ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಶಿವಮೊಗ್ಗ |
ದೇಶದ ಹಲವು ರಾಜ್ಯಗಳಲ್ಲಿ ನಡೆದಿರುವಂತೆ ಶಿವಮೊಗ್ಗ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪಿಎಫ್’ಐ PFI ಮೇಲೆ ಎನ್’ಐಎ NIA ಹಾಗೂ ಇಡಿ ದಾಳಿ ನಡೆಸಿದ್ದು, ಹೆಡೆಮುರಿ ಕಟ್ಟಲು ಮುಂದಾಗಿದೆ.
ಬೆಂಗಳೂರಿನ 5 ಕಡೆ, ಮಂಗಳೂರು, ಉಪ್ಪಿನಂಗಡಿ, ಶಿವಮೊಗ್ಗ, ಕೊಪ್ಪಳ, ಕಲಬರಗಿ, ಮೈಸೂರು, ಶಿರಸಿ ಸೇರಿದಂತೆ ಹಲವು ಕಡೆಗಳಲ್ಲಿ ದಾಳಿ ನಡೆಸಿ, ದಾಖಲೆ, ಎಲೆಕ್ಟಾçನಿಕ್ ವಸ್ತುಗಳನ್ನು ಸೀಜ್ ಮಾಡಲಾಗಿದೆ. ಅಲ್ಲದೇ, ಶಿವಮೊಗ್ಗ, ಮೈಸೂರು, ಕೊಪ್ಪಳ, ಶಿರಸಿ ಸೇರಿದಂತೆ ಹಲವು ಕಡೆಗಳಲ್ಲಿ ಸಂಬAಧಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಇನ್ನು, ಮೈಸೂರಿನಲ್ಲೂ ಸಹ ಎನ್’ಐಎ ಅಧಿಕಾರಿಗಳು ದಾಳಿ ನಡೆಸಿದ್ದು, ಪಿಎಫ್’ಐ ಮಾಜಿ ಮುಖಂಡ ಮೌಲಾನಾ ಶಾಹಿದ್ ಎನ್ನುವವರನ್ನು ವಶಕ್ಕೆ ಪಡೆದು, ಬೆಂಗಳೂರಿಗೆ ಕರೆದುಕೊಂಡು ಹೋಗಿ, ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.











Discussion about this post