ಶ್ರೀನಗರ: ಭಾರತೀಯ ಸೇನೆ ನಿನ್ನೆ ರಾತ್ರಿ ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಪುಲ್ವಾಮಾ ನಿವಾಸಿಯಾಗಿದ್ದ ನಟೋರಿಯಸ್ ಉಗ್ರ ಅಬ್ದುಲ್ ಹಮೀದ್ ಲೆಲ್ಹಾರಿ ಸೇರಿದಂತೆ ಮೂವರನ್ನು ಹೊಡೆದುರುಳಿಸಲಾಗಿದೆ.
ಇಂದು ಬಲಿಯಾದ ಲೆಲ್ಹಾರಿ, ತ್ರಾಲ್ ನಲ್ಲಿ ನಡೆದ ಎನ್’ಕೌಂಟರ್’ನಲ್ಲಿ ಝಾಕಿರ್ ಮೂಸಾ ಉತ್ತರಾಧಿಕಾರಿ ಹಾಗೂ ಅನ್ಸರ್ ಘಜ್ವತ್ ಉಲ್ ಹಿಂದ (ಎಜಿಎಚ್) ಮುಖ್ಯಸ್ಥನಾಗಿದ್ದ.
ಜಮ್ಮು ಕಾಶ್ಮೀರದ ಆವಂತಿಪೋರಾ ಜಿಲ್ಲೆಯಲ್ಲಿ ನಿನ್ನೆ ಸಂಜೆಯಿಂದ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ದಾಳಿ ಆರಂಭಗೊಂಡಿತ್ತು. ಈ ಸಂದರ್ಭದಲ್ಲಿ ಭದ್ರತಾ ಪಡೆಯ ದಾಳಿಯಲ್ಲಿ ಪುಲ್ವಾಮಾ ನಿವಾಸಿ, ಉಗ್ರ ಹಮೀದ್ ಲಾಲ್ಹಾರಿ ಬಲಿಯಾಗಿರುವುದಾಗಿ ವರದಿಯಾಗಿದೆ.
ಅಲ್ ಖೈದಾ ನಿಕಟವರ್ತಿ ಸಂಘಟನೆಯಾದ ಅನ್ಸಾರ್ ಘಾಝ್ವಾತ್ ವುಲ್ ಹಿಂದ್(ಎಜಿಎಚ್) ಗೆ ಲೆಲ್ಹಾರಿಯನ್ನು ನೂತನ ಕಮಾಂಡರ್’ನನ್ನಾಗಿ ನೇಮಕ ಮಾಡಲಾಗಿತ್ತು.
ಸೇನಾ ಕಾರ್ಯಾಚರಣೆಯಲ್ಲಿ ನವೀದ್ ಟಕ್, ಜುನೈದ್ ಭಟ್ ಎಂಬ ಮತ್ತಿಬ್ಬರು ಉಗ್ರರರನ್ನೂ ಸೇನಾಪಡೆ ಹತ್ಯೆ ಮಾಡಲಾಗಿದ್ದು, ಕಾರ್ಯಾಚರಣೆ ನಡೆದ ಸ್ಥಳದಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು, ಸ್ಫೋಟಕ ವಸ್ತುಗಳನ್ನು ಸೇನೆ ವಶಪಡಿಸಿಕೊಳ್ಳಲಾಗಿದೆ.
 
	    	 Loading ...
 Loading ... 
							



 
                
Discussion about this post