ಕಲ್ಪ ಮೀಡಿಯಾ ಹೌಸ್ | ಪುಣೆ |
ಭಾರತವು ಪ್ರಖ್ಯಾತ ಪ್ರೋ ಸ್ಟೇಜ್ ಎಲಿಟ್ ರೇಸ್ ಫಾರ್ ಮೆನ್ ಅಂತರರಾಷ್ಟ್ರೀಯ ಸೈಕ್ಲಿಂಗ್ ಸ್ಪರ್ಧೆ ಮತ್ತು ಒಲಿಂಪಿಕ್ ಅರ್ಹತಾ ಅಂಕಗಳ ರೇಸ್ ಆಯೋಜನೆ ಹಕ್ಕುಗಳನ್ನು ಭಾರತ ಯಶಸ್ವಿಯಾಗಿ ಪಡೆದುಕೊಂಡಿದೆ.
ಈ ಸ್ಪರ್ಧೆ ‘ಪುಣೆ ಗ್ರ್ಯಾಂಡ್ ಟೂರ್ #PGT 2026’ ಎಂಬ ಹೆಸರಿನಲ್ಲಿ ನಡೆಯಲಿದ್ದು, ಇದು ಭಾರತದಲ್ಲಿ ನಡೆಯುವ ಮೊದಲ ಯೂನಿಯನ್ ಸೈಕ್ಲಿಸ್ಟ್ ಇಂಟರ್ನ್ಯಾಷನಲ್ (UCI) ಮಾನ್ಯತೆ ಪಡೆದ Class 2.2 ವರ್ಗದ ಬಹು ಹಂತದ ರಸ್ತೆ ಸೈಕ್ಲಿಂಗ್ ಸ್ಪರ್ಧೆಯಾಗಲಿದೆ.
#UCI ವಾರ್ಷಿಕ ಕ್ಯಾಲೆಂಡರ್‌ನಲ್ಲಿ ಪ್ರಮುಖ ಸ್ಥಾನ ಪಡೆದಿರುವ ಪುಣೆ ಗ್ರ್ಯಾಂಡ್ ಟೂರ್ 2026, ವಿಶ್ವಮಟ್ಟದ ಸೈಕ್ಲಿಂಗ್‌ನಲ್ಲಿ ಭಾರತಕ್ಕೆ ಹೊಸ ದಾರಿ ತೆರೆದುಕೊಳ್ಳಲಿದೆ. ಈ ಸ್ಪರ್ಧೆ ಕ್ರೀಡಾಪಟುಗಳ ಶ್ರಮ, ಉತ್ಸಾಹ ಮತ್ತು ಸ್ಪರ್ಧಾತ್ಮಕ ಚೈತನ್ಯವನ್ನು ಪ್ರದರ್ಶಿಸಲಿದೆ.

ಪುಣೆ ಜಿಲ್ಲಾಧಿಕಾರಿ ಮತ್ತು ಪುಣೆ ಗ್ರ್ಯಾಂಡ್ ಟೂರ್ 2026 ಆಡಳಿತಾಧಿಕಾರಿ ಜಿತೇಂದ್ರ ದುಡಿ (IAS) ಮಾತನಾಡಿ ‘ಇದು ಭಾರತೀಯ ಕ್ರೀಡಾ ಇತಿಹಾಸದಲ್ಲಿ ಒಂದು ಮಹತ್ವದ ಕ್ಷಣ. ಪುಣೆ ಗ್ರ್ಯಾಂಡ್ ಟೂರ್ 2026 ಅನ್ನು ವಾರ್ಷಿಕ ಕಾರ್ಯಕ್ರಮವಾಗಿ ರೂಪಿಸಲು ನಮ್ಮ ಗುರಿಯಾಗಿದೆ ಎಂದರು.
ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ (CFI) ಅಧ್ಯಕ್ಷ ಪಂಕಜ್ ಸಿಂಗ್ ಮಾತನಾಡಿ ‘“CFI ದೇಶದಲ್ಲಿ ಸೈಕ್ಲಿಂಗ್ ಕ್ರೀಡೆಯ ಬೆಳವಣಿಗೆಗೆ ಬದ್ಧವಾಗಿದೆ. ಪುಣೆ ಗ್ರ್ಯಾಂಡ್ ಟೂರ್ 2026 ನಮ್ಮ ಪ್ರಯಾಣದ ಹೆಮ್ಮೆಯ ಮೈಲಿಗಲ್ಲು. ಮಹಾರಾಷ್ಟ್ರ ಸರ್ಕಾರದ ಸಹಯೋಗದೊಂದಿಗೆ ನಡೆಯುವ ಈ UCI Class 2.2 ಸ್ಪರ್ಧೆ, ಪ್ರೊಫೆಷನಲ್ ರೈಡರ್‌ಗಳೊಂದಿಗೆ ಭಾರತೀಯ ಕ್ರೀಡಾಪಟುಗಳಿಗೆ ವಿಶ್ವಮಟ್ಟದ ಸ್ಪರ್ಧಾತ್ಮಕ ಅನುಭವ ನೀಡಲಿದೆ ಎಂದರು. 
ಪುಣೆ ಜಿಲ್ಲಾ ಆಡಳಿತ ಮತ್ತು ಮಹಾರಾಷ್ಟ್ರ ಸರ್ಕಾರದ ಸಹಯೋಗದಲ್ಲಿ ಆಯೋಜಿಸಲ್ಪಡುವ ಪುಣೆ ಗ್ರ್ಯಾಂಡ್ ಟೂರ್ 2026, ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ (CFI) ಸಹಭಾಗಿತ್ವದಲ್ಲಿ ನಡೆಯಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post