ಪಶ್ಚಿಮ ಕೇರಳದ ಕಮ್ಯೂನಿಸ್ಟ್ ಗ್ರಾಮಗಳಿಂದ ಯುವತಿಯರನ್ನು ಶಬರಿಮಲೆಗೆ ತಲುಪಿಸಲು CPIMನ ಪ್ರಯತ್ನವು ಬಹಿರಂಗಗೊಂಡಿದೆ. ತೀವ್ರ ಎಡಪಂಥೀಯ ಮತ್ತು ಮಾವೋವಾದಿಗಳ ಆರಾಧಕರು ಮಲೆಯೇರಲು ಸಜ್ಜಾಗುತ್ತಿದ್ದಾರೆ. ಕೇವಲ ಕೋಝಿಕ್ಕೋಡ್ ನಗರದಿಂದ ಮೂವತ್ತರಷ್ಟು ಮಹಿಳೆಯರನ್ನು ಇವರುಗಳು ಮಲೆಯೇರಲು ಸಿದ್ದಪಡಿಸಿದ್ದರು. CPIMನ ಕೆಲವು ಗಂಡಸರೂ ತಮ್ಮ ಹೆಂಡತಿಯರನ್ನು ಕಶಾಯ ವಸ್ತ್ರದ ವೇಷ ಹಾಕಿಸಿ ಶಬರಿಮಲೆಗೆ ತಲುಪಿಸುವ ಕಾರ್ಯವನ್ನು ಮಾಡಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಕಣ್ಣೂರಿನ ಚೆರುಕುನ್ನು ಪ್ರದೇಶದ CPIM party member #Nishanthನ ಮಡದಿಯಾದ #Reshma ಮಲೆಯೇರಲು ಸಿದ್ದವಾಗಿರುವುದು ಪ್ರಮುಖ ಸಾಕ್ಷಿಯಾಗಿದೆ.
ಒಂದು ಭಾಗದಲ್ಲಿ ವಿಶ್ವಾಸಿಗಳ ತೀವ್ರ ವಿರೋಧ ಉಂಟಾಗುತ್ತಿರುವಾಗಲೇ ಮತ್ತೊಂದು ಭಾಗದಲ್ಲಿ ಕೋರ್ಟಿನ ತೀರ್ಪನ್ನು ಎತ್ತಿಹಿಡಿದು ಯಾವ ಬೆಲೆ ತೆತ್ತಾದರೂ ಯುವತಿಯರು ಹದಿನೆಂಟು ಮೆಟ್ಟಿಲುಗಳ ಹತ್ತಲು ಸಿದ್ದರಾಗಿದ್ದರು.
Kiss for live(ಚುಂಬನ ಪ್ರತಿಭಟನೆ), ಮಂಗಳ ಸೂತ್ರವಾದ ತಾಳಿಯನ್ನು ಕಿತ್ತೆಸೆಯುವಂತಹ ಅನೇಕ ಅರಾಜಕತೆಯ ಹೋರಾಟಗಳಿಗೆ ನೇತೃತ್ವ ವಹಿಸಿದ ಮಹಿಳಾಮಣಿಗಳೇ ಶಬರಿಮಲೆಯ ವಿವಾದದ ಹೋರಾಟದ ಮುಂಚೂಣಿಯಲ್ಲಿರುವುದು ವಿಪರ್ಯಾಸವಾಗಿದೆ.
Kozhikkod ಚಾವಯಾರ್ govt high secondary schoolನ ಶಿಕ್ಷಕಿಯಾಗಿರುವ #Bindhuವೂ ಈ ಕಾರ್ಯದ ನೇತೃತ್ವ ವಹಿಸಿದ್ದಾಳೆ.
ಹಿಂದೂ ಆರಾಧನಾ ಪದ್ದತಿಗಳ, ಶಾಸ್ತ್ರ ವಿಶ್ವಾಸಗಳ ನಡುಬೀದಿಯಲ್ಲಿ ಹರಾಜಿಗಿಡುವಂತಹ ಕಾರ್ಯಕ್ರಮಗಳ ಆಯೋಜಿಸಿದ್ದ ಇವರುಗಳು ಅದಾವ ನಂಬಿಕೆಯಿಂದ ಮಾಲೆ ಧರಿಸಿರುವರು?
ಇನ್ನು #Surya Devarchana ಅನ್ನುವ ಯುವತಿಯೊಬ್ಬಳು ಈ ಹಿಂದೆ ಚುಂಬನ ಸಮರ (#KISS_FOR_LIVE) ಅನ್ನುವ ಹೋರಾಟದಲ್ಲಿ ನಡುಬೀದಿಯಲ್ಲಿ ಕಂಡ ಯುವಕರನ್ನೆಲ್ಲಾ ಮನಬಂದಂತೆ ಚುಂಬಿಸಿದ್ದವಳು. ತನ್ನದೇ ನಗ್ನ ಚಿತ್ರಗಳ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟವಳು, ಹಲವಾರು ಯುವಕರೊಂದಿಗೆ ಅಶ್ಲೀಲಕರ #selfie ಗಿಟ್ಟಿಸಿಕೊಂಡವಳು ಯಾವ ನಂಬಿಕೆಯಿಂದ ಮಾಲೆಧರಿಸಿದಳೆಂಬುದು ಜನಸಾಮಾನ್ಯನಿಗೆ ತಿಳಿಯದೇ?
ಇದು ಹಿಂದುಗಳ ವಿಚಾರ. ಅದ ವಿಸ್ತರಿಸಿ ಹೇಳುವ ಅವಶ್ಯಕತೆಯೂ ನನಗಿಲ್ಲ. ಇನ್ನು ನನ್ನ ಸಮಾಜದ ಸಮುದಾಯದಲ್ಲಿ ಹುಟ್ಟಿದ #Rehna_Fathima ಅನ್ನುವ ನಟಿಯೊಬ್ಬಳು ಸಿನೆಮಾ ಜಗತ್ತಿನ ಬೆತ್ತಲೆ ತಾರೆ. ಅದೆಂತಹ ಕುಲಗೆಟ್ಟ ಸಂತಾನವೆಂದರೆ ಸನ್ನಿಲಿಯೋನ್ ಕೂಡಾ ಇವಳ ನಗ್ನಪ್ರದರ್ಶನದ ಮುಂದೆ ಶೂನ್ಯವೇ ಅನ್ನುವಂತಿದೆ. ಅನುಮಾನವಿರುವವರು ಅಥವಾ ಸಾಕ್ಷಿ ಬೇಕಾಗಿರುವವರು Eka rehna fathima ಅಂತ ಯೂಟೂಬಿನಲ್ಲಿ ಹುಡುಕಿಕೊಳ್ಳಿ.
ಒಬ್ಬ ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದವಳಾಗಿ ನೈಜ ಮುಸಲ್ಮಾನನು ಪಾಲಿಸಬೇಕಾದ ಅಂಶಗಳು ಯಾವುದೆಂಬುದ ಚೆನ್ನಾಗಿ ಬಲ್ಲೆ. ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದ ಹೆಣ್ಣುಮಕ್ಕಳು ತಮ್ಮ ಅಂಗಾಂಗಳನ್ನು ಹೊರಜಗತ್ತಿನ ಪ್ರದರ್ಶನಕ್ಕಿಡುವಂತಿಲ್ಲ. ಅದಕ್ಕಾಗಿಯೇ ಹಿಜಾಬ(Burkha) ಧರಿಸುವುದು. ಹಾಗಿರುವಾಗ rehna ಸಂಪೂರ್ಣ ಬೆತ್ತಲಾದಾಗ ನಮ್ಮ ಸಮಾಜ ಇದರ ಬಗ್ಗೆ ಯಾಕೆ ದನಿಯೆತ್ತಲಿಲ್ಲ? ಇದೀಗ ಒಂದು ಧರ್ಮದ ಆಚರಣೆಯ ವಿರುದ್ಧವಾಗಿ ಕಪ್ಪು ವಸ್ತ್ರವ ಧರಿಸಿದಳು ಅಂತಾದರೆ ಅದ ವಿರೋಧಿಸುವ ಒಬ್ಬ ಮುಸಲ್ಮಾನನೂ ಇಲ್ಲವೇ?
ಸೀರೆಯನ್ನೇ ಸುತ್ತಲು ತಿಳಿಯದ ಈಕೆ ಕಪ್ಪು ವಸ್ತ್ರದಿ ತನ್ನ ತೊಡೆ ಕಾಣಿಸುವಂತೆ photo ಕ್ಲಿಕ್ಕಿಸಿಕೊಂಡಾಗಲೂ ಒಬ್ಬ ಮುಸಲ್ಮಾನನೂ ಇದರ ವಿರುದ್ದ ದನಿಯೆತ್ತಲಿಲ್ಲ. ಇನ್ನು ಭಸ್ಮಾಧಾರಣೆಯ ವಿಚಾರ ಹೇಳುವುದಾದರೆ ತಿಲಕ ಇಡುವುದಾಗಲಿ, ಅನ್ಯ ಸಂಸ್ಕೃತಿಯ ಅಳವಡಿಸಿಕೊಳ್ಳುವುದಾಗಲಿ ಇಸ್ಲಾಮಿನ ಪ್ರಕಾರ ಹರಾಮ್ ಆಗಿದೆ. ಹಾಗಿರುವಾಗ ರೆಹ್ನಾ ಹಣೆಗೆ ವಿಭೂತಿಯ ಧರಿಸಿದ್ದರ ಕುರಿತು ಯಾವ ಮುಸಲ್ಮಾನನಾದರೂ ದನಿಯೆತ್ತಿರುವನೇ? ಒಂದೊಮ್ಮೆ ಶಾಲೆಯ ನಾಟಕವೊಂದರ ವಿಚಾರದಲ್ಲಿ ಹಣೆಗೆ ಬಿಂದಿ(ತಿಲಕ) ಇಟ್ಟಳು ಅನ್ನುವ ಒಂದು ಕಾರಣಕ್ಕೆ ಇನ್ನೂ ಧರ್ಮ-ಕರ್ಮ ಏನೆಂಬುದ ತಿಳಿಯದ ಆ ಪುಟ್ಟ ಹೆಣ್ಣುಮಗಳಿಗೆ ಮದರಸಾ, ಮೂಲಭೂತ ಇಸ್ಲಾಂವಾದಿಗಳು, ನಮ್ಮ ಇಸ್ಲಾಂ ಸಮಾಜ ಕೊಟ್ಟ ಶಿಕ್ಷೆ, ಹಿಂಸೆ ಅಷ್ಟಿಷ್ಟಲ್ಲ. ಇವಾಗ ನಟಿ ರೆಹ್ನಾ ಹಣೆಗೆ ವಿಭೂತಿ ತೊಟ್ಟು, ಅನ್ಯಧರ್ಮೀಯರ ಮಾಲೆಯನ್ನೂ ಧರಿಸಿದಳು ಅಷ್ಟು ಮಾತ್ರವಲ್ಲದೇ ತನ್ನ ನಗ್ನದೇಹವ ಪ್ರದರ್ಶನಕ್ಕಿಟ್ಟವಳು. ಇವಳಿಗೆ ಇಸ್ಲಾಂ ವಿಧಿಸುವ ಶಿಕ್ಷೆ ಯಾವುದು? ಅನ್ಯಧರ್ಮೀಯ ಭಾವನೆಗೆ ಧಕ್ಕೆ ತಂದಿರುವಳು ಅಂತ ಕ್ಷಮಿಸುವಿರಾ? ಅಥವಾ ಇಸ್ಲಾಮಿನ ವಿರುದ್ದ ನಡೆದಳೆಂದು ಶಿಕ್ಷಿಸುವಿರಾ? ಅಥವಾ ಅವಳೇ ಪ್ರದರ್ಶಿಸಿದ ಅವಳ ನಗ್ನ ಕಾಯವ ನೋಡಿ ತೃಪ್ತಿಪಡುವಿರಾ ಅಂತ ತೀರ್ಮಾನಿಸಿ.
ಐದು ಹೊತ್ತು ನಮಾಜ್ ಮಾಡುವ ಯಾವ ಮುಸಲ್ಮಾನನಾದರೂ ಇವಳ ವಿಕೃತಿಯ ಸಮರ್ಥಿಸಿಕೊಳ್ಳಲಾರ. ಹಾಗಿರುವಾಗ ಪ್ರಸ್ತುತ ಐದು ಹೊತ್ತು ನಮಾಜ್ ಮಾಡುವ ನೈಜ ಮುಸಲ್ಮಾನ ಒಬ್ಬನೂ ಈ ಸಮಾಜದಲ್ಲಿ ಇಲ್ಲವೇ? ಇದ್ದರೆ ಅವರ್ಯಾರಾದರೂ ಈ ಬಗ್ಗೆ ತುಟಿ ಬಿಚ್ಚಿರುವರೇ?
ಇಸ್ಲಾಂ ಇತರ ಧರ್ಮವನ್ನು ದ್ವೇಷಿಸು ಅಂತ ಹೇಳಿದೆಯೇ? ಮತ್ಯಾಕೆ ಅನ್ಯಧರ್ಮೀಯರ ವಿಚಾರದಲ್ಲಿ ನಮ್ಮ ಮತದ ಯುವತಿಯೊಬ್ಬಳು ಮೂಗುತೂರಿಸಿದಾಗ ಸುಮ್ಮನಿದ್ದಿರಿ?
ಇಂದು ಅವಳು ತೊಟ್ಟ ವಿಭೂತಿಯು ನಾಳೆ ಪ್ರತೀ ಇಸ್ಲಾಮಿನ ಹೆಣ್ಣುಮಗಳು ಅನುಕರಿಸಿದರೆ ಸುಮ್ಮನಿರುವಿರಾ? ಶಬರಿಮಲೆಯಂತೆಯೇ ನಮ್ಮ ಮಹಿಳೆಯರೂ ಮಸೀದಿಯಲ್ಲಿ ನಮಾಜ್ ಮಾಡಲು ನಮಗೂ ಅವಕಾಶ ಬೇಕು ಅಂತ ಬೀದಿಗಿಳಿದರೆ ಸುಮ್ಮನಿರುವಿರಾ? ಇಸ್ಲಾಮಿನಲ್ಲಿ ಹೊಸ ಬದಲಾವಣೆಯಾಗಲು #Rehna ನಡತೆ ನಾಂದಿಯಾಗುವುದಾ?
ನಮ್ಮಲ್ಲಿ ಇಂದಿಗೂ ಮಸೀದಿಗಳಲ್ಲಿ ನಮಾಜ್ ಮಾಡಲು ಯುವತಿಯರಿಗೆ ಅವಕಾಶವಿಲ್ಲ. ಈ ಬಗ್ಗೆ ಒಮ್ಮೆಯೂ ದನಿಯೆತ್ತದ ರೆಹ್ನಾ ಅನವಶ್ಯಕ ಅನ್ಯಧರ್ಮದ ವಿಚಾರಗಳಿಗೆ ಮೂಗುತೂರಿಸುವುದು ಕಂಡೂ ನಮ್ಮವರು ಸುಮ್ಮನಿರುವಾಗ ನನಗನಿಸುವುದು ಬಹುಷಃ ನಾ ಓದಿದ ಖುರಾನಿಗೂ ನಮ್ಮವರ ಖುರಾನಿಗೂ ವ್ಯತ್ಯಾಸವಿರಬಹುದು.
ಕೇರಳದ #CPIM ಸರಕಾರದ ಹಿಂದಿರುವ ಇಸ್ಲಾಮಿನ ಕಾಣದ ಕೈಗಳು ಮಾವೋವಾದಿಗಳ ಉದ್ದೇಶ ಏನೆಂಬುದು ಇದೀಗ ಸಮಾಜದ ಮುಂದೆ ಬೆತ್ತಲಾಗಿದೆ. ನಮ್ಮ ಹೆಣ್ಣುಮಕ್ಕಳೂ ಇಸ್ಲಾಮಿನ ಹುಳುಕುಗಳ ಪ್ರಶ್ನಿಸುವ ಕಾಲ ಹತ್ತಿರವಾಗುತ್ತಿದೆ.
ಇಂತೀ..
ಆಯೇಷಾ ಫರಾನ್
Discussion about this post