ಮಡಿಕೇರಿ: ಕೊಡಗಿಲ್ಲಿ ಪ್ರವಾಹದ ಭೀಕರತೆ ಸಾವಿರಾರು ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿದ್ದು, ಈಗಾಗಲೇ ಸೇನಾ ಕಾರ್ಯಾಚರಣೆ ಆರಂಭವಾಗಿದೆ.
ಈಗಾಗಲೇ ಸುಮಾರು 1300 ಕುಟುಂಬಗಳನ್ನು ರಕ್ಷಣೆ ಮಾಡಲಾಗಿದ್ದು, ಸಾವಿರಾರು ಮಂದಿಯನ್ನು ಸೇನೆ ರಕ್ಷಿಸಿದೆ.
ಆದರೆ, ಕ್ಷಣ ಕ್ಷಣಕ್ಕೆ ಪರಿಸ್ಥಿತಿ ಭೀಕರತೆ ಪಡೆಯತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಸೇನಾ ಸಿಬ್ಬಂದಿಯ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದರು.
ಈ ಮನವಿಗೆ ತತಕ್ಷಣವೇ ಸ್ಪಂದಿಸಿರುವ ಸಚಿವರು ತಂಡ ರವಾನೆಗೆ ಸೂಚನೆ ನೀಡಿದ್ದಾರೆ.
ಅತಿವೃಷ್ಟಿ ಪೀಡಿತ ಕೊಡಗು ಜಿಲ್ಲೆಯಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆ ಗೆ ಹೆಚ್ಚುವರಿ ಸೇನಾ ಸಿಬ್ಬಂದಿ ಯನ್ನು ನಿಯೋಜಿಸುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮಾಡಿದ ಮನವಿಗೆ ಸ್ಪಂದಿಸಿದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ.#KarnatakaRains #Kodagu pic.twitter.com/YeRtPb1a4A
— CM of Karnataka (@CMofKarnataka) August 17, 2018
ಹೆಲಿಕಾಪ್ಟರ್ ರವಾನೆಗೆ ಸಮ್ಮತಿ
ಇನ್ನು, ಸಂಕಷ್ಟದಲ್ಲಿ ಸಿಲುಕಿ ಸಹಾಯಕ್ಕಾಗಿ ಅಂಗಲಾಚುತ್ತಿರುವ ಮಂದಿಯ ರಕ್ಷಣೆಗಾಗಿ ಸೇನಾ ಹೆಲಿಕಾಪ್ಟರ್ ನೀಡುವಂತೆ ಸಿಎಂ ಕುಮಾರಸ್ವಾಮಿ ಕೋರಿದ್ದರು. ಇದಕ್ಕೆ ಸ್ಪಂದಿಸಿರುವ ಸಚಿವೆ ನಿರ್ಮಲಾ ಸೀತಾರಾಮನ್, ತತಕ್ಷಣವೇ ಹೆಲಿಕಾಪ್ಟರ್ ಜೊತೆಯಲ್ಲಿ ತಂಡ ರವಾನೆಗೆ ಸೂಚಿಸಿದ್ದಾರೆ.
Have directed @IAF_MCC to provide a helicopter tomorrow to Hon @CMofKarnataka for aerial survey of #KodaguFloods @mepratap @ShobhaBJP
— Nirmala Sitharaman (@nsitharaman) August 17, 2018
873 ಮಂದಿಯ ರಕ್ಷಣೆ
ಜಿಲ್ಲೆಗೆ ಆಗಮಿಸಿರುವ ಯೋಧರು ಇಲ್ಲಿಯವರೆಗೆ ಸುಮಾರು 873 ಮಂದಿಯನ್ನು ರಕ್ಷಿಸಿದ್ದಾರೆ. ನಿರಾಶ್ರಿತ ಕೇಂದ್ರಗಳಲ್ಲಿ ಸಾವಿರಕ್ಕೂ ಅಧಿಕ ಮಂದಿಗೆ ಆಶ್ರಯ ನೀಡಲಾಗಿದೆ.
Update on #KodaguFloods rescue efforts –
Since yesterday, @adgpi has deployed 1coln. (Team of 30 to 40 personnel equipped w/ rescue material) in the district. 1000+ persons rescued.
Another @adgpi coln to reach by tonight and both teams to continue ops tomorrow.@nsitharaman— Raksha Mantri (@DefenceMinIndia) August 17, 2018
ಝೀರೋ ಟ್ರಾಫಿಕ್ನಲ್ಲಿ ತಂಡ ರವಾನೆ
ತುರ್ತು ರಕ್ಷಣಾ ಕಾರ್ಯ ಕೈಗೊಳ್ಳುವುದಕ್ಕಾಗಿ ಬೆಂಗಳೂರಿನಿಂದ ಭಾರತೀಯ ಸೇನಾ ಪಡೆಯ ತಾಂತ್ರಿಕ ವಿಭಾಗದ 73 ಸೈನಿಕರನ್ನು ನಿನ್ನೆ ಸಂಜೆಯ ವೇಳೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿ ಕೊಡಗಿಗೆ ರವಾನಿಸಲಾಗಿದೆ.
ಯೋಧರಿಗೆ ಕರೆ
ಕ್ಷಿಪ್ರ ಕಾರ್ಯಪಡೆ ಅಪಾಯದಂಚಿನಲ್ಲಿದ್ದ ಮಕ್ಕಂದೂರಿನ 47 ಗ್ರಾಮಸ್ಥರನ್ನು ರಕ್ಷಣೆ ಮಾಡಿದೆ. 92 ವರ್ಷದ ಕಮಲಮ್ಮ ಸಹಿತ ನಾಲ್ಕು ಮಕ್ಕಳು ಇವರಲ್ಲಿ ಸೇರಿದ್ದಾರೆ. ಕುಗ್ರಾಮಗಳಲ್ಲಿ ಸಿಲುಕಿರುವವರನ್ನು ರಕ್ಷಿಸಲು ಡೋಗ್ರಾ ರೆಜ್ಮೆಂಟ್ನ 60 ಸೈನಿಕರು, 12 ಮಂದಿ ಪರಿಣಿತ ಮುಳುಗು ತಜ್ಞರು, ಅಗ್ನಿಶಾಮಕ ದಳ 200 ಸಿಬಂದಿ, ನಾಗರಿಕ ರಕ್ಷಣಾ ಪಡೆ ಕೊಡಗು ಜಿಲ್ಲೆಗೆ ಆಗಮಿಸುತ್ತಿದೆ ಎಂದು ಕಂದಾಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಈಗ ಮುಖ್ಯಮಂತ್ರಿಗಳ ಮನವಿಗೆ ತುರ್ತು ಸ್ಪಂದಿಸಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಆದೇಶದಂತೆ ಸೇನೆಯ ಹೆಚ್ಚುವರಿ ತಂಡ ಕೊಡಗಿಗೆ ಇಂದು ಆಗಮಿಸಲಿದ್ದು, ಕ್ಷಿಪ್ರ ಕಾರ್ಯಾಚರಣೆಯನ್ನು ಕೈಗೊಳ್ಳಲಿದೆ.
Update on #KodaguFloods rescue operations-
.@IAF_MCC has also deployed assets in Kodagu district of Karnataka. However, winching operations have not been possible today due to adverse weather conditions. Air operations to resume tomorrow morning.@nsitharaman
— Raksha Mantri (@DefenceMinIndia) August 17, 2018
Discussion about this post