ರಾಂಚಿ: ಲೋಕಸಭಾ ಚುನಾವಣೆಯಲ್ಲಿ ಆರ್’ಜೆಡಿ ಹೀನಾಯ ಸೋಲು ಅನುಭವಿಸಿರುವ ಪರಿಣಾಮ ತೀವ್ರ ನೊಂದಿರುವ ಅದರ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಊಟ-ತಿಂಡಿ ತ್ಯಜಿಸಿದ್ದಾರೆ ಎಂದು ವರದಿಯಾಗಿದೆ.
ಬಹುಕೋಟಿ ಮೇವು ಹಗರಣದಲ್ಲಿ ಅಪರಾಧಿ ಎಂದು ಶಿಕ್ಷೆಗೆ ಗುರಿಯಾಗಿ ಜೈಲು ಪಾಲಾಗಿರುವ ಲಾಲೂ, ಚುನಾವಣೆಯಲ್ಲಿ ತಮ್ಮ ಪಕ್ಷದ ಸೋಲಿನ ಹಿನ್ನೆಲೆಯಲ್ಲಿ ಆಘಾತಗೊಂಡಿದ್ದು, ಇವರನ್ನು ಆರ್’ಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮಗಳಿಗೆ ಮಾತನಾಡಿರುವ ಆಸ್ಪತ್ರೆಯ ವೈದ್ಯರು, ಆಸ್ಪತ್ರೆಯಲ್ಲಿ ಯಾವುದೇ ರೀತಿಯ ಊಟ ಹಾಗೂ ತಿಂಡಿಯನ್ನು ಸೇವನೆ ಮಾಡದೇ ತಿರಸ್ಕರಿಸಿದ್ದಾರೆ. ಅವರು ಪ್ರತಿದಿನ ನಿಯಮಿತವಾಗಿ ಔಷಧಿಗಳನ್ನು ತೆಗೆದುಕೊಳ್ಳಬೇಕು. ಆದರೆ, ಅವರು ಆಹಾರ ತೆಗೆದುಕೊಳ್ಳದೇ ಇರುವ ಕಾರಣ ಆರೋಗ್ಯದಲ್ಲಿ ಏರುಪೇರಾಗುತ್ತಿದೆ ಎಂದಿದ್ದಾರೆ.

















