ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಹಕ್ಕಿನ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೇವೆಯೊ ಅಷ್ಟೇ ಕರ್ತವ್ಯ ದ ಬಗ್ಗೆಯೂ ಆಸ್ಥೆ ಮೂಡಿಸಿಕೊಳ್ಳಬೇಕು ಎಂದು ರಾಜ್ಯ ಜೀವವೈವಿಧ್ಯ ಪ್ರಶಸ್ತಿ ಪುರಸ್ಕೃತ ಶ್ರೀಪಾದ ಬಿಚ್ಚುಗತ್ತಿ ಹೇಳಿದರು.
ಚಂದ್ರಗುತ್ತಿ ಹೋಬಳಿ ಮುಟಗುಪ್ಪೆ ಗ್ರಾಪಂ ವ್ಯಾಪ್ತಿಯ ಯಲಸಿ ಗ್ರಾಮದ ಅಮೃತಸರೋವರ ಪ್ರದೇಶದಲ್ಲಿ ಗ್ರಾಪಂ ಆಡಳಿತ ಮತ್ತು ಯಲಸಿ ಗ್ರಾಮಸ್ಥರು ಆಯೋಜಿಸಿದ್ದ ೭೬ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು.

Also read: ಗಮನಿಸಿ! ಆ.18ರಂದು ಶಿವಮೊಗ್ಗದ ಜ್ಯೋತಿನಗರ ಸುತ್ತಮುತ್ತ ವಿದ್ಯುತ್ ಇರುವುದಿಲ್ಲ
ಆಡಳಿತಾಧಿಕಾರಿ ದೊರೆರಾಜ್, ಸಾಂಘಿಕ ವಾಗಿ ಗ್ರಾಮಾಭಿವೃದ್ಧಿಯತ್ತ ನಮ್ಮ ಚಿಂತನೆಗಳು ಸಾಗಲಿ ಎಂದರು.

ಗ್ರಾಪಂ ಕಾರ್ಯದರ್ಶಿ ಸುಧಾಕರ, ಅಭಿಯಂತರ ರಮೇಶ್, ಸರಿತಾ, ಗ್ರಾಪಂ ಸಿಬ್ಬಂದಿ , ಶ್ರೀಧರ, ಬೊಮ್ಮಪ್ಪ, ಗ್ರಾಮಸಮಿತಿ ಅಧ್ಯಕ್ಷ ಧರ್ಮಪ್ಪ ಕಾಳಿ, ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.










Discussion about this post