ಕಲ್ಪ ಮೀಡಿಯಾ ಹೌಸ್ | ಮದ್ರಾಸ್ |
ಯಾವುದೇ ಪತ್ನಿ ತನ್ನ ಮಂಗಳಸೂತ್ರ/ತಾಳಿಯನ್ನು ಧರಿಸದೇ ತೆಗೆದಿರಿಸಿದರೆ ಅದು ಪತಿಗೆ ನೀಡುವ ಅತಿಯಾದ ಮಾನಸಿಕ ಕ್ರೌರ್ಯವಾಗುತ್ತದೆ ಎಂದು ಮದ್ರಾಸ್ ಹೈಕೋರ್ಟ್ Madras High Court ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಈರೋಡಿನ ವೈದ್ಯರೊಬ್ಬರ ವಿಚ್ಛೇದನ ಪ್ರಕರಣದಲ್ಲಿ ಈ ತೀರ್ಪು ನೀಡಿರುವ ನ್ಯಾ.ವಿ.ಎಂ. ವೇಲುಮಣಿ ಹಾಗೂ ಎಸ್. ಸೌಂದರ್ ಅವರನ್ನೊಳಗೊಂಡ ಪೀಠ, ಪತ್ನಿ ತನ್ನ ತಾಳಿಯನ್ನು ತೆಗೆದಿರಿಸುವುದು ಪತಿಗೆ ನೀಡಬಹುದಾದ ಮಾನಸಿಕ ಹಿಂಸೆಯಾಗುತ್ತದೆ ಎಂದಿದೆ.
ಇದೇ ವೇಳೆ ಪತ್ನಿ ತನ್ನ ಮಂಗಳಸೂತ್ರವನ್ನು ತೆಗೆದಿಸಿರುವ ಮೂಲಕ ವೈವಾಹಿಕ ಸಂಬಂಧ ಮುಂದುವರೆಸುವ ಇಚ್ಛೆಯಿಲ್ಲ ಎಂಬುದನ್ನು ಪತ್ನಿ ಸೂಚಿಸಿದಂತಾಗುತ್ತದೆ ಎಂಬ ಅಭಿಪ್ರಾಯವನ್ನು ನ್ಯಾಯಾಲಯ ವ್ಯಕ್ತಪಡಿಸಿದೆ.
Also read: 3 ತಿಂಗಳ ಶಿಶುವನ್ನು ಟಬ್’ನಲ್ಲಿಟ್ಟುಕೊಂಡು ಪ್ರವಾಹದ ನೀರಿನಲ್ಲೇ ತೆರಳಿದ ವ್ಯಕ್ತಿ-ವೀಡಿಯೋ ವೈರಲ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post