ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ತೀರ್ಥಹಳ್ಳಿ: ತಾಲೂಕಿನ ಕಟ್ಟೆಹಕ್ಲು ಸಮೀಪದ ಹೆದ್ದೂರು ಗ್ರಾಮದಲ್ಲಿ ಅಡಿಕೆ ನುಂಗಿ ಸಾವನ್ನಪ್ಪಿದ ಮನಕಲುಕುವ ಘಟನೆ ಜರುಗಿದೆ.
ಮೃತ ಮಗುವನ್ನು ಹೆದ್ದೂರಿನ ಒಂದು ವರ್ಷದ ಅರ್ಚನಾ ಸಂದೇಶ್ ಶ್ರೀಹಾನ್ ಎಂದು ಗುರುತಿಸಲಾಗಿದೆ. ಆಡುತ್ತಿದ್ದ ಮಗು ಅಡಿಕೆ ನುಂಗಿ ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ವರದಿಯಾಗಿದೆ.
ಅಡಿಕೆ ನುಂಗಿದ ತಕ್ಷಣವೇ ಮಗುವನ್ನು ಕಟ್ಟೆಹಕ್ಲು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿತ್ತಾದರೂ ಆರೋಗ್ಯ ತೀವ್ರ ಕ್ಷೀಣಿಸಿದ ಕಾರಣ ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ಕರೆತಲಾಗಿದೆ. ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post