ಕಲ್ಪ ಮೀಡಿಯಾ ಹೌಸ್ | ಆನವಟ್ಟಿ (ಸೊರಬ) |
ಚಾಲಕನ ನಿಯಂತ್ರಣ ತಪ್ಪಿದ ಜೀಪ್ ಕಂಬಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ನೆಗವಾಡಿ ಗ್ರಾಮದ ಸಮೀಪದ ಹಿರೇಮಾಗಡಿ ಕ್ರಾಸ್ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ನಿನ್ನೆ ರಾತ್ರಿ ಸುಮಾರು 11.30ರವೇಳೆಗೆ ಘಟನೆ ನಡೆದಿದೆ ಎಂದು ವರದಿಯಾಗಿದೆ.
Also read: ಪರಿಸರ ಮಹತ್ವದ ಅರಿವು ನೀಡುವ ಪ್ರಯತ್ನ ನಿತ್ಯ ಕಾಯಕದ ಭಾಗವಾಗಬೇಕು: ಪ್ರತಿಭಾ ಇಸ್ಲೂರು
ಕಣಸೋಗಿಯಿಂದ ಎಸ್.ಎನ್. ಕೊಪ್ಪ ಕಡೆಗೆ ಹೋಗುತ್ತಿದ್ದ ಜೀಪ್’ನಲ್ಲಿ ಕಬ್ಬೂರು, ಎಸ್.ಎನ್. ಕೊಪ್ಪ, ಕಣಸೋಗಿ ಗ್ರಾಮದ 8 ಜನ ಪ್ರಯಾಣಿಸುತ್ತಿದ್ದರು. ಹೆದ್ದಾರಿ ಅಂಚಿನಲ್ಲಿದ್ದ ಸಿಮೆಂಟ್ ಕಂಬಗಳಿಗೆ ಜೀಪ್ ಡಿಕ್ಕಿ ಹೊಡೆದು ಗದ್ದುಗೆ ಉರುಳಿದೆ.
ಚಿಕ್ಕಕಬ್ಬೂರು ಗ್ರಾಮದ ಹನುಮಂತಪ್ಪ (50) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತಲ್ಲೂರು ವಡ್ಡಿಗೇರಿ ಗ್ರಾಮದ ಲಕ್ಷ್ಮವ್ವ (46) ಮತ್ತು ಕಣಸೋಗಿ ಗ್ರಾಮದ ರೇಣುಕಮ್ಮ (65) ಶಿಕಾರಿಪುರದ ಆಸ್ಪತ್ರೆಯಲ್ಲಿ ಮೃತಪಟ್ಟರು. ಆನವಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post