ಮುಂಬೈ: ಬಹುಭಾಷಾ ನಟಿ ಇಶಾ ಕೊಪ್ಪಿಕರ್ ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಸಮ್ಮುಖದಲ್ಲಿ ಇಶಾ ಕೊಪ್ಪಿಕರ್ ಅವರು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡರು. ಅಲ್ಲದೇ, ಇಶಾ ಅವರನ್ನು ಬಿಜೆಪಿ ಮಹಿಳಾ ಟ್ರಾನ್ಸ್ ಪೋಟ್ ವಿಂಗ್ ನ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.
42 ವರ್ಷದ ಇಶಾ ಕೊಪ್ಪಿಕರ್ ಅವರು ಕನ್ನಡ ಸೇರಿದಂತೆ ತಮಿಳು, ತೆಲುಗು, ಹಿಂದಿ ಹಾಗೂ ಮರಾಠಿ ಚಿತ್ರಗಳಲ್ಲಿ ನಟಿಸಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್ ಅಭಿನಯಿಸಿದ್ದ ಬ್ಲಾಕ್ ಬಸ್ಟರ್ ಸೂರ್ಯವಂಶ ಚಿತ್ರದಲ್ಲಿ ಈಶಾ ಅಭಿನಯಿಸಿದ್ದರು.
ಇನ್ನು ಈ ಕುರಿತಂತೆ ಟ್ವೀಟ್ ಮಾಡಿರುವ ಇಶಾ ಕೊಪ್ಪಿಕರ್, ಪಕ್ಷಕ್ಕೆ ನನ್ನನ್ನು ಆತ್ಮೀಯವಾಗಿ ಬರಮಾಡಿಕೊಂಡು ಹಾರೈಸಿದ ಎಲ್ಲರಿಗೂ ಧನ್ಯವಾದಗಳು. ದೇಶಕ್ಕಾಗಿ ಸೇವೆ ಸಲ್ಲಿಸುವಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆ ಎಂದಿದ್ದಾರೆ.
Thank You For the warm welcome..Look forward to serve the nation 🙏🏻 @narendramodi @bjpindia @bjpmaharashtra @bjpmumbai @nitingadkari @devendrafadnavis @ashishshelar @hajiarfatshaikh @vinodtawde @amarsable @amitshah pic.twitter.com/GESTfg4VG4
— Isha Koppikar (@ishakonnects) January 27, 2019















