ಅಮರಾವತಿ: ಆಂಧ್ರಪ್ರದೇಶ ವಿಧಾನಸಭೆಗೆ ನಡೆದ ಚುನಾವಣಾ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಮಾಜಿ ಸಿಎಂ ದಿವಂಗತ ವೈ.ಎಸ್.ಆರ್. ಪುತ್ರ ಜಗನ್ ಅಬ್ಬರಕ್ಕೆ ಹಾಲಿ ಸಿಎಂ ಚಂದ್ರಬಾಬು ನಾಯ್ಡು ಕೊಚ್ಚಿ ಹೋಗಿದ್ದು, ಹೀನಾಯವಾಗಿ ಸೋಲನ್ನಪ್ಪಿದ್ದಾರೆ.
175 ಕ್ಷೇತ್ರಗಳಲ್ಲಿ ಜಗನ್ ನೇತೃತ್ವದ ವೈಎಸ್’ಆರ್’ಪಿ 149 ಕ್ಷೇತ್ರಗಳಲ್ಲಿ ಐತಿಹಾಸಿಕ ಜಯ ದಾಖಲಿಸಿದ್ದು, ನಾಯ್ಡು ನೇತೃತ್ವದ ಟಿಡಿಪಿ ಕೇವಲ 25 ಕ್ಷೇತ್ರಗಳಿಗೆ ತೃಪ್ತಿ ಪಟ್ಟುಕೊಂಡಿದ್ದರೆ, ಜನಸೇನಾ ಪಕ್ಷ ಕೇವಲ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ.
ವೈಎಸ್’ಆರ್’ಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 1 ಸುದ್ದಿಗೋಷ್ಠಿ ನಡೆಸಲಿರುವ ಹಾಲಿ ಸಿಎಂ ನಾಯ್ಡು, ಆನಂತರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ. ಅಲ್ಲದೇ, ಇಂದು ಸಂಜೆ 5 ಗಂಟೆಗೆ ಜಗನ್ ಸಹ ಸುದ್ದಿಗೋಷ್ಠಿ ನಡೆಸಲಿದ್ದು, ತೆಲುಗು ನೆಲದಲ್ಲಿ ಸಂಭ್ರಮ ಮನೆ ಮಾಡಿದೆ.
Discussion about this post