ಕಲ್ಪ ಮೀಡಿಯಾ ಹೌಸ್ | ಅರಸೀಕೆರೆ |
ನರಸಾಪುರ ಮತ್ತು ಅರಸೀಕೆರೆ ನಡುವೆ ಸಂಚರಿಸಬೇಕಿದ್ದ ಸಾಪ್ತಾಹಿಕ ವಿಶೇಷ ಎಕ್ಸ್’ಪ್ರೆಸ್ ರೈಲುಗಳನ್ನು ಪ್ರಯಾಣಿಕರ ಕೊರತೆಯಿಂದಾಗಿ ರದ್ದುಗೊಳಿಸಲಾಗಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ತಿಳಿಸಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಇಲಾಖೆ ಮಾಹಿತಿ ಪ್ರಕಟಿಸಿದ್ದು, ವಿವರ ಇಂತಿದೆ.
- ರೈಲು ಸಂಖ್ಯೆ 07201 ನರಸಾಪುರ – ಅರಸೀಕೆರೆ ಸಾಪ್ತಾಹಿಕ ಎಕ್ಸ್’ಪ್ರೆಸ್ ವಿಶೇಷ ರೈಲು ಜುಲೈ 13 ರಿಂದ ಆಗಸ್ಟ್ 31, 2025 ರವರೆಗೆ ಪ್ರತಿ ಭಾನುವಾರ ಸಂಚರಿಸಬೇಕಿತ್ತು. ಆದರೆ, ಇದನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.
- ರೈಲು ಸಂಖ್ಯೆ 07202 ಅರಸೀಕೆರೆ – ನರಸಾಪುರ ಸಾಪ್ತಾಹಿಕ ಎಕ್ಸ್’ಪ್ರೆಸ್ ವಿಶೇಷ ರೈಲು ಜುಲೈ 14 ರಿಂದ ಸೆಪ್ಟೆಂಬರ್ 01, 2025 ರವರೆಗೆ ಪ್ರತಿ ಸೋಮವಾರ ಸಂಚರಿಸಬೇಕಿತ್ತು. ಈ ರೈಲನ್ನೂ ಸಹ ರದ್ದುಗೊಳಿಸಲಾಗಿದೆ.
- ಇನ್ನು, ಸಂತ್ರಾಗಾಚಿ – ಯಶವಂತಪುರ – ಸಂತ್ರಾಗಾಚಿ ಸಾಪ್ತಾಹಿಕ ವಿಶೇಷ ಎಕ್ಸ್’ಪ್ರೆಸ್ ರೈಲುಗಳ ಸೇವಾ ಅವಧಿ ವಿಸ್ತರಣೆ
ಸಂತ್ರಾಗಾಚಿ ಮತ್ತು ಯಶವಂತಪುರ ನಡುವೆ ಸಂಚರಿಸುವ ಸಾಪ್ತಾಹಿಕ ವಿಶೇಷ ಎಕ್ಸ್’ಪ್ರೆಸ್ ರೈಲುಗಳ (02863/02864) ಸೇವಾ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಆಗ್ನೇಯ ರೈಲ್ವೆಯು ತಿಳಿಸಿದೆ.
ಅದರಂತೆ, ರೈಲು ಸಂಖ್ಯೆ 02863 ಸಂತ್ರಾಗಾಚಿ – ಯಶವಂತಪುರ ಸಾಪ್ತಾಹಿಕ ವಿಶೇಷ ಎಕ್ಸ್’ಪ್ರೆಸ್ ರೈಲು, ಈ ಹಿಂದೆ ಜೂನ್ 26 ರವರೆಗೆ ಸಂಚರಿಸುವುದಾಗಿ ತಿಳಿಸಲಾಗಿತ್ತು, ಈಗ ಜುಲೈ 10 ರಿಂದ ಆಗಸ್ಟ್ 28, 2025 ರವರೆಗೆ ಪ್ರತಿ ಗುರುವಾರ ಸಂಚರಿಸಲಿದೆ.
ಅದೇ ರೀತಿ, ರೈಲು ಸಂಖ್ಯೆ 02864 ಯಶವಂತಪುರ – ಸಂತ್ರಾಗಾಚಿ ಸಾಪ್ತಾಹಿಕ ವಿಶೇಷ ಎಕ್ಸ್’ಪ್ರೆಸ್ ರೈಲು, ಜೂನ್ 28 ರವರೆಗೆ ಸಂಚರಿಸುವುದಾಗಿ ನಿಗದಿಪಡಿಸಲಾಗಿತ್ತು, ಈಗ ಇದು ಜುಲೈ 12 ರಿಂದ ಆಗಸ್ಟ್ 30, 2025 ರವರೆಗೆ ಪ್ರತಿ ಶನಿವಾರ ಸಂಚರಿಸಲಿದೆ.
ಈ ರೈಲುಗಳು ತಮ್ಮ ಅಸ್ತಿತ್ವದಲ್ಲಿರುವ ವೇಳಾಪಟ್ಟಿ, ನಿಲುಗಡೆಗಳು ಮತ್ತು ಬೋಗಿ ಸಂಯೋಜನೆಯೊAದಿಗೆ ಸಂಚಾರವನ್ನು ಮುಂದುವರೆಸುತ್ತವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post