ಕಲ್ಪ ಮೀಡಿಯಾ ಹೌಸ್ | ಆಗ್ರಾ |
ಹೋಂ ಸ್ಟೇನಲ್ಲಿ #Homestay ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ #GangRape ನಡೆಸಿ, ಆಕೆಗೆ ಮದ್ಯ ಕುಡಿಸಿ, ತಲೆಗೆ ಬಾಟಲಿಯಿಂದ ಹೊಡೆದ ಕ್ರೂರ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿನ ತಾಜ್ಗಂಜ್’ನಲ್ಲಿ ನಡೆದಿದೆ.
ಘಟನೆ ಕುರಿತಂತೆ ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಹೋಂ ಸ್ಟೇನಲ್ಲಿ ತನಗೆ ಬಲವಂತವಾಗಿ ಮದ್ಯ ಕುಡಿಸಿ, ಬಾಟಲಿಯಿಂದ ತಲೆಗೆ ಹೊಡೆದ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ. ಅಲ್ಲದೇ, ಆಕೆಯ ಆಕ್ಷೇಪಾರ್ಹ ವೀಡಿಯೋವನ್ನು #Video ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.

ಅತ್ಯಾಚಾರಕ್ಕೆ ಸಹಕಾರ ನೀಡಿದ ಓರ್ವ ಮಹಿಳೆ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post