ಕಲ್ಪ ಮೀಡಿಯಾ ಹೌಸ್ | ಅಹಮದಾಬಾದ್ |
ಗುಜರಾತ್‌ನ ಅಂಕಲೇಶ್ವರದ ಗುಜರಾತ್ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್(ಜಿಐಡಿಸಿ)ನಲ್ಲಿರುವ ಡಿಟಾಕ್ಸ್ ಇಂಡಿಯಾ ಕಂಪನಿಯ ಎಂಇ ಪ್ಲಾಂಟ್‌ನಲ್ಲಿ ಸ್ಟೀಮ್ ಪ್ರೆಶರ್ ಪೈಪ್ ಒಡೆದು ಸ್ಫೋಟ #Blast ಸಂಭವಿಸಿದ್ದು, ಘಟನೆಯಲ್ಲಿ ನಾಲ್ವರು ಕಾರ್ಮಿಕರು ಮೃತಪಟ್ಟು ಮತ್ತು ನಾಲ್ವರು ಗಾಯಗೊಂಡಿದ್ದಾರೆ.
ಮಂಗಳವಾರ ಮಧ್ಯಾಹ್ನ ಕಂಪನಿಯ ಪ್ಲಾಂಟ್‌ನಲ್ಲಿ ಫೀಡ್ ಟ್ಯಾಂಕ್‌ಗೆ ಕಾರ್ಮಿಕರು ರೇಲಿಂಗ್‌ಗಳನ್ನು ಅಳವಡಿಸುತ್ತಿದ್ದಾಗ ವೆಲ್ಡಿಂಗ್ ಸಮಯದಲ್ಲಿ ಹಠಾತ್ ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
Also read: ಶೀಘ್ರದಲ್ಲೇ ಆಶ್ರಯ ಮನೆ ಹಸ್ತಾಂತರಿಸಿ | ವಸತಿ ಸಚಿವರಿಗೆ ತಂಗರಾಜ್ ಮನವಿ
ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಸುರಕ್ಷತೆ ಹಾಗೂ ಆರೋಗ್ಯ ಇಲಾಖೆಯ ತಂಡ ತಕ್ಷಣ ಧಾವಿಸಿದ್ದು, ಪೊಲೀಸ್ ಬಂದೋಬಸ್ತ್‌ನಲ್ಲಿ ಕಾರ್ಯಾಚರಣೆ ಭರದಿಂದ ಸಾಗಿದೆ.
ಘಟನೆಗೆ ಸಂಬಂಧಿಸಿದಂತೆ ಭರೂಚ್ ಬಿಜೆಪಿ ಸಂಸದ ಮನ್ಸುಖ್ ವಾಸವಾ ಅವರು ಸಂತಾಪ ಸೂಚಿಸಿದ್ದು, ಈ ಅವಘಡಕ್ಕೆ ಗುಜರಾತ್ ಮಾಲಿನ್ಯ ನಿಯಂತ್ರಣ ಮಂಡಳಿ(ಜಿಪಿಸಿಬಿ) ಅಧಿಕಾರಿಗಳೇ ಹೊಣೆ ಎಂದು ಆರೋಪಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post