ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಮೊಬೈಲ್ #Mobile ಬಳಕೆದಾರರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಇನ್ಮುಂದೆ ಮೊಬೈಲ್ ಕಾಲ್ ಬಂದಾಗ ನಂಬರ್ ಜೊತೆಯಲ್ಲಿ ಕರೆ ಮಾಡಿದವರ ಹೆಸರೂ ಸಹ ಡಿಸ್ಪ್ಲೇ ಆಗುವಂತೆ ತಂತ್ರಜ್ಞಾನ ಜಾರಿಗೆ ತರಲು ಚಿಂತನೆ ನಡೆಸಿದೆ.
ಈ ಕುರಿತಂತೆ ಟಿಆರ್’ಎಐ #TRAI ಕ್ರಾಂತಿಕಾರಕ ಬದಲಾವಣೆಗೆ ಚಿಂತನೆ ನಡೆಸಿದ್ದು, ಗ್ರಾಹಕರಿಗೆ ಆಗುತ್ತಿರುವ ಕಿರಿಕಿರಿಯನ್ನು ತಪ್ಪಿಸಲು ಈ ಕ್ರಮಕ್ಕೆ ಮುಂದಾಗಿದೆ.
ಈ ಕ್ರಮದಿಂದಾಗಿ ಅಪರಿಚಿತ ಸಂಖ್ಯೆಯಿಂದ #UnknownNumber ಯಾರು ಕರೆ ಮಾಡುತ್ತಿದ್ದಾರೆ ಎಂಬುದನ್ನು ಗ್ರಾಹಕರಿಗೆ ಅನುಕೂಲವಾಗುತ್ತದೆ.
Also read: ಫೆ.26: ಸಂಸ್ಕೃತ ಬೋರ್ಡ್ ರಾರಾಜಿಸುವ 554 ಅಮೃತ್ ಭಾರತ್ ರೈಲು ನಿಲ್ದಾಣಕ್ಕೆ ಪ್ರಧಾನಿ ಶಂಕುಸ್ಥಾಪನೆ
ಅಲ್ಲದೇ, ಸ್ಪಾಮ್’ಗಳ #Spam ತಡೆಗೆ ಸಹಕಾರಿಯಾಗಿದ್ದು, ಚಂದಾದಾರರಿಗೆ ಕಾಲರ್ ಗುರುತಿನ ಸಾಮರ್ಥ್ಯಗಳನ್ನೂ ಸಹ ಹೆಚ್ಚಿಸುತ್ತದೆ.
ಗ್ರಾಹಕರ ಅರ್ಜಿ ನಮೂನೆಯಲ್ಲಿ ಚಂದಾದಾರರು ಒದಗಿಸಿದ ಹೆಸರು ಗುರುತಿನ ಮಾಹಿತಿಯನ್ನು ಸಿಎನ್’ಎಪಿ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.
ಬಹಳಷ್ಟು ಚಂದಾದಾರರು ಅಪರಿಚಿತ ದೂರವಾಣಿ ಸಂಖ್ಯೆಗಳಿಂದ ಬರುವ ಕರೆಗಳನ್ನು ಸ್ವೀಕರಿಸಲು ಬಯಸುವುದಿಲ್ಲ. ಹೀಗಾಗಿ, ನಿಜವಾದ ಹಾಗೂ ಅಗತ್ಯವಾದ ಕರೆಗಳನ್ನೂ ಸಹ ಸ್ವೀಕರಿಸುವಲ್ಲಿ ತೊಂದರೆಯಾಗುತ್ತಿದೆ ಎಂದು ದೂರಿದ್ದಾರೆ. ಹೀಗಾಗಿ, ಈ ಕ್ರಮಕ್ಕೆ ಚಿಂತಿಸಲಾಗಿದೆ ಎಂದು ಟಿಆರ್’ಎಐ ಹೇಳಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post