ಚಂಡೀಘಡ: ಪಂಜಾಬ್‌ನ ಅಮೃತಸರದ ಬಳಿ ನಿನ್ನೆ ಸಂಭವಿಸಿದ ಗ್ರೆನೇಡ್ ದಾಳಿಯನ್ನು ಭಯೋತ್ಪಾದಕ ಕೃತ್ಯ ಎಂದು ಪೊಲೀಸರು ದಾಖಲಿಸಿಕೊಂಡಿದ್ದು, ಇದರಲ್ಲಿ ಸ್ಥಳೀಯ ಯುವಕರ ಪಾತ್ರ ಇರುವ ಕುರಿತಾಗಿ ತನಿಖೆ ಆರಂಭಿಸಿದ್ದಾರೆ.
ಈ ಕುರಿತಂತೆ ತನಿಖೆ ಆರಂಭಿಸಿರುವ ಪೊಲೀಸರು, ಮಾಹಿತಿಗಳ ಆಧಾರದಲ್ಲಿ ಸ್ಥಳೀಯ ಯುವಕರ ಪಾತ್ರದ ಕುರಿತಾಗಿ ಬಲವಾದ ಸಂಶಯವಿದೆ ಎಂದಿದ್ದಾರೆ.
ಮಾಹಿತಿಯಂತೆ ದಾಳಿ ನಡೆಸಿರುವ ಯುವಕರು ಆಶ್ರಮದ ಸನಿಹದಲ್ಲಿ ಹಲವು ಬಾರಿ ಸಂಚರಿಸಿರುವ ಕುರಿತಾಗಿ ಸಾಕ್ಷಿಗಳು ದೊರೆತಿದ್ದು, ಧಾರ್ಮಿಕ ಶಾಂತಿ ಕದಡಲು ಸಂಚು ರೂಪಿಸಿ, ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
NIA team visited the blast site late last night along with their investigators and explosive experts. Held discussions with Punjab DGP and DG Intelligence: Media Advisor to Punjab CM #AmritsarBlast https://t.co/nl25AMGhVa
— ANI (@ANI) November 19, 2018
ಈ ನಡುವೆ, ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಹಲವು ಆಯಾಮಗಳನ್ನು ತನಿಖೆ ಆರಂಭಿಸಿದೆ.
ಪಂಜಾಬ್‌ನ ಅಮೃತಸರದ ಬಳಿಯಿರುವ ನಿರಾನ್ಕಾರಿಯ ಆಶ್ರಮದ ಮೇಲೆ ನಿನ್ನೆ ದುಷ್ಕರ್ಮಿಗಳು ಗ್ರೆನೇಡ್ ದಾಳಿ ನಡೆಸಿದ್ದು, ಮೂವರು ಸಾವನ್ನಪ್ಪಿ, 20ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
Discussion about this post