟ್ಟದ ಮೇಲಿರುವ ಮೇಲುಕೋಟೆಯ ಯೋಗ ನರಸಿಂಹ ದೇವಸ್ಥಾನಕ್ಕೆ 300ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಏರಿ ತೆಗೆದುಕೊಂಡು ಹೋಗುತ್ತಿದ್ದರು.
Also read: “ಲವ್ವಾಟ” ಚಲನಚಿತ್ರದ ಟೈಟಲ್ ಅನಾವರಣ…
70 ವರ್ಷಗಳ ಕಾಲ ಈ ಸೇವೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದ ಇವರು ನೀರಿನ ಪಾತ್ರೆಯನ್ನು ಹೊತ್ತುಕೊಂಡು ಬೆಟ್ಟ ಹತ್ತುತ್ತಿದ್ದ ರೀತಿಗೆ ಇಡಿಯ ಕರ್ನಾಟಕವೇ ನಿಬ್ಬೆರಗಾಗಿತ್ತು. ಇಂತಹ ಹಿರಿಯ ಜೀವ ಈಗ ನಾಡನ್ನು ಅಗಲಿದ್ದು, ದುರ್ದೈವವೇ ಸರಿ.
ರಾಮಸ್ವಾಮಿ ಅವರ ನಿಧನಕ್ಕೆ ಸಂಸದ ಪಿ.ಸಿ. ಮೋಹನ್, ಶಾಸಕ ರಾಮಸ್ವಾಮಿ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post