ರಾಜಸ್ಥಾನದ ಉದಯಪುರದಲ್ಲಿ ಅಮಾಯಕ ಹಿಂದೂ ಟೈಲರ್ ಕನ್ಹಯ್ಯಲಾಲ್ Kannaiahlal ಎಂಬುವವರನ್ನು ಹಾಡುಹಗಲೇ ಕೊಲೆ ಮಾಡಿರುವ ಪ್ರಕರಣವನ್ನು ಖಂಡಿಸಿ ವಿಶ್ವ ಹಿಂದು ಪರಿಷತ್ ಬಜರಂಗದಳ ನೇತೃತ್ವದಲ್ಲಿ ನಮೋ ವೇದಿಕೆ, ಬಿಜೆಪಿ ತಾಲೂಕು ಘಟಕ, ಬಿಜೆಪಿ ಯುವ ಮೋರ್ಚಾ, ಯುವಾ ಬ್ರಿಗೇಡ್ ಸೇರಿದಂತೆ ವಿವಿಧ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಮುಂಭಾಗ ಜಮಾಯಿಸಿದ ಕಾರ್ಯಕರ್ತರು ಕೊಲೆಗಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮುಸ್ಲಿಂ ಭಯೋತ್ಪಾದಕರಾದ ಮಹಮ್ಮದ್ ರಿಯಾಜ್ ಮತ್ತು ಮಹಮ್ಮದ್‍ಗೌಸ್ ಮುಸ್ಲಿಂ ಜಿಹಾದಿ ಮಾನಸಿಕತೆ ಹೊಂದಿ ದ್ವೇಷ ಭಾವನೆಯಿಂದ ಕೋಮು ಗಲಭೆ ಕೆರಳಿಸುವ ದುರುದ್ದೇಶದಿಂದ ಹಿಂದೂ ಸಮಾಜವನ್ನು ಭಯಭೀತಿಗೊಳಿಸುವ ದೃಷ್ಠಿಯಿಂದ ಈ ಕುಕೃತ್ಯ ಎಸಗಿದ್ದಾರೆ. ಈ ಇಬ್ಬರು ಕೊಲೆಗಾರರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಲು ಆದೇಶಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ವಿಹಿಂಪ ತಾಲೂಕು ಅಧ್ಯಕ್ಷ ಎಂ.ಎಸ್. ಕಾಳಿಂಗರಾಜ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಇದೇ ಕತ್ತಿಯಿಂದ ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿರುವುದನ್ನು ಇಡೀ ದೇಶ ಖಂಡಿಸುತ್ತದೆ. ಜೂ.28 ರ ಮಂಗಳವಾರ ಮಧ್ಯಾಹ್ನ ರಾಜಸ್ಥಾನದ ಉದಯಪುರದ ಕನ್ಹಯ್ಯಲಾಲ್ ಟೈಲರ್ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದಿದ್ದ ಇಬ್ಬರು ಹಂತಕರು ಟೈಲರ್ ಕನ್ಹಯ್ಯಲಾಲ್ ಅವರನ್ನು ಮೋಸದಿಂದ ಕೊಲೆ ಮಾಡಿದ್ದಾರೆ ಎಂದು ದೂರಿದರು.
ಮೊಹಮ್ಮದ್‍ಗೌಸ್ ಎಂಬುವವನು ಬಟ್ಟೆ ಅಳತೆ ಕೊಡುವ ನಾಟಕ ಆಡುತ್ತಿದ್ದನ್ನು ವೀಡಿಯೋ ಮಾಡುತ್ತಿದ್ದ ಮೊಹಮ್ಮದ್ ರಿಯಾಜ್, ಮೊಹಮ್ಮದ್‍ಗೌಸ್ ಎಂಬ ಮುಸ್ಲಿಂ ಜಿಹಾದಿ ತನ್ನ ಸೊಂಟದಲ್ಲಿ ಇಟ್ಟಿದ್ದ ಕತ್ತಿಯನ್ನು ತೆಗೆದು ಅಮಾನುಷವಾಗಿ ಕನ್ಹಯ್ಯಲಾಲ್ ಕತ್ತಿಗೆ ಇರಿದಿರುವುದನ್ನು ವೀಡಿಯೋ ಮಾಡಿ ವಿಕೃತಿ ಮೆರೆದಿದ್ದಾರೆ. ಕನ್ಹಯ್ಯಲಾಲ್ ಕೊಲೆ ಮಾಡಿದ ಮುಸ್ಲಿಂ ಜಿಹಾದಿಗಳು ಮತ್ತೆ ವೀಡಿಯೋ ಮಾಡಿ ಪ್ರವಾದಿ ಮೊಹಮ್ಮದ್ ಪರವಾಗಿ ನಾವು ಕೊಲೆ ಮಾಡಿದ್ದೇವೆ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ಕಿಡಿಕಾರಿದರು.
ಅಮಾಯಕ ಕನ್ಹಯ್ಯಲಾಲ್ ತನ್ನ ದಿನನಿತ್ಯದ ದರ್ಜಿ ಕೆಲಸ ಮಾಡಿ ತನ್ನ ಕುಟುಂಬದ ಜೀವನ ನಿರ್ವಹಣೆ ನಡೆಸುತ್ತಿದ್ದ. ಯಾವ ಪ್ರವಾದಿ ಮೊಹಮ್ಮದ್ ಬಗ್ಗೆ ಮಾತನಾಡದೆ ಕೇವಲ ನೂಪುರ ಶರ್ಮಾಗೆ ಬೆಂಬಲ ನೀಡಿ ಹಾಕಿದ ಪೋಸ್ಟ್ ಮತ್ತು ನೂಪುರ ಶರ್ಮಾ ಅವರ ಫೋಟೋ ವಾಟ್ಸಾಪ್ ಸ್ಟೇಟಸ್ ಹಾಕಿದ್ದಕ್ಕೆ ಅಮಾನುಷವಾಗಿ ಕೊಲೆ ಮಾಡಿರುವುದು ಭಯೋತ್ಪಾದಕ ಕೃತ್ಯವಾಗಿದೆ. ಈ ರೀತಿ ಮಾನಸಿಕತೆ ಐಸಿಸ್ ಉಗ್ರರ ಮಾನಸಿಕತೆ ಆಗಿದೆ ಎಂದು ಆರೋಪಿಸಿದರು.
ಇವರು ಐಸಿಸ್ ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದು, ಸಾರ್ವಜನಿಕವಾಗಿ ಕತ್ತನ್ನು ಸೀಳುವ ಕೃತ್ಯ ನಡೆಸುತ್ತಿರುವುದು ಕೋಮು ಭಾವನೆ ಕೆರಳಿಸುವ ಮತ್ತು ಶಾಂತಿ ಕದಡುವ ದುರುದ್ದೇಶದಿಂದ ಮಾಡಿರುವ ಕನ್ಹಯ್ಯಲಾಲ್ ಹತ್ಯೆ ಇಡೀ ದೇಶದ ಜನತೆ ಭಯಭೀತಿಗೊಳಿಸುವ ರೀತಿ ಇದೆ. ಇಂತಹ ಅಸಹ್ಯ ಕೃತ್ಯ ಮಾಡಿರುವ ಮೊಹಮ್ಮದ್‍ಗೌಸ್ ಮತ್ತು ಮಹಮದ್ ರಿಯಾಜ್ ಇಬ್ಬರನ್ನು ಫಾಸ್ಟ್ ಟ್ರಾಕ್ ಕೋರ್ಟ್‍ನಲ್ಲಿ ಶೀಘ್ರ ವಿಚಾರಣೆ ಮಾಡಿ ಇವರಿಗೂ ಸಹ ಗಲ್ಲು ಶಿಕ್ಷೆ ವಿಧಿಸಲು ಆದೇಶಿಬೇಕೆಂದು ಒತ್ತಾಯಿಸಿದರು.
ಪಟ್ಟಣದ ಶ್ರೀರಂಗನಾಥ ದೇವಸ್ಥಾನದ ಮುಂಭಾಗದಿಂದ ಮುಖ್ಯರಸ್ತೆ ಮಾರ್ಗವಾಗಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಖಾಸಗಿ ಬಸ್ ನಿಲ್ದಾಣ ಮುಂಭಾಗದಲ್ಲಿ ಮಾನವ ಸರಪಳಿ ನಿರ್ಮಿಸಿ ದೇಶ ದ್ರೋಹಿಗಳ ವಿರುದ್ಧ ಘೋಷಣೆ ಕೂಗಿದರು. ನಂತರ ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಎಂ.ಎಸ್. ಕಾಳಿಂಗರಾಜ್, ತಾಲೂಕು ಕಾರ್ಯದರ್ಶಿ ಪ್ರಶಾಂತ ಶಾಡಲಕೊಪ್ಪ, ತಾಲೂಕು ಸಹ ಕಾರ್ಯದರ್ಶಿ ಬಿ. ಶಶಿಕುಮಾರ್, ನಗರ ಕಾರ್ಯದರ್ಶಿ ಎಸ್.ಎಂ. ಶರತ್, ಬಜರಂಗದಳ ತಾಲೂಕು ಸಂಚಾಲಕ ರಂಗನಾಥ ಮೊಗವೀರ್, ನಗರ ಸಂಚಾಲಕ ಲೋಕೇಶ್, ಸಹ ಸಂಚಾಲಕ ರಾಘವೇಂದ್ರ, ಕಾರ್ಯಕರ್ತರಾದ ರವಿ ಗುಡಿಗಾರ್, ರಾಘವೇಂದ್ರ, ಅಭಿ, ನವೀನ್, ಪುರಸಭೆ ಉಪಾಧ್ಯಕ್ಷ ಮಧುರಾಯ್ ಜಿ. ಶೇಟ್, ಸದಸ್ಯರಾದ ಎಂ.ಡಿ. ಉಮೇಶ್, ಪ್ರಭು, ಯು. ನಟರಾಜ್, ಬಿಜೆಪಿ ತಾಲೂಕು ಅಧ್ಯಕ್ಷ ಪ್ರಕಾಶ್ ಶಾಡಲಕೊಪ್ಪ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ವೃತ್ತಿಕೊಪ್ಪ, ಅಶೋಕ್ ಶೇಟ್, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನಯ್ ಶೇರ್ವಿ, ತಾಲೂಕು ಅಧ್ಯಕ್ಷ ಅಭಿಷೇಕಗೌಡ ಬೆನ್ನೂರು, ಪ್ರಧಾನ ಕಾರ್ಯದರ್ಶಿಗಳಾದ ರಾಜು ಮಾವಿನಬಳ್ಳಿಕೊಪ್ಪ, ಆಶೀಕ್ ನಾಗಪ್ಪ, ಉಪಾಧ್ಯಕ್ಷ ಸುನೀಲ್ ಬರದವಳ್ಳಿ, ನವೀನ್ ಕಜ್ಜೇರ್, ಮಹೇಶ್ ಸಂಪಗೋಡು, ಭರತ್, ನಮೋ ವೇದಿಕೆ ತಾಲೂಕು ಅಧ್ಯಕ್ಷ ಪಾಣಿ ರಾಜಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಅರುಣ ಪುಟ್ಟನಹಳ್ಳಿ, ವಿಜೇಂದ್ರಗೌಡ ತಲಗುಂದ, ಗಜಾನನರಾವ್ ಉಳವಿ, ಗುರುಪ್ರಸನ್ನಗೌಡ, ಸಂಜೀವ ಆಚಾರ್, ಎಂ.ಕೆ. ಯೋಗೇಶ್, ಶ್ರೀಧರ್ ಆಚಾರ್, ಚಂದ್ರಪ್ಪ ಬರಗಿ, ಗಣಪತಿ ಬಂಕಸಾಣ, ಮೋಹನ್ ಹಿರೇಶಕುನ, ನಿಂಗಪ್ಪಗೌಡ, ಯುವಾ ಬ್ರಿಗೇಡ್ ತಾಲೂಕು ಸಂಚಾಲಕ ಮಹೇಶ್ ಖಾರ್ವಿ, ಮಂಜು ಸೇರಿದಂತೆ ವಿವಿಧ ಹಿಂದೂ ಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ವರದಿ: ಮಧುರಾಮ್, ಸೊರಬ
Discussion about this post