ರಸ್ತೆ ಅಪಘಾತಕ್ಕೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಶೀಘ್ರ ಗುಣಮುಖರಾಗಲಿ ಎಂದು ನವರಸ ನಾಯಕ ಜಗ್ಗೇಶ್ ಪ್ರಾರ್ಥಿಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಕಲಾ ಬಂಧು ದರ್ಶನ್ ಗೆ ಅಪಘಾತವಾದ ಸುದ್ದಿ ಕೇಳಿ ದಿಗ್ಬ್ರಾಂತನಾದೆ. ಕೋಟ್ಯಂತರ ಕನ್ನಡದ ಆತ್ಮಗಳು ಹಾಗೂ ಅಮ್ಮನ ಆಶೀರ್ವಾದ ದರ್ಶನ್ ಅನ್ನು ಕಾಪಾಡಿದೆ. ಕ್ಷೇಮವಾಗಿದ್ದಾರೆ ರಾಯರ ದಯೇ.. ಯಾರ ಕಣ್ಣು ತಾಕದೆ ಸುಖವಾಗಿ ಬಾಳಿ.. ಶುಭಹಾರೈಕೆ ಎಂದಿದ್ದಾರೆ.
ಕಲಾಬಂಧು #ದರ್ಶನ ಗೆ ಅಪಘಾತವಾದ
ಸುಧ್ಧಿಕೇಳಿ ದಿಘ್ಬ್ರಾಂತನಾದೆ!!
ಕೊಟ್ಯಾಂತರ ಕನ್ನಡದ ಆತ್ಮಗಳು ಹಾಗು ಅಮ್ಮನ ಆಶೀರ್ವಾದ ದರ್ಶನನ್ನು ಕಾಪಾಡಿದೆ. ಕ್ಷೇಮವಾಗಿದ್ದಾರೆ ರಾಯರದಯೇ..
ಯಾರಕಣ್ಣು ತಾಕದೆ ಸುಖವಾಗಿ ಬಾಳಿ..
ಶುಭಹಾರೈಕೆ..— ನವರಸನಾಯಕ ಜಗ್ಗೇಶ್ (@Jaggesh2) September 24, 2018
ಇನ್ನು, ದರ್ಶನ್ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಟ್ವೀಟ್ ಮಾಡಿರುವ ಜಗ್ಗೇಶ್ ಪತ್ನಿ ಪರಿಮಳ ಜಗ್ಗೇಶ್, ದರ್ಶನ್ ಅವರ ಆರೋಗ್ಯ ಅದಷ್ಟು ಬೇಗ ಸುಧಾರಿಸಲಿ ಎಂದು ನಾನು ಮತ್ತು ಜಗ್ಗೇಶ್ ಪ್ರಾರ್ಥನೆ ಮಾಡುತ್ತೇವೆ. ಹುಷಾರಾಗಿ ಇರಿ. ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದಿದ್ದಾರೆ.
Prayers and wishes for a speedy recovery from all of us @Jaggesh2
Stay safe. Stay blessed. God's blessings with you all @dasadarshan @PrajwalDevaraj #Devaraj pic.twitter.com/n0sAA453NA— Parimala Jaggesh (@27parims) September 24, 2018
Discussion about this post