ಕಲ್ಪ ಮೀಡಿಯಾ ಹೌಸ್ | ಅಂಕೋಲಾ |
ಅಂಕೋಲಾ ತಾಲ್ಲೂಕಿನ ಹಟ್ಟಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ 16 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಶಾಸಕಿ ರೂಪಾಲಿ ನಾಯಕ್ ಭೂಮಿ ಪೂಜೆ ನೆರವೇರಿಸಿದರು.
ಮುಖ್ಯವಾಹಿನಿಯಿಂದ ವಂಚಿತವಾಗಿದ್ದ ಹಟ್ಟಿಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಳೆ ಹೋಗುವ ಮಾರ್ಗದಲ್ಲಿ ಫಾರೆಸ್ಟ್ ಡಿಪೋದಿಂದ ಗುಳೆ ಹೋಗುವ ರಸ್ತೆ 15 ಲಕ್ಷ, ಕೆಂದಗಿ ದೊಡ್ಡಹಳ್ಳಕ್ಕೆ ಸೇತುವೆ ನಿರ್ಮಾಣ 25 ಲಕ್ಷ, ಕೋಟೆಬಾವಿ ಶೆಟ್ಟಿಹಳ್ಳಕ್ಕೆ ಸೇತುವೆ ನಿರ್ಮಾಣ 22 ಲಕ್ಷ, ಗುಡಿಗಲ್ಲು ಹಳ್ಳಕ್ಕೆ ಸೇತುವೆ ನಿರ್ಮಾಣ 12 ಲಕ್ಷ, ಲಕ್ಕೆಗುಳಿ ಕಂಬದ ಹಳ್ಳಕ್ಕೆ ಸೇತುವೆ ನಿರ್ಮಾಣ 20 ಲಕ್ಷ, ಬೆತ್ತಹಳ್ಳಕ್ಕೆ ಸೇತುವೆ ನಿರ್ಮಾಣ 16 ಲಕ್ಷ, ಒತ್ತಿನ ಹಳ್ಳಕ್ಕೆ ಸೇತುವೆ ನಿರ್ಮಾಣ 16 ಲಕ್ಷ, ಬೊಕ್ಕಲ ಹಳ್ಳಕ್ಕೆ ಸೇತುವೆ ನಿರ್ಮಾಣಕ್ಕೆ 16 ಲಕ್ಷ ವೆಚ್ಚದ ಕಾಮಗಾರಿ ಸೇರಿದಂತೆ ಹಲವು ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ದೇವಳಮಕ್ಕಿಯಿಂದ ದೇವಿಗದ್ದೆ ತನಕ ಹಾಲಕ್ಕಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಮೂಲಭೂತ ಸೌಲಭ್ಯ, ವೃದ್ಧಾಪ್ಯ ವೇತನ, ಆಯುಷ್ಮಾನ್ ಕಾರ್ಡ, ವಿಧವಾ ವೇತನ ಹೀಗೆ ಸರ್ಕಾರದಿಂದ ಯಾವುದೇ ಸೌಲಭ್ಯ ಅರ್ಹರಿಗೆ ಕೊಡಿಸಲು ಅಗತ್ಯ ಸೌಲಭ್ಯ ಮಾಡಿಕೊಡುವುದಾಗಿ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಂಕೋಲಾ ಮಂಡಲದ ಅಧ್ಯಕ್ಷರು, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಬಿಜೆಪಿ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















