ತುಮಕೂರು: ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಹಲವೆಡೆ ಅಹಿತಕರ ಘಟನೆಗಳು ನಡೆದಿದ್ದು, ತುಮಕೂರಿನಲ್ಲಿ ನೀಚ ಹಾಗೂ ಸೇಡಿನ ರಾಜಕಾರಣದ ಕ್ರೌರ್ಯ ಮೆರೆದಿದೆ.
6ನೆ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಆರಿಫ್ ಹುಸೇನ್ ಚುನಾವಣೆಯಲ್ಲಿ ಜಯ ಗಳಿಸಿದ್ದರು. ಈ ವೇಳೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಎನ್.ಆರ್. ಕಾಲೋನಿ ಬಳಿಯ ಕೋತಿತೋಪು ರಸ್ತೆಯಲ್ಲಿ ಸಂಭ್ರಮಾಚರಣೆಯಲ್ಲಿದ್ದಾಗ ಈ ಆ್ಯಸಿಡ್ ಮಾದರಿಯಲ್ಲಿನ ರಾಸಾಯಿನಿಕ ದಾಳಿ ನಡೆದಿದೆ. ಈ ವೇಳೆ 10 ಮಂದಿಗೆ ತೀವ್ರತರವಾದ ಗಾಯಗಳಾಗಿದ್ದು, ಎಲ್ಲರಿಗೂ ಚಿಕಿತ್ಸೆ ನೀಡಲಾಗಿದೆ.
ತುಮಕೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಬಂಧನಕ್ಕಾಗಿ ಬಲೆ ಬೀಸಲಾಗಿದೆ.
ಇನ್ನು, ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಘೋಷಣೆಯಾಗಿ ಸಂಭ್ರಮಾಚರಣೆ ನಡೆಯುತ್ತಿದ್ದಾಗ ಕೊಪ್ಪಳ ನಗರಸಭೆಯ 19 ನೆಯ ವಾರ್ಡ್‌ನಲ್ಲಿ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಯ ಸಂಬಂಧಿಯು ಜೆಡಿಎಸ್ ಅಭ್ಯರ್ಥಿಯ ತಾಯಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ್ದಾರೆ.
ಕೃತ್ಯಕ್ಕೆ ಸಹಕರಿಸಿದ ಆರೋಪಿ ಹಾಜಿ ಹುಸೇನಿ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಸಯ್ಯದ್ ನಿಜಾಮುದ್ದೀನ್ಗಾಗಿ ಶೋಧ ನಡೆಸುತ್ತಿದ್ದು, ಕೊಪ್ಪಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Discussion about this post