ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಪ್ರಸಕ್ತ ಸಾಲಿನ ಆಯ ವ್ಯಯದಲ್ಲಿ ಜಿಲ್ಲೆಗೆ ಜವಳಿ ಪಾರ್ಕ್ ಘೋಷಣೆ ಮಾಡಲಾಗಿದೆ. ನೇಕಾರರು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೈಮಗ್ಗ,ಜವಳಿ,ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ Minister Shankara Patil Munenakoppa ಹೇಳಿದರು.
ಹುಬ್ಬಳ್ಳಿಯ ನೇಕಾರ ನಗರದಲ್ಲಿ ಇಂದು ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಸ್ಥಾಪನೆಯಾದ ಹುಬ್ಬಳ್ಳಿ ವಿದ್ಯುತ್ ಮಗ್ಗ ಉತ್ಪಾದಕರ ಕಂಪನಿ ಉದ್ಘಾಟಿಸಿ ಅವರು ಮಾತನಾಡಿದರು.
ನೇಕಾರ ಸಮ್ಮಾನ್ ಯೋಜನೆ ಮೂಲಕ ಪ್ರತಿಯೊಬ್ಬ ನೇಕಾರರಿಗೆ 5 ಸಾವಿರ ರೂ. ನೆರವು ನೀಡಲಾಗುತ್ತಿದೆ. ನೇಕಾರರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಸಬ್ಸಿಡಿ ದರದಲ್ಲಿ ದಾರವನ್ನು ಒದಗಿಸಲಾಗುತ್ತಿದೆ. ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ನೇಕಾರರ ಉತ್ಪನ್ನಗಳ ಮಾರಾಟಕ್ಕೆ ಮಳಿಗೆಯನ್ನು ನೀಡಲಾಗಿದೆ. ಜವಳಿ ನೀತಿಯ ಉಪಯೋಗವನ್ನು ನೇಕಾರರು ಪಡೆದುಕೊಳ್ಳಲು ಮುಂದಾಗಬೇಕು. ರಾಜ್ಯಕ್ಕೆ ಮೆಗಾ ಟೆಕ್ಸಟೈಲ್ ಪಾರ್ಕ್ ಬಂದರೆ ದೊಡ್ಡ ಪ್ರಮಾಣದಲ್ಲಿ ಬದಲಾವಣೆಯಾಗಲಿದೆ ಎಂದರು.
Also read: ಕುದರಿಮೋತಿ ಹುಡುಗನ ‘ಮಾರಿಗಡ ’ ಚಲನಚಿತ್ರದ ಧ್ವನಿಸುರುಳಿ ಬಿಡುಗಡೆ
ನೇಕಾರರನ್ನು ಉಳಿಸಿ ಬೆಳೆಸುವ ಕೆಲಸಗಳಾಗಬೇಕು. ಅವರ ಕುಂದುಕೊರತೆ ಹಾಗೂ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿದೆ. ರಸ್ತೆ, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಸೇರಿದಂತೆ ಇತರ ಮೂಲ ಸೌಕರ್ಯಗಳು ನೇಕಾರ ಕಾಲೋನಿಗೆ ಒದಗಿಸಿ, ಮಾದರಿ ನೇಕಾರ ಕಾಲೋನಿ ನಿರ್ಮಾಣಕ್ಕೆ ಶ್ರಮವಹಿಸಲಾಗುವುದು. ಜವಳಿ ಇಲಾಖೆಯ ಮಾಹಿತಿಗಳು ನೇಕಾರರಿಗೆ ತಲುಪಬೇಕು. ಉತ್ಪಾದನೆ ಮಾಡಿದ ಸೀರೆಗಳನ್ನು ತ್ವರಿತವಾಗಿ ಮಾರಾಟ ಮಾಡಬೇಕು. ಹುಬ್ಬಳ್ಳಿ ಸೀರೆ ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ದೇವೇಂದ್ರ ಚುಂಚ್ಯಾ ಅವರ ಬಾಲಾಜಿ ಟೆಕ್ಸಟೈಲ್ಸ್ ಹಾಗೂ ಹನಮಂತ ಪೂಜಾರಿ ಅವರ ಮಾರುತಿ ಟೆಕ್ಸಟೈಲ್ಸ್ ಕೈಮಗ್ಗ ಕಾರ್ಖಾನೆಗಳಿಗೆ ಭೇಟಿ ನೀಡಿ, ಸೀರೆ ನೇಯ್ಗೆಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಪಾಲಿಕೆ ಸದಸ್ಯೆ ಶಾಂತಕ್ಕ ಹಿರೇಮಠ, ಕೈಮಗ್ಗ ಮತ್ತು ಜವಳಿ ಇಲಾಖೆ ಜಂಟಿ ನಿರ್ದೇಶಕ ಎನ್.ಟಿ.ನೆಗಳೂರ, ಉಪನಿರ್ದೇಶಕ ಕೀರ್ತಪ್ಪ ಗೋಟೂರ, ಜವಳಿ ಪ್ರವರ್ಧನಾ ಅಧಿಕಾರಿ ಅಶೋಕ ಸುರಪುರ,ಹುಬ್ಬಳ್ಳಿ ವಿದ್ಯುತ್ ಮಗ್ಗ ಉತ್ಪಾದಕರ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಗೋಪಾಲ ಪೂಜಾರ, ಕಾರ್ಯನಿರ್ವಾಹಕ ಅಧಿಕಾರಿ ಸೌಂದರ್ಯ, ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post