ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ಸಾಮಾನ್ಯವಾಗಿ ಹುಟ್ಟು ಹಬ್ಬವನ್ನು ಬಡವರು ದೇವಸ್ಥಾನಗಳಲ್ಲಿ ಉದ್ಯಾನವನಗಳಲ್ಲಿ ಮಂದಿರಗಳಲ್ಲಿ ಸಣ್ಣ ಸಣ್ಣ ಸಭಾಂಗಣದಲ್ಲಿ ಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳುತ್ತಾರೆ. ಇನ್ನು ಶ್ರೀಮಂತರು ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ಪಬ್, ಬಾರ್, ರೆಸಾರ್ಟ್ ಗಳಲ್ಲಿ ತಮ್ಮ ಹುಟ್ಟುಹಬ್ಬವನ್ನು ವೈಭವದಿಂದ ಆಚರಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಪ್ರಗತಿಪರ ರೈತ ಮಾವಿನ ಗಿಡಗಳನ್ನು ನೆಡುವುದರ ಮೂಲಕ ಪರಿಸರದ ಮಧ್ಯೆ ತಮ್ಮ ಕುಟುಂಬದೊಂದಿಗೆ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ.
ತಾಲೂಕಿನ ದೇವರ ಮರುಕುಂಟೆ ಗ್ರಾಮದ ಪ್ರಗತಿಪರ ರೈತ ಆರ್. ಎ. ದಯಾನಂದಮೂರ್ತಿ, ತಮ್ಮ 54ನೇ ವರ್ಷದ ಜನ್ಮ ದಿನಾಚರಣೆಯನ್ನು ಸರಳವಾಗಿ ಆಚರಿಸಿಕೊಂಡು ನೂರಾರು ರೈತರಿಗೆ ಮಾದರಿಯಾಗಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡ ಅವರು, ಪ್ರತಿ ವರ್ಷವೂ ಸಹ ಪ್ರಕೃತಿಯ ಮಡಿಲಲ್ಲಿ ಗಿಡ ಹಾಕುವುದರ ಮೂಲಕ ತನ್ನ ಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.

Also read: ಅಭಿವೃದ್ಧಿ ಯೋಜನೆಗಳನ್ನು ಉಪಯೋಗಿಸುವ ಕೆಲಸವಾಗಬೇಕು: ಸಂಸದ ರಾಘವೇಂದ್ರ ಸಲಹೆ
ಒಬ್ಬ ಮನುಷ್ಯ ಒಂದು ಸಸಿ ನೆಟ್ಟು ಪೋಷಣೆ ಮಾಡಿದರೆ ಸಾಕು ನಮ್ಮ ದೇಶದಲ್ಲಿ ಎಷ್ಟು ಜನಸಂಖ್ಯೆ ಇದೆಯೋ ಅಷ್ಟು ಗಿಡಗಳು ಬೆಳೆಯುತ್ತವೆ. ನಾವು ಅದೆಷ್ಟೋ ಬಾರಿ ನೋಡಿದ್ದೇವೆ ಒಂದು ಗಿಡ ಬೆಳೆದರೆ ಅದರ ನೆರಳಿನಲ್ಲಿ ಸಾವಿರಾರು ವಾಹನಗಳು ನಿಲ್ಲಿಸುತ್ತಾರೆ. ಆದರೆ ಗಿಡ ನೆಡುವ ಗೋಜಿಗೆ ಯಾರು ಹೋಗುವುದಿಲ್ಲ. ಆದುದರಿಂದ ಪ್ರತಿಯೊಬ್ಬರೂ ಗಿಡಮರಗಳನ್ನು ಬೆಳೆಸಿ, ಪ್ರಕೃತಿಯನ್ನು ಉಳಿಸಿ ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post