ಮಳವಳ್ಳಿ: ತನ್ನ ತಾಯಿಯನ್ನು ಕೆಟ್ಟದಾಗಿ ಕಂಡ ಎಂಬ ಕಾರಣದಿಂದ ಸಿಟ್ಟಿಗೆದ್ದ ವ್ಯಕ್ತಿಯೊಬ್ಬ ಆತನ ತಲೆ ಕಡಿದು, ತಲೆ ಸಹಿತ ಠಾಣೆಗೆ ಆಗಮಿಸಿದ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಚಿಕ್ಕ ಬಾಗಿಲು ಗ್ರಾಮದಲ್ಲಿ ನಡೆದಿದೆ.
ಗಿರೀಶ್ (38) ಎಂಬಾತ ತಾಯಿಗೆ ಕೆಟ್ಟದಾಗಿ ಸನ್ನೆಮಾಡಿ ಕರೆದಿದ್ದಕ್ಕೆ ಕೋಪಗೊಂಡ ಎಂಬ ಕಾರಣಕ್ಕಾಗಿ ಆಕೆಯ ಮಗ ಪಶುಪತಿ(28) ಎಂಬಾತ ಪಶುಪತಿಯ ತಲೆಯನ್ನು ಕತ್ತರಿಸಿದ್ದಾನೆ.
ಗಿರೀಶನ ರುಂಡ ಕಡಿದುಕೊಂಡು ನೇರವಾಗಿ ಪೋಲಿಸರಿಗೆ ಶರಣಾದ ಪಶುಪತಿ, ತನ್ನ ತಾಯಿಯನ್ನು ಕೆಟ್ಟದ್ದಾಗಿ ಸನ್ನೆ ಮಾಡಿದವನ ಬಿಟ್ಟರೆ ನಾನು ಬದುಕಿದ್ದು ಸತ್ತಂತೆ. ಹೀಗಾಗಿ ಗಿರೀಶ್ ನ ಹತ್ಯೆ ಮಾಡಿದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.
ಮಳವಳ್ಳಿ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿಕ್ಕಮಗಳೂರು, ಕೋಲಾರ ಜಿಲ್ಲೆಗಳಲ್ಲೂ ಇತ್ತೀಚೆಗೆ ರುಂಡ ಕಡಿದಿದ್ದ ಘಟನೆ ನಡೆದಿತ್ತು.
ವರದಿ: ಕಿರಣ್ ಬೋರ ನಾಯಕ
















