ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಹಿಂದೆ ಒಮ್ಮೆ ಸಿ.ಎಂ. ಇಬ್ರಾಹಿಂಗಾಗಿ ಹಾಲಿ ಶಾಸಕರಾಗಿದ್ದ ಸಂಗಮೇಶ್’ಗೆ ನಾನೇ ಟಿಕೇಟ್ ತಪ್ಪಿಸಿದ್ದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ವಿಷಾದ ವ್ಯಕ್ತಪಡಿಸಿದ್ದಾರೆ.
ಶಾಸಕ ಬಿ.ಕೆ. ಸಂಗಮೇಶ್ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂದು ಅನಿವಾರ್ಯ ಕಾರಣ ಹಾಗೂ ಒತ್ತಡಗಳಿಂದಾಗಿ ಸಂಗಮೇಶ್’ಗೆ ಟಿಕೇಟ್ ತಪ್ಪಿಸಿದ್ಧೆ. ಅಂದು ಸಂಗಮೇಶ್’ಗೆ ಟಿಕೇಟ್ ನೀಡಿದ್ದರೆ ಖಂಡಿತಾ ಗೆಲ್ಲುತ್ತಿದ್ದರು. ಆದರೆ, ಇಬ್ರಾಹಿಂ ಸೋಲುತ್ತಾರೆ ಎಂದು ಗೊತ್ತಿದ್ದರೂ ಟಿಕೇಟ್ ನೀಡುವುದು ಅನಿವಾರ್ಯವಾಗಿತ್ತು ಎಂದರು.
ಅನಿವಾರ್ಯ ಕಾರಣಗಳಿಂದ ನಾನೇ ಟಿಕೇಟ್ ತಪ್ಪಿಸಿದ್ದು ಎಂದು ಗೊತ್ತಿದ್ದರೂ ಸಂಗಮೇಶ್ ಒಂದು ಬಾರಿಯೂ ಸಹ ನನ್ನ ಮೇಲೆ ಸಿಟ್ಟು ಮಾಡಿಕೊಳ್ಳಲಿಲ್ಲ. ಅಂತಹ ಒಳ್ಳೆಯ ವ್ಯಕ್ತಿತ್ವದವರು ಅವರು ಎಂದು ಪ್ರಶಂಸಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post