ಕೊಚ್ಚಿ: ದಕ್ಷಿಣ ಭಾರತದ ಪವಿತ್ರ ಯಾತ್ರಾ ಸ್ಥಳ ಶಬರಿಮಲೆ ದೇವಾಲಯಕ್ಕೆ ತರಳುವ ಸಲುವಾಗಿ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಇಂದು ಮುಂಜಾನೆ ಬಂದಿಳಿದ ತೃಪ್ತಿ ದೇಸಾಯಿ ಹಾಗೂ ತಂಡದವರು ವಿಮಾನ ನಿಲ್ದಾಣದಿಂದ ಹೊರಹೋಗದಂತಹ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ.
ತೃಪ್ತಿ ದೇಸಾಯಿ ಆಗಮಿಸುವ ಮಾಹಿತಿಯಿದ್ದ ಪ್ರತಿಭಟನಾಕಾರರು ಕೊಚ್ಚಿ ವಿಮಾನ ನಿಲ್ದಾಣದ ಸುತ್ತಲೂ ಸಾವಿರಾರು ಸಂಖ್ಯೆಯಲ್ಲಿ ನೆರೆದು, ನಿಲ್ದಾಣದಿಂದ ಹೊರಕ್ಕೆ ಬಾರದಂತೆ ತಡೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಆಕೆ ನಿಲ್ದಾಣದಲ್ಲಿ ಉಳಿಯುವಂತಾಗಿದ್ದು, ಇಡಿಯ ಪ್ರದೇಶದಲ್ಲಿ ಭಾರೀ ಭದ್ರತೆ ಏರ್ಪಡಿಸಲಾಗಿದೆ.
Kochi: Trupti Desai, founder of Bhumata Brigade, having breakfast at Cochin International Airport as she hasn't been able to leave the airport yet due to protests being carried out against her visit to #Sabarimala Temple. #Kerala pic.twitter.com/ILDV7silTx
— ANI (@ANI) November 16, 2018
ಈ ವೇಳೆ ಅಲ್ಲಿನ ಮಾಧ್ಯಮಗಳೊಂದಿಗೆ ಮಾತನಾಡಿರುವ ತೃಪ್ತಿ ದೇಸಾಯಿ, ಅಯ್ಯಪ್ಪನ ದರ್ಶನ ಪಡೆಯದ ಹೊರತು ತಾವು ಕೇರಳದಿಂದ ತೆರಳುವುದಿಲ್ಲ. ಅಲ್ಲದೆ ಪ್ರತಿಭಟನೆಯಿಂದ ನಮ್ಮನ್ನು ಭಯಪಡಿಸಲು ಸಾಧ್ಯವಿಲ್ಲ. ನಾವು ಈಗಾಗಲೇ ಭದ್ರತೆ ಕೋರಿ ಕೇರಳ ಪೊಲೀಸರಿಗೆ ಮನವಿ ಮಾಡಿದ್ದು, ವಿಐಪಿ ಭದ್ರತೆ ನೀಡುವಂತೆ ಮನವಿ ಮಾಡಿದ್ದೇವೆ. ಆದರೆ, ಇಲಾಖೆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದಿದ್ದಾರೆ.
ಇಂದಿನಿಂದ ಶಬರಿಮಲೆ ದೇವಾಲಯದ ಬಾಗಿಲು ಮತ್ತೆ ತೆರೆಯಲಿದ್ದು, ಸಂಜೆ 5 ಗಂಟೆಯಿಂದ ದರ್ಶನ ಇರಲಿದೆ. ಇಂದಿನಿಂದ 2 ತಿಂಗಳ ಕಾಲ ದೇವಾಲಯ ತೆರೆದಿರಲಿದೆ. ಮಕರ ಸಂಕ್ರಾಂತಿ ನಂತರ ದೇವಾಲಯ ಬಾಗಿಲು ಮುಚ್ಚಲಿದೆ.
Discussion about this post