ಶ್ರೀನಗರ: ತನ್ನ ಮೂವರು ಸಹೋದ್ಯೋಗಿಗಳನ್ನು ಸಿಆರ್’ಪಿಎಫ್ ಯೋಧನೊಬ್ಬ ಗುಂಡಿಟ್ಟು ಕೊಂದಿರುವ ದುರ್ಘಟನೆ ಉಧಮ್’ಪುರ ಕ್ಯಾಂಪ್’ನಲ್ಲಿ ನಡೆದಿದೆ.
ಜಮ್ಮು ಕಾಶ್ಮೀರದ ಬಟಾಲ್ ಬಾಲಿಯಾ ಕ್ಯಾಂಪ್’ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 187ನೆಯ ಬೆಟಾಲಿಯನ್ ಯೋಧ ಈ ಕೃತ್ಯ ಎಸಗಿದ್ದಾನೆ.
ವರದಿಗಳ ಅನ್ವಯ, ಈ ಯೋಧರ ನಡುವೆ ಕ್ಷುಲ್ಲಕ ವಿಚಾರಕ್ಕೆ ವಾಗ್ವಾದ ನಡೆದಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಪೈಕಿ ಓರ್ವ ಯೋಧ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ್ದು, 3 ಯೋಧರು ಮೃತಪಟ್ಟಿದ್ದಾರೆ.
ಘಟನೆ ನಂತರ ಆ ಯೋಧ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತೀವ್ರವಾಗಿ ಗಾಯಗೊಂಡಿರುವ ಆತನನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
Discussion about this post