ಉತ್ತರಪ್ರದೇಶ: ಮಹತ್ವ ಬೆಳವಣಿಗೆಯೊಂದರಲ್ಲಿ ಉತ್ತರ ಪ್ರದೇಶದ ಅಲಹಾಬಾದ್ ನಗರವನ್ನು ಇನ್ನು ಮುಂದೆ ಪ್ರಯಾಗ್‌ರಾಜ್ ಎಂದು ಮರುನಾಮಕರಣ ಮಾಡಿ ಅಧಿಕೃತಗೊಳಿಸಲು ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಅಸ್ತು ಎಂದಿದೆ.
ಈ ಕುರಿತಂತೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದ್ದು, ಇನ್ನು ಮುಂದೆ ಅಧಿಕೃತವಾಗಿ ಎಲ್ಲ ಕಡೆಗಳಲ್ಲೂ ಅಲಹಬಾದ್ ಬದಲಾಗಿ ಪ್ರಯಾಗ್‌ರಾಜ್ ಎಂಬ ಹೆಸರನ್ನೇ ಬಳಸಬೇಕು ಎಂದು ಆದೇಶಿಸಿದೆ.
ಈ ಕುರಿತಂತೆ ಕಳೆದ ಶನಿವಾರ ಮಾತನಾಡಿದ್ದ ಸಿಎಂ ಯೋಗಿ, ಗಂಗಾ ಹಾಗೂ ಯುಮನಾ ಪವಿತ್ರ ನದಿಗಳು ಸೇರುವ ಹಿನ್ನೆಲೆಯಲ್ಲಿ ಇದಕ್ಕೆ ಅರ್ಥ ಬರುವಂತೆ ಮರುನಾಮಕರಣ ಮಾಡಲು ಚಿಂತನೆ ನಡೆಸಿದ್ದೇವೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ಇದಕ್ಕೆ ಪ್ರಯಾಗ್ ರಾಜ್ ಎಂದು ಮರು ನಾಮಕರಣ ಮಾಡಲಾಗಿದೆ.
ಪ್ರಮುಖವಾಗಿ 2019ರ ಕುಂಭಮೇಳಕ್ಕೆ ಸಿದ್ದತೆಗಳು ನಡೆಯುತ್ತಿರುವ ಬೆನ್ನಲ್ಲೇ, ಹೆಸರು ಬದಲಾವಣೆ ಮಹತ್ವ ಪಡೆದಿದೆ.
2019ರ ಜನವರಿ 15ರಿಂದ ಆರಂಭವಾಗುವ ಈ ಬಾರಿಯ ಕುಂಭಮೇಳವನ್ನು ಅಲಹಾಬಾದ್ ಕುಂಭಮೇಳದ ಬದಲಾಗಿ ಅಧಿಕೃತವಾಗಿ ಪ್ರಯಾಗ್ ರಾಜ್ ಕುಂಭಮೇಳ ಎಂದು ನಮೂದಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
Discussion about this post