ಬೆಂಗಳೂರು: ರಾಜಕೀಯದಲ್ಲಿನ ಅವಕಾಶಗಳ ಕುರಿತಂತೆ ತಮ್ಮ ಮನದಾಳದ ಮಾತನ್ನು ಟ್ವಿಟರ್’ನಲ್ಲಿ ಹಂಚಿಕೊಂಡ ನಟ, ರಾಜಕಾರಣಿ ಜಗ್ಗೇಶ್, ತಮ್ಮನ್ನು ಕೆಣಕಿದವರಿಗೆ ಗೌರವಯುತವಾಗಿಯೇ ರೇಷ್ಮೆ ಬಟ್ಟೆಯಲ್ಲಿ ಸುತ್ತಿ ಹೊಡೆದಂತೆ ಚಾಟಿ ಬೀಸಿದ್ದಾರೆ.
ನಿನ್ನೆ ಟ್ವೀಟ್ ಮಾಡಿದ್ದ ಜಗ್ಗೇಶ್, ಭೈಎಲೆಕ್ಷನ್ ಬಂತು! 2019 ಕಡೆಘಳಿಗೆ ಅಭ್ಯರ್ಥಿಯಾದ ನಾನು ಎಕ್ಸ್ ಎಂಎಲ್’ಎ/ಎಂಎಲ್’ಸಿ ಆಗಿ ತನುಮನಧನ ಕಳೆದುಕೊಂಡು! 9 ದಿನದಲ್ಲಿ 60,400 ಮತ ಪಡೆದ ಅಭ್ಯರ್ಥಿ ನಾನು! ಮೌನವಾಗಿರಲೋ! ವಲಸೆ ಬಂದವರಿಗಾಗಿ ನಾನು ಪಕ್ಕ ಸರಿಯಲೋ? ಇಲ್ಲಾ ಮೌನವಾಗಿ ತ್ಯಾಗಿಯಾಗಲೋ! ಕಾಡಿನಲ್ಲಿ ಕಳೆದುಹೋದ ಮಗುವಂತಾಗಿರುವೆ! ಎಂದಿದ್ದರು.
ಭೈಎಲೆಕ್ಷನ್ ಬಂತು!
2019 ಕಡೆಘಳಿಗೆ ಅಭ್ಯರ್ಥಿಯಾದ ನಾನು ex-Mla/MLC ಆಗಿ! @narendramodi @RSS4India ತನುಮನಧನ ಕಳೆದುಕೊಂಡು! 9ದಿನದಲ್ಲಿ 60,400ಮತ ಪಡೆದ ಅಭ್ಯರ್ಥಿ ನಾನು!
ಮೌನವಾಗಿರಲೋ!ವಲಸೆ ಬಂದವರಿಗಾಗಿ ನಾನು ಪಕ್ಕ ಸರಿಯಲೋ?ಇಲ್ಲಾ ಮೌನವಾಗಿ ತ್ಯಾಗಿಯಾಗಲೋ!ಕಾಡಿನಲ್ಲಿ ಕಳೆದುಹೋದ ಮಗುವಂತಾಗಿರುವೆ!@blsanthosh @BJP4Karnataka— ನವರಸನಾಯಕ ಜಗ್ಗೇಶ್ (@Jaggesh2) September 21, 2019
ಆದರೆ, ಇದಕ್ಕೆ ಕೆಲವು ಫೇಕ್ ಐಡಿ ವೀರರು ಕಿಚಾಯಿಸಿ ಟ್ವೀಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸರಣಿ ಟ್ವೀಟ್ ಮಾಡಿರುವ ಜಗ್ಗೇಶ್, ಪ್ರತಿ ಒಬ್ಬರಿಗೂ ಅವರ ಭಾವನೆ ವ್ಯಕ್ತಪಡಿಸಲು ಸ್ವಾತಂತ್ರ್ಯವಿದೆ! ಹಂಚಿಕೊಂಡೆ ಅಷ್ಟೆ! ಎಲ್ಲೋ ಇದ್ದ ಅನ್ಯ ಪಕ್ಷದ ಫೇಕ್ ಐಡಿಗಳೆಲ್ಲಾ ಇಮಿಡಿಯೇಟ್ ಆಕ್ಟೀವ್ ಆಗಿ ಹುಡುಕಿಬಂದು ನನ್ನ ಪೇಜ್ ಮೇಲೆ ವಾಂತಿ ಮಾಡಿದರು! ನೆನಪಿಡಿ ನಾನು ಜಗ್ಗೇಶ್ ರಾಯರ ಮಗ, ನನಗೆ ಬೇಕಾದ್ದು ನನ್ನ ಹುಡುಕಿಬರುತ್ತದೆ. ಶ್ರೀರಾಮಪುರದ ಫುಟ್ಪಾತಿನಿಂದ ಇಲ್ಲಿವರೆರೂ ಬಂದವ ನಾನು ಎಂದು ಚಾಟಿ ಬೀಸಿದ್ದಾರೆ.
ಪ್ರತಿ ಒಬ್ಬರಿಗು ಅವರ ಭಾವನೆ ವ್ಯೆಕ್ತಪಡಿಸಲು ಸ್ವಾತಂತ್ರ್ಯವಿದೆ!ಹಂಚಿಕೊಂಡೆ ಅಷ್ಟೆ!ಎಲ್ಲೋ ಇದ್ದ ಅನ್ಯ ಪಕ್ಷದ #fake IDಗಳೆಲ್ಲಾ immediate activeಆಗಿ ಹುಡುಕಿಬಂದು ನನ್ನ #page ಮೇಲೆ ವಾಂತಿಮಾಡಿದರು!ನೆನಪಿಡಿ ನಾನು ಜಗ್ಗೇಶ್ ರಾಯರಮಗ
ನನಗೆ ಬೇಕಾದ್ದು ನನ್ನ ಹುಡುಕಿಬರುತ್ತದೆ😎ಶ್ರೀರಾಮಪುರದ ಫುಟ್ಪಾತಿನಿಂದ ಇಲ್ಲಿವರೆಗು ಬಂದವ ನಾನು😂 https://t.co/YhcHebxv0Y— ನವರಸನಾಯಕ ಜಗ್ಗೇಶ್ (@Jaggesh2) September 22, 2019
ಅಲ್ಲದೇ. ಒಬ್ಬರಿಗೆ ಹಂಗಿಸುವ ಮುನ್ನ ನನ್ನ ಚಾಲೆಂಜ್ ಸ್ವೀಕರಿಸಿ! ಹಂಗಿಸುವ ಮುನ್ನ ನಿಮ್ಮ ಬದುಕಲ್ಲಿ 1 ಘಂಟೆ ಯಾರ ನೀವು ಅಣಕಿಸುತ್ತೀರಿ ಅಂತವರು ಮಾಡಿದಷ್ಟು ಸಾಧನೆ ನಿಮ್ಮ ಬದುಕಲ್ಲಿ ಸಾಧಿಸಿ ತೋರಿಸಿ! ಹಾಗೆ ನೀವು ಸಾಧಿಸಿದರೆ ನಾನು ನಿಮ್ಮ ದಾಸ! ಆಗದಿದ್ದರೆ ನಿಮ್ಮ ಅನ್ನಕ್ಕೆ ದಾರಿ ಹುಡುಕಿ ಬದುಕಿ ತಂದೆ ತಾಯಿ ಜೊತೆ ಸಂತೋಷವಾಗಿ ಬಾಳಿ! ಫೇಕ್ ಐಡಿ ಆಗದಿರಿ ಪ್ಲೀಸ್! ಎಂದಿದ್ದಾರೆ.
ಒಬ್ಬರಿಗೆ ಹಂಗಿಸುವಮುನ್ನ ನನ್ನ #challenge ಸ್ವೀಕರಿಸಿ!ಹಂಗಿಸುವ ಮುನ್ನ ನಿಮ್ಮಬದುಕಲ್ಲಿ 1ಘಂಟೆ ಯಾರ ನೀವು ಅಣಕಿಸುತ್ತೀರಿ ಅಂತವರು ಮಾಡಿದಷ್ಟು ಸಾಧನೆ ನಿಮ್ಮ ಬದುಕಲ್ಲಿ ಸಾಧಿಸಿ ತೋರಿಸಿ! ಹಾಗೆ ನೀವು ಸಾಧಿಸಿದರೆ ನಾನು ನಿಮ್ಮದಾಸ!ಆಗದಿದ್ದರೆ ನಿಮ್ಮಅನ್ನಕ್ಕೆ ದಾರಿಹುಡುಕಿ ಬದುಕಿ ತಂದೆತಾಯಿ ಜೊತೆ ಸಂತೋಷವಾಗಿ ಬಾಳಿ!fake id ಆಗದಿರಿpls!
— ನವರಸನಾಯಕ ಜಗ್ಗೇಶ್ (@Jaggesh2) September 22, 2019
ಜಗ್ಗೇಶ್ ಅವರ ಸರಣಿ ಟ್ವೀಟ್’ಗಳನ್ನು ನೋಡಿ:
ನನ್ನಬದುಕಲ್ಲಿ ಕಂಡಿರುವಷ್ಟು
ಕಷ್ಟಸುಖ!ಏಳುಬೀಳು!ಅಪಮಾನ ಸನ್ಮಾನ!ನಂಬಿಕೆದ್ರೋಹ!ಬೆನ್ನಿಗೆ ಚೂರಿ ಹಾಕಿಸಿಕೊಂಡರು ಯಾರಿಗು ಅರಿವಾಗದಂತೆ ಒಳಗೊಳಗೆ ನೋವುಂಡು
ಅನ್ಯರನಗಿಸಿ 57ರ ಗಡಿಗೆ ಬೇಕಾದ್ದು ರಾಯರದಯೆಯಿಂದ ಪಡೆದು ದಡಸೇರಿರುವೆ!ಬಹುತೇಕರು ನನ್ನಮಕ್ಕಳ
ವಯಸ್ಕರರು ತಾವು!ನೀವಂದುಕೊಂಡಷ್ಟು ಸುಲಭವಲ್ಲ ಬದುಕು!ಇಷ್ಟುಮಾತ್ರ ಹೇಳಲು ಸಮರ್ಥ ನಾನು!— ನವರಸನಾಯಕ ಜಗ್ಗೇಶ್ (@Jaggesh2) September 22, 2019
ನನ್ನಬದುಕಲ್ಲಿ ಕಂಡಿರುವಷ್ಟು
ಕಷ್ಟಸುಖ!ಏಳುಬೀಳು!ಅಪಮಾನ ಸನ್ಮಾನ!ನಂಬಿಕೆದ್ರೋಹ!ಬೆನ್ನಿಗೆ ಚೂರಿ ಹಾಕಿಸಿಕೊಂಡರು ಯಾರಿಗು ಅರಿವಾಗದಂತೆ ಒಳಗೊಳಗೆ ನೋವುಂಡು
ಅನ್ಯರನಗಿಸಿ 57ರ ಗಡಿಗೆ ಬೇಕಾದ್ದು ರಾಯರದಯೆಯಿಂದ ಪಡೆದು ದಡಸೇರಿರುವೆ!ಬಹುತೇಕರು ನನ್ನಮಕ್ಕಳ
ವಯಸ್ಕರರು ತಾವು!ನೀವಂದುಕೊಂಡಷ್ಟು ಸುಲಭವಲ್ಲ ಬದುಕು!ಇಷ್ಟುಮಾತ್ರ ಹೇಳಲು ಸಮರ್ಥ ನಾನು!— ನವರಸನಾಯಕ ಜಗ್ಗೇಶ್ (@Jaggesh2) September 22, 2019
ರವಿಚಂದ್ರನ್ ಕಂಪನಿಯಲ್ಲಿ 1987ರಲ್ಲಿ 18ರೂ ಗೆ
ಕೂಲಿ ಮಾಡುತ್ತಿದ್ದ ನಾನು ಇಂದು ವರ್ಷಕ್ಕೆ
20ಲಕ್ಷ ತೆರಿಗೆ ಕಟ್ಟುವ ಶಕ್ತಿ ನೀಡಿರುವ
ರಾಯರು ಹಾಗು ನನ್ನ ಪ್ರೀತಿಸುವ ಕನ್ನಡಿಗರೆ ಸಾಕು!ಬದುಕಿದ್ದಾಗಲೆ ಈ ಹಳ್ಳಿ ಹುಡುಗನ ಕಥೆ ಬದುಕುವ ಛಲದವರಿಗೆ
ಮಾರ್ಗದರ್ಶನವಾಗಲಿ!ನಾನು ಸತ್ತಾಗ ಹೊಗಳಬೇಡಿ ಬದುಕಿದ್ದಾಗ ಅನುಸರಿಸಿ ಸಾಕು!ಶುಭರಾತ್ರಿ— ನವರಸನಾಯಕ ಜಗ್ಗೇಶ್ (@Jaggesh2) September 22, 2019
Discussion about this post