ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಇಲ್ಲಿನ ಗಾಂಧಿ ವೃತ್ತದ ಬಳಿ ಎರಡು ಕೋಮಿನ ಯುವಕರ ನಡುವೆ ಆರಂಭಗೊಂಡ ವಾಗ್ವಾದ ಗಲಭೆಗೆ ತಿರುಗಿರುವ ಘಟನೆ ಇಂದು ಸಂಜೆ ನಡೆದಿದೆ.
ಇಂದು ಸಂಜೆ ಗಾಂಧಿ ವೃತ್ತದಲ್ಲಿ ಹರೀಶ್, ಗೌತಮ್ ಮತ್ತು ಜಹೀರ್ ನಡುವೆ ಮಾತಿನ ಚಕಮಕಿ ನಡೆದಿದೆ.. ಕೆಲ ತಿಂಗಳ ಹಿಂದೆ ಗೌತಮ್ ಹಾಕಿದ್ದ ಸ್ಟೇಟಸ್ ಗೆ ಜಹೀರ್ ಪ್ರತಿಕ್ರಿಯೆ ನೀಡಿದ್ದು ಗಲಾಟೆಗೆ ಕಾರಣ ಎನ್ನಲಾಗಿದೆ.
ಹರೀಶ್ ಮತ್ತು ಗೌತಮ್ ಇಬ್ಬರನ್ನು ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಈ ವೇಳೆ ಅನ್ಯ ಕೋಮಿನ ಯುವಕರಿಗೂ ಗಾಯಗಳಾಗಿವೆ. ಇವರನ್ನೆಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮತ್ತೊಂದು ಘಟನೆಯಲ್ಲಿ, ಭದ್ರಾವತಿಯ ಸರ್ಕಾರಿ ಆಸ್ಪತ್ರೆಯ ಮುಂದೆ ಕೆಲವು ಸಾಕುಪ್ರಾಣಿಗಳು (ಯಾರದು ಎಂದು ಗುರುತಿಸಿ) ರಿಜ್ವಾನ್ ಎಂಬಾತನ ಕೈಗೆ ಚಾಕುವಿನಿಂದ ಇರಿದಿದ್ದಾರೆ.. ಈ ಎಲ್ಲಾ ಘಟನೆಗಳ ಮೇಲೆ ಭದ್ರಾವತಿ ಪೊಲೀಸರು ಕೇಸ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ವಿಷಯ ತಿಳಿದಾಕ್ಷಣ ಎಚ್ಚೆತ್ತ ಪೊಲೀಸರು ಆಸ್ಪತ್ರೆಗೆ ಧಾವಿಸಿದ್ದಾರೆ. ಆಸ್ಪತ್ರೆ ಬಳಿಯಲ್ಲಿ ಸೇರಿದ್ದ ಉದ್ರಿಕ್ತ ಗುಂಪನ್ನು ಪೊಲೀಸರು ಚದುರಿಸಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಈ ಘಟನೆಗೆ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ.
ಸಾರ್ವಜನಿಕರು ಯಾವುದೇ ವದಂತಿಗೆ ಕಿವಿಗೊಡದೆ ಶಾಂತಿ ಕದಡದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕಿದೆ.
ಸುದ್ಧ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post