ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಭಾರತದ ವಿಚಾರದಲ್ಲಿ ಸುಳ್ಳು ಮಾಹಿತಿ ಪ್ರಚಾರ ಮಾಡುತ್ತಿದ್ದ 8 ಯೂಟ್ಯೂಬ್ ಚಾನಲ್’ಗಳಲ್ಲಿ ಕೇಂದ್ರ ಸರ್ಕಾರ ಬ್ಲಾಕ್ ಮಾಡಿದೆ.
ಈ ಕುರಿತಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಾಹಿತಿ ಪ್ರಕಟಿಸಿದ್ದು, ದೇಶದ ರಾಷ್ಟ್ರೀಯ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವುದು ಹಾಗೂ ವಿದೇಶಿ ಸಂಬಂಧಗಳ ಕುರಿತಾಗಿ ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡುತ್ತಿದ್ದ ಏಳು ಭಾರತ ಹಾಗೂ ಒಂದು ಪಾಕಿಸ್ಥಾನ ಮೂಲದ ಯೂಟ್ಯೂಬ್ ಚಾನಲ್’ಗಳನ್ನು ತಂತ್ರಜ್ಞಾನ ನಿಯಮಗಳು ನಿಯಮಗಳು-2021ರ ಅಡಿಯಲ್ಲಿ ನಿರ್ಬಂಧಿಸಲಾಗಿದೆ.
ಎಷ್ಟಿತ್ತು ವೀಕ್ಷಕರ ಸಂಖ್ಯೆ?
ಈಗ ಬ್ಲಾಕ್ ಮಾಡಲಾಗಿರುವ ಯೂಟ್ಯೂಬ್ ಚಾನಲ್’ಗಳು 114 ಕೋಟಿಗೂ ಹೆಚ್ಚು ವೀಕ್ಷಣೆ ಹಾಗೂ 85.73 ಲಕ್ಷ ಚಂದಾದಾರರನ್ನು ಹೊಂದಿವೆ. ಇವುಗಳು ಸುಳ್ಳು ವಿಚಾರಗಳನ್ನು ಹೇಳುವ ಮೂಲಕ ಹಣ ಗಳಿಸುತ್ತಿದ್ದವು ಎಂದು ವರದಿಯಾಗಿದೆ.
ಯಾವ ಕಾರಣಕ್ಕಾಗಿ ನಿರ್ಬಂಧ?
ಈಗ ಬ್ಲಾಕ್ ಆಗಿರುವ ಯೂಟ್ಯೂಬ್ ಚಾನಲ್’ಗಳು ಭಾರತ ದೇಶದ ಭದ್ರತೆಗೆ ಧಕ್ಕೆ ತರುವಂತಹ ವಿಚಾರಗಳಲ್ಲಿ ಸುಳ್ಳು ಮಾಹಿತಿಯನ್ನು ಪ್ರಕಟಿಸುತ್ತಿದ್ದವು. ಭಾರತೀಯ ಸಶಸ್ತ್ರ ಪಡೆಗಳು ಮತ್ತು ಜಮ್ಮು ಮತ್ತು ಕಾಶ್ಮೀರದಂತಹ ವಿವಿಧ ವಿಚಾರಗಳ ಬಗ್ಗೆ ನಕಲಿ ಸುದ್ದಿಗಳನ್ನು ಪ್ರಸಾರ ಮಾಡಲು ಯೂಟ್ಯೂಬ್ ಚಾನೆಲ್’ಗಳನ್ನು ಬಳಸಲಾಗಿದೆ. ರಾಷ್ಟ್ರೀಯ ಭದ್ರತೆ ಮತ್ತು ವಿದೇಶಗಳೊಂದಿಗಿನ ಭಾರತದ ಸ್ನೇಹ ಸಂಬಂಧಗಳ ದೃಷ್ಟಿಕೋನದಿಂದ ಈ ವಿಚಾರಗಳು ಸೂಕ್ಷ್ಮ ಮತ್ತು ಸಂಪೂರ್ಣ ಸುಳ್ಳು ಎಂಬುದನ್ನು ಗಮನಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಅಲ್ಲದೇ, ಭಾರತ ಸರ್ಕಾರದಿಂದ ಧಾರ್ಮಿಕ ಕಟ್ಟಡಗಳನ್ನು ಕೆಡವುದು, ಧಾರ್ಮಿಕ ಹಬ್ಬಗಳ ಆಚರಣೆ ನಿಷೇಧ, ಭಾರತದಲ್ಲಿ ಧಾರ್ಮಿಕ ಯುದ್ಧದ ಘೋಷಣೆಯ ವಿಚಾರಗಳನ್ನು ಪ್ರಸಾರ ಮಾಡುವ ಮೂಲಕ ಭಾರತದಲ್ಲಿ ಕೋಮು ಸೌಹಾರ್ದತೆ ಕದಡಿ, ಸಾರ್ವಜನಿಕ ಶಾಂತಿ ಹಾಗೂ ಸುವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನಗಳನು ಮಾಡುತ್ತಿದ್ದವು ಎಂದು ತಿಳಿಸಿದೆ.
ಯಾವ ಚಾನಲ್’ಗಳು ಬ್ಲಾಕ್ ಆಗಿವೆ?
Loktantra TV, U&V TV, AM Razvi, Gouravshali Pawan Mithilanchal, SeeTop5TH, Sarkari Update ಮತ್ತು Sab Kuch Dekho ಮತ್ತು ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿದ್ದ News ki Dunya ಎಂಬ ಹೆಸರಿನ ಯೂಟ್ಯೂಬ್ ಚಾನೆಲ್’ಗಳನ್ನು ನಿರ್ಬಂಧಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post