ಕಲ್ಪ ಮೀಡಿಯಾ ಹೌಸ್ | ಅಬುಜಾ |
ವಾಯುವ್ಯ ನೈಜೀರಿಯಾದಲ್ಲಿ ಅಲ್ಲಿನ ಸೇನೆ ಡ್ರೋಣ್ ದಾಳಿ Nigerian drone attack ವೇಳೆ ಮಾಡಿದ ಸಣ್ಣ ಎಡವಟ್ಟಿನಿಂದ 85 ಮಂದಿ ಅಮಾಯನ ನಾಗರಿಕರು ಸಾವಿಗೀಡಾದ ದಾರುಣ ಘಟನೆ ನಡೆದಿದೆ.
ಕಡುನಾ ರಾಜ್ಯದ ತುಡುನ್ ಬಿರಿ ಗ್ರಾಮದ ಬಳಿ ಭಯೋತ್ಪಾದಕರನ್ನು ಗುರಿಯಾಗಿಸಿ ದಾಳಿ ನಡೆಸಲಾಗಿತ್ತು. ಆದರೆ ಸೇನೆ ಹಾರಿಸಿದ್ದ ಡ್ರೋನ್ ಗುರಿ ತಪ್ಪಿದ್ದು, ನಾಗರಿಕರ ಮೇಲೆ ದಾಳಿ ಮಾಡಿದೆ. ಪರಿಣಾಮವಾಗಿ 85 ಮಂದಿ ಅಮಾಯಕರು ಅನ್ಯಾಯವಾಗಿ ಪ್ರಾಣಬಿಟ್ಟಿದ್ದಾರೆ. ದಾಳಿಯಲ್ಲಿ ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಸೇರಿದಂತೆ 85 ಮಂದಿ ಮೃತಪಟ್ಟಿದ್ದರೆ, ಕನಿಷ್ಠ 66ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ನೈಜೀರಿಯಾದ ಸಂಘರ್ಷದ ವಲಯದಲ್ಲಿ ನಡೆದ ಮಾರಣಾಂತಿಕ ದಾಳಿ ಬಗ್ಗೆ ತನಿಖೆ ನಡೆಸಲು ದೇಶದ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ.
Also read: ಭಾರತಕ್ಕೆ ಬೇಕಿದ್ದ ಮತ್ತೊಬ್ಬ ಮೋಸ್ಟ್ ವಾಂಟೆಡ್ ಉಗ್ರ ಪಾಕ್’ನಲ್ಲಿ ಅಪರಿಚಿತರ ಗುಂಡಿಗೆ ಫಿನಿಷ್
ದಾಳಿ ಕುರಿತಂತೆ ಅಲ್ಲಿನ ಸೇನಾ ಮುಖ್ಯಸ್ಥರು ಕ್ಷಮೆ ಯಾಚಿಸಿದ್ದು, ತಪ್ಪಾದ ಲೆಕ್ಕಾಚಾರದ ವೈಮಾನಿಕ ದಾಳಿಯ ಘಟನೆಗಳು ದೇಶದಲ್ಲಿ ಆತಂಕಕಾರಿ ಆಯಾಮವನ್ನು ಪಡೆದುಕೊಳ್ಳುತ್ತಿದೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post