ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಸಹ್ಯಾದ್ರಿ ಪರ್ವತ ಶ್ರೇಣಿಯ ಸೆರಗಿನಲ್ಲಿ, ಹಚ್ಚ ಹಸಿರನ್ನು ಹೊದ್ದು ಮಲೆನಾಡಿನ ಮಡಿಲು ರಾಜ್ಯ ಹಾಗೂ ರಾಷ್ಟ್ರಕ್ಕೆ ಹಲವು ಕ್ಷೇತ್ರದ ಸಾಧಕರನ್ನು ಕೊಡುಗೆಯನ್ನಾಗಿ ನೀಡಿದ್ದು, ಅಂತಹ ಒಂದು ಸಾಲಿನಲ್ಲಿ ಶಿವಮೊಗ್ಗದ ನಮ್ಮ ನಡುವೆಯೇ ಎಲೆ ಮರೆಯ ಕಾಯಿಯಂತೆ ಸಾಧನೆ ಮಾಡುತ್ತಿರುವ ವ್ಯಕ್ತಿ ಅಖಿಲೇಶ್ ತೇಲ್ಕರ್.
ಶಿವಮೊಗ್ಗದ ಕೆಎಸ್’ಆರ್’ಟಿಸಿ ಬಸ್ ನಿಲ್ದಾಣದ ಪ್ರಮುಖ ದ್ವಾರದಲ್ಲಿ ಬುಕ್ ಕಿ ದುನಿಯಾಕ್ಕೆ ಸ್ವಾಗತ ಎಂಬ ನಾಮಫಲಕ ಪ್ರಯಾಣಿಕರಿಗೆ ಸ್ವಾಗತ ಕೋರುತ್ತದೆ. ನಾಮಫಲಕ ನೋಡಿ ಆಶ್ಚರ್ಯ! ಅಲ್ಲಿಂದ ಕೆಎಸ್’ಆರ್’ಟಿಸಿ ಬಸ್ ನಿಲ್ದಾಣದ ಮಳಿಗೆಯ ಮೊದಲನೇ ಮಹಡಿಗೆ ಹೋದರೆ ಓದುಗರಿಗಾಗಿಯೇ ಒಂದು ಪುಟ್ಟ ಜಗತ್ತು ತೆರೆದುಕೊಳ್ಳುತ್ತದೆ. ಅದೇ ಅಖಿಲೇಶ್ ತೆಲ್ಕರ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಬುಕ್ ಕಿ ದುನಿಯಾ ಒಂದು ಸುಂದರ ಪುಸ್ತಕ ಲೋಕ ಎಂದರೆ ಅತಿಶಯೋಕ್ತಿ ಆಗಲಾರದು!
ವೃತ್ತಿಜೀವನದ ಆರಂಭದಲ್ಲಿ ದಿನಕ್ಕೆ 10 ರೂಪಾಯಿ ಊಟವೇ ಸವಾಲಾಗಿದ್ದ ದಿನಗಳಿಂದ, ಲೇಖಕರಾಗುವ ತನಕದ ಪಯಣ ಸುಲಭವಿರಲಿಲ್ಲ. ಆದರೆ ಜಗತ್ತು ಅವಕಾಶಗಳಿಂದ ತುಂಬಿದೆ, ಒಳಗಿನ ಧ್ವನಿಯನ್ನು ಕೇಳಬೇಕು ಎಂಬ ನಂಬಿಕೆಯೇ ಅವರನ್ನು ಇಂದು ಬುಕ್ ಕಿ ದುನಿಯಾ ಎಂಬ ಒಂದು ಪುಸ್ತಕ ಜಗತ್ತನ್ನು ಮಾಡುವ ಮುನ್ನುಡಿ ಬರೆದಿದೆ.
ಸಾಮಾನ್ಯವಾಗಿ ಛಲವಿರುವ ಮಂದಿ ಸಾಧನೆಯ ಹಿಂದೆ ಓಡುತ್ತಲೇ ಇರುತ್ತಾರೆ. ಗುರಿ ತಲುಪಲು ಊಟ, ನಿದ್ದೆಗಳನ್ನು ತ್ಯಜಿಸಿ, ಅವಿರತ ಶ್ರಮಿಸುತ್ತಲೇ ಇದ್ದರೂ, ಸಾಧನೆಯನ್ನು ಒಲಿಸಿಕೊಳ್ಳುವಲ್ಲಿ ಹಲವರು ಹಿಂದೆ ಬೀಳುತ್ತಾರೆ.
ಶಿವಮೊಗ್ಗದ ಟಿ. ಕೆ. ಶಂಕರನಾರಾಯಣ ರಾವ್ ಮತ್ತು ಶ್ರೀಮತಿ ಟಿ. ಎಸ್. ಉಷಾ ದಂಪತಿಯ ಸುಪುತ್ರರಾಗಿ 29 ಮಾರ್ಚ್ 1984 ರಂದು ಜನಿಸಿದ ಅಖಿಲೇಶ್ ತೇಲ್ಕರ್ ಅವರ ಜೊತೆ ಕಲ್ಪ ನ್ಯೂಸ್ ಮಾತನಾಡಿದ್ದು ಅವರನ್ನು ಪರಿಚಿಯಿಸುವ ಪ್ರಯತ್ನ ಈ ಸಂದರ್ಶನ ಲೇಖನದ ಮೂಲಕ!
ಕಲ್ಪ ನ್ಯೂಸ್: ನಿಮ್ಮ ವಿದ್ಯಾಭ್ಯಾಸ?
ಅಖಿಲೇಶ್ ತೇಲ್ಕರ್: ಡಿಇಇ ಜೊತೆಗೆ ಸ್ವಯಂ ಅಧ್ಯಯನದ ಮೂಲಕ ಬರವಣಿಗೆ, ಮಾರ್ಕೆಟಿಂಗ್ ಮತ್ತು ವೈಯಕ್ತಿಕ ಬೆಳವಣಿಗೆಯಲ್ಲಿ ಪರಿಣತಿ.
ಕಲ್ಪ ನ್ಯೂಸ್: ನಿಮ್ಮ ವೃತ್ತಿ ಜೀವನದ ಕುರಿತು?
ಅಖಿಲೇಶ್ ತೇಲ್ಕರ್: ಲೇಖಕ, ಮಾರ್ಗದರ್ಶಕ Mentor ಪ್ರಕಾಶಕ, ಉದ್ಯಮಿ , Founder – Passiontech – Book Ki Duniya
ಕಲ್ಪ ನ್ಯೂಸ್: ನೀವು ಎಲ್ಲಿ ಎಲ್ಲಿ ವೃತ್ತಿ ಮಾಡಿದ್ದೀರಾ ಹಾಗೂ ಯಾವ ಯಾವ ವೃತ್ತಿ ?
ಅಖಿಲೇಶ್ ತೇಲ್ಕರ್: ಉದ್ಯೋಗಿಯಾಗಿ Private companies ಪ್ರಾರಂಭಿಸಿ, ಉದ್ಯಮಿಯಾಗಿ ರೂಪಾಂತರಗೊಂಡು, ಇಂದು Job Seeker → Job Giver ಆಗಿರುವ ಪ್ರಯಾಣ.
ಕಲ್ಪ ನ್ಯೂಸ್: ನಿಮ್ಮ ಹವ್ಯಾಸ?
ಅಖಿಲೇಶ್ ತೇಲ್ಕರ್: ಪುಸ್ತಕ ಓದು, ಬರವಣಿಗೆ, ಜನರ ಜೊತೆ ಸಂವಾದ, ಹೊಸ ಲೇಖಕರಿಗೆ ಮಾರ್ಗದರ್ಶನ, ಜೀವನಾನುಭವಗಳನ್ನು ಹಂಚಿಕೊಳ್ಳುವುದು.
ಕಲ್ಪ ನ್ಯೂಸ್: ನಿಮ್ಮ ಕುಟುಂಬ?
ಅಖಿಲೇಶ್ ತೇಲ್ಕರ್: ನನ್ನ ತಾಯಿ, ಪತ್ನಿ ಮತ್ತು ನನ್ನ ಒಬ್ಬ ಮಗ
ಕಲ್ಪ ನ್ಯೂಸ್: ನಿಮ್ಮ ಗುರಿ?
ಅಖಿಲೇಶ್ ತೇಲ್ಕರ್: ಜನರನ್ನು ಪುಸ್ತಕಗಳ ಮೂಲಕ ರೂಪಾಂತರಿಸುವುದು, 1 ಮಿಲಿಯನ್ aspiring writersರನ್ನು ಲೇಖಕರಾಗಿಸಲು ಸಹಾಯ ಮಾಡುವುದು.
ಕಲ್ಪ ನ್ಯೂಸ್: ಇಲ್ಲಿಯವರೆಗೆ ಬರೆದ ಪುಸ್ತಕಗಳು?
ಅಖಿಲೇಶ್ ತೇಲ್ಕರ್: Find “U” in “YOU” & See “U” in “YOU” & ATOM JOBS (ಒಟ್ಟು 3 ಪುಸ್ತಕಗಳು)
ಕಲ್ಪ ನ್ಯೂಸ್: ಬುಕ್ ಕಿ ದುನಿಯಾದ ಕಲ್ಪನೆ ನಿಮಗೆ ಮೂಡಿದ್ದು ಹೇಗೆ?
ಅಖಿಲೇಶ್ ತೇಲ್ಕರ್: ನನ್ನ ಪುಸ್ತಕಗಳನ್ನು ಓದುಗರಿಗೆ ತಲುಪಿಸುವ ಪ್ರಯತ್ನದಲ್ಲೇ, ಓದುಗರಿಗೆ ಯಾವ ಪುಸ್ತಕ? ಎಲ್ಲಿ ಸಿಗಬೇಕು? ಎಂಬ ಪ್ರಶ್ನೆ ಹುಟ್ಟಿತು. ಅದೇ ಪ್ರಶ್ನೆಯ ಉತ್ತರವೇ ಬುಕ್ ಕಿ ದುನಿಯಾ – ಓದುಗರಿಗಾಗಿ, ಲೇಖಕರಿಗಾಗಿ, ಕನಸುಗಾರರಿಗಾಗಿ.
ಕಲ್ಪ ನ್ಯೂಸ್: ನಿಮ್ಮ ಈ ಜಗತ್ತಿನಲ್ಲಿ ಯಾವ ರೀತಿಯ ಪುಸ್ತಕಗಳು ಲಭ್ಯವಿವೆ?
ಅಖಿಲೇಶ್ ತೇಲ್ಕರ್: ಬುಕ್ ಕಿ ದುನಿಯಾನಲ್ಲಿ ಲಭ್ಯವಿರುವ ಪುಸ್ತಕಗಳು
- ಕಾದಂಬರಿಗಳು (Fiction)
- ನಾನ್-ಫಿಕ್ಷನ್ ಪುಸ್ತಕಗಳು
- ಮಕ್ಕಳ ಕಥಾ ಪುಸ್ತಕಗಳು
- ಆಕ್ಟಿವಿಟಿ ಮತ್ತು ಕಲರಿಂಗ್ ಬುಕ್ಸ್
- ಕನ್ನಡ ಪುಸ್ತಕಗಳು
- ಹಿಂದಿ ಕಾದಂಬರಿಗಳು
- ಇಂಗ್ಲಿಷ್ ಪುಸ್ತಕಗಳು
- ಪ್ರೇರಣಾದಾಯಕ ಮತ್ತು ಸ್ವಯಂವಿಕಾಸ ಪುಸ್ತಕಗಳು
- ಅಂತಾರಾಷ್ಟ್ರೀಯ ಬೆಸ್ಟ್ಸೆಲ್ಲರ್ಗಳು
ಕಲ್ಪ ನ್ಯೂಸ್: ನಿಮ್ಮ ಕನಸು?
ಅಖಿಲೇಶ್ ತೇಲ್ಕರ್: ಪ್ರತಿ ಮನೆಯಲ್ಲೂ ಒಬ್ಬ ಓದುಗ ಇರಬೇಕು. ಪ್ರತಿ ಓದುಗನೊಳಗಿಂದ ಒಬ್ಬ ಲೇಖಕ ಹೊರಬರಬೇಕು.
ಕಲ್ಪ ನ್ಯೂಸ್: ಸೇವೆ ಸಲ್ಲಿಸಿದ ಕ್ಷೇತ್ರಗಳು?
ಅಖಿಲೇಶ್ ತೇಲ್ಕರ್: ಪುಸ್ತಕ ಬರವಣಿಗೆ ಮತ್ತು ಪ್ರಕಾಶನ, ಯುವಕರ ಮಾರ್ಗದರ್ಶನ, ವೃತ್ತಿ ರೂಪಾಂತರ #CareerTransformation
ಕಲ್ಪ ನ್ಯೂಸ್: ನಿಮಗೆ ಸಂದ ಪ್ರಶಸ್ತಿ ಮತ್ತು ಗೌರವಗಳು?
ಅಖಿಲೇಶ್ ತೇಲ್ಕರ್: Passionpreneur Outstanding performance “Star Award in 2023”, Writeinfluence Award for See U in You book in 2023, Individual Excellence Award at work in 2019
ಕಲ್ಪ ನ್ಯೂಸ್: ಈ ಲೋಕಕ್ಕೆ ನಿಮ್ಮ ಕೊಡುಗೆ?
ಅಖಿಲೇಶ್ ತೇಲ್ಕರ್: ಪುಸ್ತಕಗಳ ಮೂಲಕ ಆತ್ಮವಿಶ್ವಾಸ, ದಿಕ್ಕು ಮತ್ತು ಉದ್ದೇಶ ನೀಡುವುದು.
ಕಲ್ಪ ನ್ಯೂಸ್: ಸಮಾಜಕ್ಕೆ ಹಾಗೂ ಯುವಕರಿಗೆ ನಿಮ್ಮ ಸಂದೇಶ ಏನು ?
ಅಖಿಲೇಶ್ ತೇಲ್ಕರ್: ಓದು ಎಂದಿಗೂ ವ್ಯರ್ಥವಾಗುವುದಿಲ್ಲ. ಪುಸ್ತಕಗಳು ಬದುಕನ್ನು ಮರು ರೂಪಿಸುತ್ತವೆ ಎಂಬುದನ್ನು ಇಂದಿನ ಯುವಕರು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ನಿಮ್ಮೊಳಗಿನ ಶಕ್ತಿಯನ್ನು ಹುಡುಕಿ. ಬದಲಾವಣೆಗೆ ಭಯಪಡಬೇಡಿ. ಓದಿ, ಬರೆಯಿರಿ, ಬೆಳೆಯಿರಿ.
ನೀವು ಒಮ್ಮೆ ಬುಕ್ ಕಿ ದುನಿಯಾಗೆ ಹೋಗಿ ಬನ್ನಿ! ಪುಸ್ತಕ ಲೋಕಕ್ಕೆ ಪ್ರವೇಶ ಉಚಿತ…
ಒಮ್ಮೆ ಭೇಟಿ ನೀಡಿ – ಓದಿನ ಹೊಸ ಲೋಕವನ್ನು ಅನುಭವಿಸಿ!
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















