ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಒಂದು ಬಾರಿ ಕೃಷ್ಣನಿಗೆ ಯಶೋಧಾದೇವಿಯು ತನ್ನ ಎದೆಹಾಲನ್ನು ಉಣಿಸುತ್ತಿದ್ದ ಸಂದರ್ಭದಲ್ಲಿ, ಒಲೆಯ ಮೇಲೆ ಇಟ್ಟಿದ್ದ ಹಾಲು ಎಲ್ಲಿ ಉಕ್ಕುತ್ತದೋ, ಎಂದು ಕೃಷ್ಣನನ್ನು ಕೆಳಗೆ ಮಲಗಿಸಿ ಹಾಲಿನತ್ತ ಧಾವಿಸಿದಳು. ಯಶೋಧೆಗೆ ವಸ್ತುತಸ್ತು ಕೃಷ್ಣನಲ್ಲಿ ಪುತ್ರಪ್ರೇಮವಿದ್ದರೂ ಕೂಡ, ಈ ಭೋಗವಿಷಯದಲ್ಲಿ ವೈರಾಗ್ಯವಿಲ್ಲ ಎಂಬುದನ್ನು ಕೃಷ್ಣನು ತೋರಿಸುತ್ತಾನೆ. ಇದು ಹೇಗೆ ಸೂಚಿತವಾಗುತ್ತದೆ? ಎಂಬುದನ್ನು ಮಹಾಭಾರತದಲ್ಲಿ ಬರುವ ಸಂದರ್ಭದ ಮೂಲಕವೇ ಅರಿಯಬಹುದು.
ಕೃಷ್ಣನ ಚೇಷ್ಟೆಯಿಂದ ಕುಪಿತಗೊಂಡ ತಾಯಿಯು ಕೃಷ್ಣನನ್ನು ಒಂದು ಹಗ್ಗದಿಂದ ಕಟ್ಟಲು ಪ್ರಯತ್ನಿಸುತ್ತಾಳೆ. ಆದರೆ ಆ ಹಗ್ಗವು ಎರಡು ಅಂಗುಲ ಕಡಿಮೆಯಾಗುತ್ತದೆ. ಆಗ ಯಶೋಧೆಯು ಮತ್ತೆ ಹೆಚ್ಚು ಹಗ್ಗವನ್ನು ಸೇರಿಸಿ ಕಟ್ಟುತ್ತಾಳೆ. ಆಗಲೂ ಪುನಃ ಎರಡು ಅಂಗುಲ ಕಡಿಮೆಯಾಗುತ್ತದೆ. ಹೀಗೆ ಯಶೋಧೆಯು ಎಷ್ಟು ಉದ್ದ ಹಗ್ಗವನ್ನು ಸೇರಿಸಿದಳೂ ಹಗ್ಗವೂ ಕಡಿಮೆಯಾಗುತ್ತದೆ. ಆದರೆ ಕೊನೆಗೆ ಯಶೋಧೆಯ ಮೇಲಿನ ಕಾರುಣ್ಯದಿಂದ ತನ್ನ ತಾಯಿ ಕಟ್ಟಿದ ಹಗ್ಗದಿಂದಲೇ ಬಂಧಿಯಾದ.
ಇಲ್ಲಿ ನಮಗೆ ಮೂಡುವ ಪ್ರಶ್ನೆ ಎಂದರೆ, ಮೊದಲು ಹಗ್ಗವು ಎರಡು ಅಂಗುಲ ಕಡಿಮೆಯಾಗುತ್ತಿದ್ದುದು ಏಕೆ? ಅನಂತರ ಕೃಷ್ಣನು ಬಂಧಿಯಾಗಿದ್ದಾದರೂ ಏಕೆ
ಅದಕ್ಕೆ ಉತ್ತರ: ಯಶೋಧೆಗೆ ದೇವರಲ್ಲಿ (ಕೃಷ್ಣನಲ್ಲಿ) ಅತಿಯಾದ ಭಕ್ತಿ (ಪ್ರೇಮ) ಇದ್ದರೂ ಕೂಡ ಅವಳಿಗೆ ಭಗವದ್ವಿಷಯದ ಜ್ಞಾನ ಹಾಗೂ ಭೋಗ ವಿಷಯದಲ್ಲಿ ವೈರಾಗ್ಯ ಈ ಎರಡೂ ಕಡಿಮೆ ಎಂಬುದನ್ನು ತೋರಿಸಲಿಕ್ಕೋಸ್ಕರವೇ ಎರಡು ಅಂಗುಲವನ್ನು ಕಡಿಮೆ ಮಾಡಿದ. ಇನ್ನು ಕೊನೆಗೆ ತಾಯಿ ಕಟ್ಟಿದ ಹಗ್ಗಕ್ಕೆ ಬಂಧಿಯಾಗಿ ಮಕ್ಕಳು ಯಾವತ್ತೇ ಆದರೂ ತಾಯಿಯ ವಶದಲ್ಲಿರಬೇಕು ಅಂದರೆ ತಂದೆ-ತಾಯಿಗಳ ಮಾತನ್ನು ತಿರಸ್ಕರಿಸಬಾರದು ಎಂಬುದನ್ನು ತೋರಿಸಲಿಕ್ಕೋಸ್ಕರ ತಾನು ವಶದಲ್ಲಿದ್ದವನಂತೆ ತೋರಿಸಿದ.
(ನಾಳಿನ ಲೇಖನ: ಯುದ್ಧಕ್ಕೆ ಧೃತರಾಷ್ಟ್ರನ ಸಮ್ಮತಿ ಇತ್ತೇ ???
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post