ಕಲ್ಪ ಮೀಡಿಯಾ ಹೌಸ್ | ಅಂಕೋಲ |
ಭಾರೀ ಮಳೆಯಿಂದಾಗಿ ಅಂಕೋಲಾ ಗುಡ್ಡ ಕುಸಿತದಲ್ಲಿ #Ankola hill collapse ಕಾಣೆಯಾದವರ ಪತ್ತೆಗೆ ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಗಂಗಾವಳಿ ನದಿಯ ತೀರದ ಕಡೆಗಳಲ್ಲಿ ಕಾಣೆಯಾದವರನ್ನು ಪತ್ತೆ ಮಾಡಲು ಹೆಲಿಕ್ಯಾಪ್ಟರ್ ಮೂಲಕ ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು.
ಇನ್ನು, ನದಿಯಲ್ಲಿ ಕಾಣೆಯಾದ ಲಾರಿಯ ನಿಖರವಾದ ಸ್ಥಳಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಹಾಗೂ ಭಾರತೀಯ ನೌಕಾದಳದ ಅಧಿಕಾರಿಗಳ ತಂಡ ಹಡಗಿನ ಮೂಲಕ ತೆರಳಿ ಪರಿಶೀಲನೆ ನಡೆಸಿದರು.
Also read: ಗಮನಿಸಿ! ಜುಲೈ 31ರವರೆಗೂ ಚಿಕ್ಕಮಗಳೂರಿನ ಈ ಪ್ರದೇಶಗಳಿಗೆ ಪ್ರವೇಶ ನಿಷಿದ್ಧ
ಬೂಮ್ ಯಂತ್ರ ಬಳಕೆ
ಇನ್ನು, ಗಂಗಾವಳಿ ನದಿಯಲ್ಲಿ ಶೇಖರಣೆಗೊಂಡ ಮಣ್ಣಿನಡಿ ಹುದುಗಿರುವುದು ಖಚಿತವಾಗಿದೆ. ಆದರೆ ನಿರ್ದಿಷ್ಟ ಸ್ಥಳ ಹಾಗೂ ಲಾರಿ ಹೊರಕ್ಕೆ ತರಲು ಗುರುವಾರ ಕಾರ್ಯಾಚರಣೆ ನಡೆಯಲಿದೆ.
ಕಣ್ಮರೆಯಾದವರ ಶೋಧಕ್ಕಾಗಿ ಬೂಮ್ ಯಂತ್ರ ಬುಧವಾರ ಬೆಳಗ್ಗೆಯಿಂದಲೆ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ. ಘಟನೆ ನಡೆದು 9 ದಿನ ಕಳೆದಿದ್ದು ಹತ್ತಾರು ಸವಾಲುಗಳ ನಡುವೆ ಕಾರ್ಯಾಚರಣೆ ನಡೆದಿದೆ.
ಗುಡ್ಡದ ಮಣ್ಣಿನ ರಾಶಿಯಲ್ಲಿ ಹುದುಗಿ ಹೋಗಿರುವ ಬೆಂಜ್ ಟ್ರಕ್ ಹಾಗೂ ಸಿಲುಕಿಕೊಂಡಿರುವ 3 ಜನರನ್ನು ಹೊರತೆಗೆಯಲು ಕಳೆದ ಎಂಟು ದಿನಗಳಿಂದ ಹತ್ತಾರು ಬಗೆಯ ಪ್ರಯತ್ನವನ್ನು ಮಾಡಲಾಗಿದೆ. ಆದರೆ ಗಂಗಾವಳಿ ನದಿ ದಂಡೆಯಿಂದ ಸುಮಾರು 130 ಅಡಿಗಳಷ್ಟು ಉದ್ದ ಹಾಗೂ 300 ಅಡಿಗಳಷ್ಟು ವಿಶಾಲವಾಗಿ ಹರಡಿಕೊಂಡಿರುವ ಮಣ್ಣಿನ ರಾಶಿಯಲ್ಲಿ ತುಂಬಿಕೊಂಡಿರುವ ಕಲ್ಲು ಬಂಡೆಗಳು ಕಾರ್ಯಾಚರಣೆಗೆ ಅಡ್ಡಿಯಾಗಿ ಪರಿಣಮಿಸಿದೆ. ಹುದುಗಿಕೊಂಡಿರುವ ಬೆಂಜ್ ಲಾರಿಯನ್ನು ರೆಡಾರ್ ಬಳಸಿ ಶೋಧ ಮಾಡಲು ಮುಂದಾಗಿದ್ದರು.
ಆದರೆ ಒಣಮಣ್ಣಿನಲ್ಲಿ ಶೋಧ ಕಾರ್ಯದ ವರದಿಯನ್ನು ಮಾತ್ರವೇ ನೀಡುವ ರೆಡಾರ್ ತೇವಾಂಶವಿರುವ ಮಣ್ಣಿನಲ್ಲಿರುವ ಮಾಹಿತಿ ಒದಗಿಸಲಾರದೇ ಕೈಗೊಂಡ ಪ್ರಯತ್ನ ವಿಫಲವಾದಂತಾಗಿದೆ. ಆದರೆ ಕಣ್ಮರೆಯಾದ ಲಾರಿಯಲ್ಲಿದ್ದ 32 ಸಾಗುವಾನಿ ಕಟ್ಟಿಗೆ ತುಂಡುಗಳು ಸಮುದ್ರದಲ್ಲಿ ಪತ್ತೆಯಾಗಿದ್ದರಿಂದ ಲಾರಿ ಗಂಗಾವಳಿ ನದಿಯ¯್ಲೆÃ ಇದೆ ಎಂಬುದು ಖಚಿತವಾಗಿದ್ದು, ಇಂದು ಕಾರ್ಯಾಚರಣೆ ತೀವ್ರಗೊಂಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post