ಕಲ್ಪ ಮೀಡಿಯಾ ಹೌಸ್ | ದಕ್ಷಿಣ ಕನ್ನಡ |
ಅನನ್ಯಾ ಭಟ್ ನಾಪತ್ತೆ ಪ್ರಕರಣಕ್ಕೆ ಸ್ಫೋಟಕ ತಿರುವು ದೊರೆತಿದ್ದು, ತಾವು ಹೇಳಿದ್ದು ಸುಳ್ಳು ಎಂದು ಸುಜಾತಾ ಭಟ್ ತಪ್ಪೊಪ್ಪಿಕೊಂಡಿದ್ದಾರೆ.
ವಿವಿಧ ಮಾಧ್ಯಮಗಳಿಗೆ ಸಂದರ್ಶನ ನೀಡಿರುವ ಸುಜಾತಾ ಭಟ್, ಅನನ್ಯ ಭಟ್ ಎಂಬ ಮಗಳೇ ನನಗೆ ಇಲ್ಲ. ನಾನು ಹೇಳಿದ್ದು ಸುಳ್ಳು. ಕೆಲವು ವ್ಯಕ್ತಿಗಳು ನನ್ನನ್ನು ದುರುಪಯೋಗ ಮಾಡಿಕೊಂಡು ನನ್ನ ಬಾಯಿಂದ ಸುಳ್ಳು ಹೇಳಿಸಿದರು ಎಂದು ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಏಕಾಏಕಿ ಸುಜಾತಾ ಭಟ್ ಉಲ್ಟಾ ಹೊಡೆದಿದ್ದು, ನಾನು ಸುಳ್ಳು ಹೇಳಿದ್ದೇನೆ, ನನಗೆ ಹೀಗೆ ಸುಳ್ಳು ಹೇಳು ಎಂದು ಕೆಲವರು ಹೇಳಿ ಕೊಟ್ಟರು ಎಂದಿದ್ದಾರೆ.

ನಾನು ದುಡ್ಡಿಗೊಸ್ಕರ ಯಾವುದೇ ರೀತಿಯ ಡಿಮ್ಯಾಂಡ್ ಮಾಡಿಲ್ಲ. ನಾನು ಯಾರು ಕೂಡ ದುಡ್ಡು ಕೊಡ್ತೀನಿ ಎಂದು ನನಗೆ ಹೇಳಲಿಲ್ಲ. ನಮ್ಮ ಆಸ್ತಿ ಜೈನರಿಗೆ ಕೊಟ್ಟಿದ್ದರು. ಆದರೆ, ನನ್ನ ಸಹಿ ಇಲ್ಲದೇ ಆಸ್ತಿಯನ್ನು ಹೇಗೆ ಕೊಟ್ಟಿರಿ ಎಂದು ಕೇಳಿದೆ. ನನ್ನ ತಾತನ ಆಸ್ತಿ ಅದು ಮೊಮ್ಮಕ್ಕಳಿಗೆ ಸಿಗಬೇಕಿತ್ತು ಅಷ್ಟೇ. ಅದಕ್ಕೆ ಹೀಗೆ ಮಾಡಿದ್ದೇನೆ ಎಂದಿದ್ದಾರೆ.
ನಾನು ಕೋಟ್ಯಂತರ ಜನರ ಭಾವನೆಗೆ ಧಕ್ಕೆ ತಂದಿದ್ದೇನೆ. ಧರ್ಮಸ್ಥಳ ಭಕ್ತರಿಗೆ ನನ್ನಿಂದ ನೋವಾಗಿದೆ. ಹೀಗಾಗಿ, ರಾಜ್ಯದ ಹಾಗೂ ದೇಶದ ಜನರ ಮುಂದೆ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post