ಕಲ್ಪ ಮೀಡಿಯಾ ಹೌಸ್ | ಅಮೆರಿಕಾ |
ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ #Shivarajkumar ಅವರಿಗೆ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಯಶಸ್ವಿಯಾದ ಬಳಿಕ ಗುಣಮುಖರಾಗುತ್ತಿದ್ದು, ಹೊಸ ವರ್ಷದ ಮೊದಲ ದಿನದಂದು ಸ್ವತಃ ಅವರೇ ಮಾತನಾಡುವ ಮೂಲಕ ತಮ್ಮ ಆರೋಗ್ಯದ ಕುರಿತಾಗಿ ಮಾಹಿತಿ ನೀಡಿದ್ದಾರೆ.
ಅಮೆರಿಕಾದಲ್ಲಿ #America ವಿಶ್ರಾಂತಿ ಪಡೆಯುತ್ತಿರುವ ಶಿವಣ್ಣ ಹಾಗೂ ಅವರ ಪತ್ನಿ ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.
Also Read>> ನಿಂತಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿ | ನಾಲ್ವರಿಗೆ ಗಂಭೀರ ಗಾಯ
ನನಗೆ ಕ್ಯಾನ್ಸರ್ #Cancer ಗುಣವಾಗಿದ್ದು, ಬ್ಲಾಡರ್ ಬದಲಾಯಿಸಿದ್ದಾರೆ. ಈ ಸಂಬಂಧ ಆಪರೇಷನ್ ನಡೆಸಲಾಗಿದೆ. ನಡೆದಿದ್ದು ಕಿಡ್ನಿ ಟ್ರಾನ್ಸ್ಪೆಂಟ್ ಅಲ್ಲ. ಈ ಬಗ್ಗೆ ಗೊಂದಲ ಬೇಡ ಎಂದಿದ್ದಾರೆ.
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಭಯ ಆಗುತ್ತೆ ಮಾತನಾಡಬೇಕಾದರೆ, ಎಲ್ಲಿ ಎಮೋಷನಲ್ ಆಗಿ ಬಿಡ್ತೀನಿ ಅಂತ. ಇಲ್ಲಿಂದ ಹೋಗುವಾಗ ಎಮೋಷನಲ್ ಆಗಿದ್ದೇ, ಭಯ ಅನ್ನೋದು ಇದ್ದೇ ಇರುತ್ತದೆ. ಆ ಭಯ ಕಮ್ಮಿ ಮಾಡೋಕೆ ಎಂದೇ ಅಭಿಮಾನಿ ದೇವರುಗಳಿದ್ದಾರೆ ಎಂದಿದ್ದಾರೆ.
ವೈದ್ಯರು ನನ್ನ ನೋಡಿಕೊಂಡ ರೀತಿಯಿಂದ ಇನ್ನಷ್ಟು ಧೈರ್ಯ ಬಂತು. `45′ ಚಿತ್ರದ ಶೂಟಿಂಗ್ ಮಾಡುವಾಗ ಕಿಮೋ ಥೆರಪಿಯಲ್ಲಿ ಕೆಲಸ ಮಾಡಿದ್ದೀನಿ. ಕ್ಲೈಮ್ಯಾಕ್ಸ್ ಫೈಟ್ ಎಲ್ಲಾ ಮಾಡಿದ್ದೇನೆ ಎಂದು ಮನದಾಳದ ಮಾತು ಹಂಚಿಕೊಂಡರು.
ಅಮೆರಿಕಗೆ ಚಿಕಿತ್ಸೆಗೆ ಹೊರಡುವ ಡೇಟ್ ಹತ್ತಿರ ಬಂದಾಗ ಸ್ವಲ್ಪ ಟೆನ್ಷನ್ ಜಾಸ್ತಿ ಆಯಿತು. ಆದರೆ ಸದಾ ಪತ್ನಿ ಗೀತಾ ಮತ್ತು ಮಗಳು ನಿವಿ ನನ್ನ ಜೊತೆ ಬೆಂಬಲವಾಗಿ ನಿಂತಿದ್ದಾರೆ. ನನ್ನ ಚಿಕಿತ್ಸೆ ಮಾಡಿದ ವೈದ್ಯ ಮನೋಹರ್ ಅವರು ಮಗುವಿನಂತೆ ನನ್ನ ನೋಡಿಕೊಂಡರು. ಯೂರಿನರಿ ಬ್ಲಾಡ್ ತೆಗೆದು ಹೊಸದು ಬ್ಲಾಡ್ ಹಾಕಿದ್ದಾರೆ. ಯಾರು ಗಾಬರಿ ಆಗಬೇಡಿ ನಾನು ಆರಾಮ ಆಗಿದ್ದೇನೆ. ಐವಿಲ್’ಬಿ ಬ್ಯಾಕ್, ಡಬಲ್ ಪವರ್’ನೊಂದಿಗೆ ಬರುತ್ತೇನೆ. ಎಲ್ಲಾ ನನ್ನ ಅಭಿಮಾನಿ ದೇವರುಗಳಿಗೂ ಧನ್ಯವಾದಗಳು ಎಂದಿದ್ದಾರೆ.
ಅಲ್ಲದೆ ಶೀಘ್ರ ನಾನು ವಾಪಸ್ ಬರುತ್ತಿದ್ದೇನೆ ಎಂದ ಶಿವಣ್ಣ ಮಧು ಬಂಗಾರಪ್ಪರವರು ಸೇರಿದಂತೆ ಹಲವರ ಗುಣಗಾನ ಮಾಡಿದ್ದಾರೆ.
ಗೀತಾ ಶಿವರಾಜಕುಮಾರ್ ಅವರು ಮಾತನಾಡಿ,ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ನೀವೆಲ್ಲರೂ ಮಾಡಿದ ಪ್ರಾರ್ಥನೆಯಿಂದ ಶಿವರಾಜಕುಮಾರ್ ಎಲ್ಲಾ ರಿಪೋರ್ಟ್ ನೆಗೆಟಿವ್ ಬಂತು. ಅವರೀಗ ಕ್ಯಾನ್ಸರ್ ಫ್ರೀ ಅಂತ ವೈದ್ಯರು ಅಫಿಷಿಯಲಿ ಹೇಳಿದ್ದಾರೆ. ನಿಮ್ಮೆಲ್ಲರ ಹಾರೈಕೆಯಿಂದ ಅವರು ಗುಣಮುಖರಾಗಿದ್ದಾರೆ. ಇದನ್ನೂ ನಾನು ಎಂದಿಗೂ ಮರೆಯೋದಿಲ್ಲ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post