ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಕೇಂದ್ರ ಉಕ್ಕು ಸಚಿವಾಲಯದಿಂದ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಜುಲೈ 4ರಿಂದ 10ರವರೆಗೂ ಐಕಾನಿಕ್ ವೀಕ್ ಆಚರಿಸಲಾಯಿತು.
ಈ ಅಂಗವಾಗಿ, 9, 10, 11 ಮತ್ತು 12ನೆಯ ತರಗತಿಯ ವಿದ್ಯಾರ್ಥಿಗಳಿಗೆ ಕಾರ್ಬನ್ ಡೈಆಕ್ಸೆಡ್ ಹೊರಸೂಸುವಿಕೆಯ ಕಡಿತ ತತ್ಸಮಯದ ಅವಶ್ಯಕತೆ ವಿಷಯದ ಕುರಿತು ಪ್ರಬಂಧ ಬರೆಯುವ ಸ್ಪರ್ಧೆಯನ್ನು ಎಸ್’ಎವಿ ಹೈಸ್ಕೂಲ್ ಮತ್ತು ಪಿಯು ಕಾಲೇಜಿನಲ್ಲಿ ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಆಯೋಜಿಸಲಾಗಿತ್ತು. ಭದ್ರಾವತಿಯ 167 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಯ ವಿಜೇತರಿಗೆ 15ನೇ ಆಗಸ್ಟ್ 2022 ರಂದು ಸ್ವಾತಂತ್ರ್ಯ ದಿನದಂದು ಸಾರ್ವಜನಿಕ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಗುತ್ತದೆ.
ಇನ್ನು, ವಿದ್ಯಾರ್ಥಿಗಳಿಗೆ ಸ್ಟೀಲ್ ಪ್ಲಾಂಟ್ ಕಾರ್ಯನಿರ್ವಹಿಸುವ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಎಸ್’ಎವಿ ಪಿಯು ಕಾಲೇಜಿನ ಸುಮಾರು 300 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ವಿಐಎಸ್‌ಎಲ್ ಕಾರ್ಖಾನೆ VISL Bhadravathi ವೀಕ್ಷಣೆಯಲ್ಲಿ ಪಾಲ್ಗೊಂಡಿದ್ದರು.
Also read: ಬೇರೆಯವರ ಸ್ಟೇಟಸ್ ನೋಡುವ ಬದಲು ನಿಮ್ಮ ಸ್ಟೇಟಸ್ ಹಂಚಿಕೊಳ್ಳುವಂತಾಗಿ: ಶಮಂತ್ ಗೌಡ ಕಿವಿಮಾತು
ಫೋರ್ಜ್ ಪ್ಲಾಂಟ್, ಹೀಟ್ ಟ್ರೀಟ್‌ಮೆಂಟ್ ಶಾಫ್, ರೋಲ್ ಟರ್ನಿಂಗ್ ಶಾಪ್‌ಗೆ ಭೇಟಿ ಕೊಟ್ಟು ಸಂಬಂಧಿಸಿದ ತಂತ್ರಜ್ಞರೊಂದಿಗೆ ವಿದ್ಯಾರ್ಥಿಗಳು ಸಂವಾದ ನಡೆಸಿದರು.
ಉಕ್ಕಿನ ಬಳಕೆಯ ವೀಡಿಯೋಗಳು ಮತ್ತು ಪೋಸ್ಟರ್‌ಗಳನ್ನು ನೌಕರರು ಮತ್ತು ಗುತ್ತಿಗೆ ಕಾರ್ಮಿಕರು ವೀಕ್ಷಿಸಲು ವಿಐಎಸ್‌ಎಲ್ ಇಂಟ್ರಾನೆಟ್ ವೆಬ್‌ಸೈಟ್ ಮತ್ತು ವಾಟ್ಸ್ ಆಪ್ ಗುಂಪುಗಳಲ್ಲಿ ಪ್ರದರ್ಶಿಸಲಾಯಿತು. ಇದಲ್ಲದೆ, ಸಾರ್ವಜನಿಕರ ವೀಕ್ಷಣೆಗೆ ಭದ್ರಾವತಿ ಪಟ್ಟಣದ ಬಸ್ ನಿಲ್ದಾಣದ ಮುಂಭಾಗ ಡಿಜಿಟಲ್ ಡಿಸ್ಪ್ಲೇ ಬೋರ್ಡ್‌ನಲ್ಲಿ ಪ್ರದರ್ಶಿಸಲಾಯಿತು.
ವಿಐಎಸ್‌ಎಲ್‌ನ ಉದ್ಯೋಗಿಗಳು ಮತ್ತು ಗುತ್ತಿಗೆ ಕಾರ್ಮಿಕರು ಐಕಾನಿಕ್ ವೀಕ್ ಆಚರಣೆಯ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post