ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಲೋಕಾರ್ಪಣೆಗೊಳಿಸಿದ ನಂತರ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ರಾಗಿ(ಸಿರಿಧಾನ್ಯ) ಹಾಗೂ ಕೃಷ್ಣ ಮಾರ್ಗದ ಕುರಿತಾಗಿ ಪ್ರಸ್ತಾಪ ಮಾಡಿದ್ದು ವಿಶೇಷವಾಗಿತ್ತು.
ಕನಕದಾಸ ಜಯಂತಿಯಾದ ಇಂದು ಕರ್ನಾಟಕಕ್ಕೆ ಭೇಟಿ ನೀಡಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಮನ ಸಲ್ಲಿಸಿರುವುದು ನಮ್ಮ ಪುಣ್ಯವಾಗಿದೆ ಎಂದರು.
ಕುಲಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲವೆನಾದರು ಬಲ್ಲಿರಾ ಎಂದು ಜಾತಿ ಬೇಧ ಮಾಡಬೇಡಿ ಎಂದು ಅಂದಿನ ಕಾಲದಲ್ಲೇ ಸಂದೇಶ ಸಾರಿದ ಮಹಾನ್ ಸಂತ ಕನಕದಾಸರು ಎಂದು ಪ್ರಧಾನಿ ಬಣ್ಣಿಸಿದರು.
ಸಾಮಾಜಿಕ ಅಸಮಾನತೆಯನ್ನು ಕೊನೆಗಾಣಿಸಿ ಎಂದು ರಾಗಿಯ ಮಹತ್ವವನ್ನು ಸಾರಿದ ಕನಕದಾಸರು, ಕೃಷ್ಣ ಮಾರ್ಗವನ್ನೂ ಸಹ ದೇಶಕ್ಕೆ ಬೋಧಿಸಿದ್ದಾರೆ. ಇವರ ಸಂದೇಶವನ್ನು ನಾವೆಲ್ಲರೂ ಪಾಲಿಸಬೇಕಿದೆ ಎಂದು ಕರೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post