ಕಲ್ಪ ಮೀಡಿಯಾ ಹೌಸ್ | ಉಡುಪಿ |
ಮಕ್ಕಳು ಇಷ್ಟಪಟ್ಟು ಚಾಕ್ಲೆಟ್ ತಿನ್ನುತ್ತಾರೆ. ಆದರೆ ಇಲ್ಲಿ ಚಾಕ್ಲೆಟ್ ರ್ಯಾಪರ್ ಬಾಲಕಿಯ ಸಾವಿಗೆ ಕಾರಣವಾಗಿದೆ.
ಹೌದು… ಚಾಕ್ಲೆಟ್ ಕವರ್ ನುಂಗಿ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ಬಾಲಕಿಯನ್ನು ಸಮನ್ವಿ (6) ಎಂದು ಗುರುತಿಸಲಾಗಿದೆ.
ಬೈಂದೂರು ತಾಲೂಕಿನ ಬವಳಾಡಿ ಮೂಲದ ನಿವಾಸಿ. ಸಮನ್ವಿ ಉಪ್ಪುಂದದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಳೆ.
ಶಾಲೆಯ ಬಸ್ಸಿಗೆ ಕಾಯುತ್ತಿರುವ ಸಮಯದಲ್ಲಿ ಸಮನ್ವಿ ಪ್ಲಾಸ್ಟಿಕ್ ಕವರ್ ಸಮೇತ ಚಾಕ್ಲೆಟ್ ತಿಂದಿದ್ದಾಳೆ. ಹೀಗೆ ತಿಂದ ಚಾಕ್ಲೆಟ್ ಬಾಲಕಿ ಗಂಟಲಲ್ಲಿ ಸಿಲುಕಿಕೊಂಡು ಉಸಿರುಗಟ್ಟಿ ಶಾಲಾ ವಾಹನದಲ್ಲಿಯೇ ಕೊನೆಯುಸಿರೆಳೆದಿದ್ದಾಳೆ.
ಈ ಸಂಬಂಧ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Also read: ಚಾಮರಾಜನಗರ: ತಂಗಳು ಬಿರಿಯಾನಿ ಸೇವಿಸಿ 25 ಕಾರ್ಮಿಕರು ಅಸ್ವಸ್ಥ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post