No Result
View All Result
Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp
English Articles

Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

by ಕಲ್ಪ ನ್ಯೂಸ್
March 18, 2026
0

Kalpa Media House  |  Manipal | Manipal Institute of Technology (MIT), Manipal, a constituent unit of Manipal Academy of Higher...

Read moreDetails
Bengaluru Gets a World-Class Electronics Co-Innovation Hub as Henkel Launches Advanced Application Center

Bengaluru Gets a World-Class Electronics Co-Innovation Hub as Henkel Launches Advanced Application Center

March 17, 2026
Malnad is a Cultural ‘Gharana’ of Great Minds: Dr. Jayamala at Sahyadri Utsava

Malnad is a Cultural ‘Gharana’ of Great Minds: Dr. Jayamala at Sahyadri Utsava

March 13, 2026
ABB deepens Karnataka footprint with new investments to serve high growth emerging sectors

ABB deepens Karnataka footprint with new investments to serve high growth emerging sectors

March 12, 2026
“Rasamum Rasayanamum- Artistry meets Chemistry”

“Rasamum Rasayanamum- Artistry meets Chemistry”

March 11, 2026
  • Advertise With Us
  • Grievances
  • About Us
  • Contact Us
Wednesday, March 18, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಕೊಪ್ಪಳ

ನೀವು ಪರಿಸರ ರಕ್ಷಣೆಯ ಆಸಕ್ತರೇ? ಹಾಗಾದರೆ ಕಿರ್ಲೋಸ್ಕರ್-ವಸುಂಧರಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನೀವೂ ಭಾಗಿಯಾಗಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
November 15, 2019
in ಕೊಪ್ಪಳ
0
ನೀವು ಪರಿಸರ ರಕ್ಷಣೆಯ ಆಸಕ್ತರೇ? ಹಾಗಾದರೆ ಕಿರ್ಲೋಸ್ಕರ್-ವಸುಂಧರಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನೀವೂ ಭಾಗಿಯಾಗಿ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೊಪ್ಪಳ:
ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಾರ್ಖಾನೆಯು ಪ್ರಪ್ರಥಮವಾಗಿ ಕೈಗಾರಿಕೆಯಲ್ಲಿ ಹಿಂದುಳಿದ ಪ್ರದೇಶವಾದ ಕೊಪ್ಪಳ ಜಿಲ್ಲೆಯ ಬೇವಿನಹಳ್ಳಿಯ ಹತ್ತಿರ 1993 ರಲ್ಲಿ ಸ್ಥಾಪನೆಗೊಂಡಿದ್ದು, ಕಂಪನಿಯ ಪ್ರಮುಖವಾಗಿ ಬೀಡುಕಬ್ಬಿಣ ಮತ್ತು ಬೂದುಕಬ್ಬಿಣದ ಎರಕಗಳನ್ನು ಉತ್ಪಾದಿಸುತ್ತಿದೆ. ಈ ಉತ್ಪಾದನೆಗಳು ಮುಖ್ಯವಾಗಿ ವಾಹನ ತಯಾರಿಕಾ ವಲಯಕ್ಕೆ ಬಿಡಿಭಾಗವಾಗಿ ಪೊರೈಸಲ್ಪಡುತ್ತವೆ.

ಕಾರ್ಖಾನೆಯು ಸ್ಥಾಪನೆಯಾದಾಗಿನಿಂದಲೂ ಹತ್ತಿರವಿರುವ ಬೇವಿನಹಳ್ಲಿ ಗ್ರಾಮ ಹಾಗೂ ಸುತ್ತ-ಮುತ್ತಲಿನ ಗ್ರಾಮಗಳಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಬಂದಿರುತ್ತದೆ. ಕಂಪನಿಯ ಸಾಂಘಿಕ ಸಮಾಜಿಕ ಹೊಣೆಗಾರಿಕೆಯನ್ನು(CSR))ಕ್ರಮಬದ್ಧವಾಗಿ ನಡೆಸಲು 2001 ರಲ್ಲಿ ಕಿರ್ಲೋಸ್ಕರ್ ಫೆರಸ್ ಗ್ರಾಮೀಣಾಭಿವೃದ್ಧಿ ಟ್ರಸ್ಟನ್ನು ಸ್ಥಾಪಿಸಲಾಗಿದ್ದು, ಈ ಟ್ರಸ್ಟ್‌ ಮುಖಾಂತರ ಗ್ರಾಮದ ಮೂಲಭೂತ ಸೌಕರ್ಯ, ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯ ಇವುಗಳಿಗೆ ಒತ್ತು ಕೊಟ್ಟು ವಾರ್ಷಿಕ ಯೋಜನೆಯನ್ನು ರೂಪಿಸಿ, ಅದರಂತೆ ಕೆಲಸಗಳನ್ನು ಕೈಗೆತ್ತಿಗೊಳ್ಳುತ್ತಿದೆ. ಈ ಚಟುವಟಿಕೆಗಳಲ್ಲಿ ಕಿರ್ಲೋಸ್ಕರ್ ವಸುಂಧರಾ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವವೂ ಒಂದಾಗಿದೆ.

(ಸಂಗ್ರಹ ಚಿತ್ರ)

ಪರಿಸರ ಸಂರಕ್ಷಿಸುವ ಕುರಿತು ಕಿಂಚಿತ್ತಾದರೂ ಸೇವೆಯನ್ನು ಸಲ್ಲಿಸುವ ದೃಷ್ಠಿಯಿಂದ, ಪುಣೆಯಲ್ಲಿ ಸ್ಥಾಪನೆಗೊಂಡ ವಸುಂಧರಾ ಕ್ಲಬ್ ಜೊತೆಗೂಡಿ ಕಿರ್ಲೊಸ್ಕರ್ ವಸುಂಧರಾ ಎಂಬ ವೇದಿಕೆ ಯಡಿಯಲ್ಲಿ ಈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಆಯೋಜಿಸುತ್ತಾ ಬಂದಿದ್ದೇವೆ. ಕಳೆದ ಹನ್ನೆರಡು ವರ್ಷಗಳಿಂದ ದೇಶದ 7 ರಾಜ್ಯಗಳು ಮತ್ತು 30 ನಗರಗಳಲ್ಲಿ ಈ ಚಲನಚಿತ್ರೋತ್ಸವ ನವೆಂಬರ್ 18 ಮತ್ತು 19ರಂದು ಒಟ್ಟು ಎರಡು ದಿನಗಳ ಕಾಲ ಆಯೋಜಿಸಲಾಗುತ್ತಿದೆ.

ಈ ಕಾರ್ಯಕ್ರಮದ ಮುಖ್ಯ ಸಂದೇಶ – ಪೃಥ್ವಿಯನ್ನು ರಕ್ಷಿಸಿ, ಸಂರಕ್ಷಿಸಿ, ಉಳಿಸಿ ಮುಂದಿನ ಪೀಳಿಗೆಗಾಗಿ! ಒಂದು ವೇಳೆ ಪ್ಲಾಸ್ಟಿಕ್ ಉಳಿದುಕೊಂಡರೆ ನಮ್ಮ ಉಳಿವಿಲ್ಲ! (No to Plastic, Yes to Earth)ಎಂಬುದು ಈ ವರ್ಷದ ಮುಖ್ಯ ವಿಷಯವಾಗಿದೆ.

(ಸಂಗ್ರಹ ಚಿತ್ರ)

ಈ ಚಿತ್ರೋತ್ಸವದಲ್ಲಿ ಪರಿಸರ, ವನ್ಯಜೀವಿ, ಶಕ್ತಿ, ಗಾಳಿ, ನೀರು ಕುರಿತು ಜಾಗೃತಿ ಮೂಡಿಸುವ ದೇಶೀಯ ಹಾಗೂ ವಿದೇಶೀಯ ಖ್ಯಾತ ನಿರ್ದೇಶಕರು ತಯಾರಿಸಿದ ರಾಷ್ಟ್ರೀಯ ಹಾಗೂ ಅಂತಾರಾಷ್ಟೀಯ ಪ್ರಶಸ್ತಿ ಗಳಿಸಿದ ಆಯ್ದ ಚಲನಚಿತ್ರಗಳನ್ನು ಶಾಲಾ-ಕಾಲೇಜುಗಳಲ್ಲಿ ಪ್ರದರ್ಶಿಸಲಾಗುತ್ತದೆ. ಈ ಚಿತ್ರೋತ್ಸವದ ಅಂಗವಾಗಿ ‘‘ಸಕಾಳ್ -ಪೋಟೋಗ್ರಫಿ’’ ವಸ್ತು ಪ್ರದರ್ಶನವನ್ನು ಸಹ ಆಯೋಜಿಸಲಾಗಿದ್ದು, ವಿಶ್ವದಾದ್ಯಂತ ಆಹ್ವಾನಿಸಿದ ಸುಮಾರು 10.000 ಅತ್ಯತ್ತಮ ಚಲನಚಿತ್ರಗಳಲ್ಲಿ ಆಯ್ದ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.

ಈ ಚಲನಚಿತ್ರೋತ್ಸವದ ಅಂಗವಾಗಿ, ಪರಿಸರ, ವನ್ಯಜೀವಿ, ಕೃಷಿ ಇತ್ಯಾದಿ ವಿಭಾಗಗಳಲ್ಲಿ ಸಾಧನೆ ಮಾಡಿದ ಅಗ್ರಗಣ್ಯರಿಗೆ ವಸುಂಧರಾ ಮಿತ್ರ, ಮತ್ತು ವಸುಂಧರ ಸನ್ಮಾನ್ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು.

(ಸಂಗ್ರಹ ಚಿತ್ರ)

ಈ ಕಾರ್ಯಕ್ರಮವು ವಿವಿಧ ಭಾಗಗಳಿಗೂ ತಲುಪಬೇಕು, ಸಾಕಷ್ಟು ಜನರನ್ನು ತಲುಪಬೇಕು ಎನ್ನುವುದು ನಮ್ಮ ಉದ್ದೇಶ. ಆದ್ದರಿಂದ, ಈ ಬಾರಿ, ಕೊಪ್ಪಳದ ಶ್ರೀ ಪಾನಘಂಟಿ ಭಾಗ್ಯಮ್ಮ ಭೀಮಸೇನಪ್ಪ ಮಂಗಳ ಭವನದಲ್ಲಿ ಈ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭ ನವೆಂಬರ್ 18ರಂದು ಬೆಳಿಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ.

ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀಮತಿ ಜಿ. ಸಂಗೀತ, ಐಪಿಎಸ್ ಹಾಗೂ ಕೊಪ್ಪಳ ಜಿಲ್ಲಾ ಹಿರಿಯ ಮತ್ತು ಸತ್ರ ನ್ಯಾಯಧೀಶ ಸಂಜೀವ್ ವಿ ಕುಲಕರ್ಣಿ ಅವರು ಆಗಮಿಸಲಿದ್ದಾರೆ. ಈ ಸಮಾರಂಭದಲ್ಲಿ ಪರಿಸರ ಸಂರಕ್ಷಣೆಯ ಕುರಿತು ಅಮೋಘ ಸೇವೆ ಸಲ್ಲಿಸುತ್ತಿರುವ ವಾಟರ್ ಗಾಂಧಿಯೆಂದೇ ಪ್ರಖ್ಯಾತಿಯಾಗಿರುವ ಶ್ರೀ ಅಯ್ಯಪ್ಪ ಎಂ ಮಸಕಿ, ವಾಟರ್ ಲಿಟರರಿ ಫೌಂಡೇಷನ್, ಬೆಂಗಳೂರು ಇವರಿಗೆ ‘‘ವಸುಂಧರಾ ಸನ್ಮಾನ್’’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್’ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಆರ್.ವಿ. ಗುಮಾಸ್ತೆ, ಮಾನವ ಸಂಪನ್ಮೂಲ ಮತ್ತು ಸಾಮಾನ್ಯ ಆಡಳಿತ ವಿಭಾಗದ ಹಿರಿಯ ಉಪಾಧ್ಯಕ್ಷರಾದ ಶ್ರೀ ಪಿ. ನಾರಾಯಣ ಹಾಗೂ ವಸುಂಧರಾ ಕ್ಲಬ್ ಪುಣೆಯ ಚಲನಚಿತ್ರೋತ್ಸವದ ನಿರ್ದೇಶಕ ವೀರೇಂದ್ರ ಚಿತ್ರವ್ ಇವರುಗಳು ಈ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

(ಸಂಗ್ರಹ ಚಿತ್ರ)

ಈ ಚಲನಚಿತ್ರೋತ್ಸವ ಸಮಾರೋಪ ಸಮಾರಂಭವನ್ನು ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್’ನ ಕಾರ್ಖಾನೆಯಲ್ಲಿ ನವೆಂಬರ್ 19ರಂದು ಸಂಜೆ 4 ಗಂಟೆಗೆ ಆಯೋಜಿಸಲಾಗಿದ್ದು, ಪರಿಸರ ಮತ್ತು ಕೃಷಿ ಸಂರಕ್ಷಣೆ ಕ್ಷೇತ್ರದಲ್ಲಿ ಸೇವೆ ಮಾಡಿದ ಅಮೋಘ ಸಾಧನೆಗೆ ಶಿರಸಿಯ ಪತ್ರಕರ್ತ, ಜಲ ಸಂರಕ್ಷಣಾವಾದಿ ಶ್ರೀ ಶಿವಾನಂದ ಕಳವೆ ಇವರಿಗೆ ‘‘ವಸುಂಧರಾ ಮಿತ್ರ’’ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಕೊಪ್ಪಳ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕರಾದ ರಘುನಂದನ ಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀ ಎಂ.ಪಿ. ಮಾರುತಿ, ಭಾಗವಹಿಸಲಿದ್ದಾರೆ. ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್’ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಆರ್.ವಿ. ಗುಮಾಸ್ತೆ, ಮತ್ತು ಮಾನವ ಸಂಪನ್ಮೂಲ ಮತ್ತು ಸಾಮಾನ್ಯ ಆಡಳಿತ ವಿಭಾಗದ ಹಿರಿಯ ಉಪಾಧ್ಯಕ್ಷರಾದ ಶ್ರೀ ಪಿ. ನಾರಾಯಣ ಹಾಗೂ ವಸುಂಧರಾ ಕ್ಲಬ್ ಪುಣೆಯ ಚಲನಚಿತ್ರೋತ್ಸವದ ನಿರ್ದೇಶಕ ವೀರೇಂದ್ರ ಚಿತ್ರವ್ ಇವರುಗಳು ಈ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಿರ್ಲೋಸ್ಕರ್ -ವಸುಂಧರಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ-2019ರ ಪೂರ್ವಭಾವಿಯಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

(ಸಂಗ್ರಹ ಚಿತ್ರ)

ಸೆಪ್ಟಂಬರ್ 24ರಂದು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಕಾಲೇಜು ಆವರಣದಲ್ಲಿ ಪರಿಸರದ ಸೂಕ್ಷ್ಮಪ್ರಜ್ಞೆಯುಳ್ಳ ಯುವಪೀಳಿಗೆ ಸಕಾರಾತ್ಮಕ ಕೊಡುಗೆಯನ್ನು ನೀಡಲು ಸಾಮಾನ್ಯ ವೇದಿಕೆಯನ್ನು ನಿರ್ಮಿಸುವುದು ನಮ್ಮ ದೃಷ್ಠಿಕೋನವಾಗಿದ್ದು, ಈ ಕಾರಣ Vasundhara Eco Rangers ಅಂದರೆ ಕಿರ್ಲೋಸ್ಕರ್ ವಸುಂಧರಾ ಪರಿಸರ ರಕ್ಷಕರು ಎಂಬ ತಂಡಗಳನ್ನು ರಚಿಸಿ, ಈ ತಂಡಗಳಿಗೆ ಪರಿಸರದ ಕುರಿತು ಚಲನಚಿತ್ರ ಪ್ರದರ್ಶನಗಳು, ಕಾರ್ಯಾಗಾರಗಳು, ಪ್ರಸ್ತುತ ವಿಷಯಗಳ ಕುರಿತು ಮುಕ್ತ ಸಂವಾದ, ಪೋಟೋ ಪ್ರದರ್ಶನ ಮತ್ತು ನಿಸರ್ಗಗಳನ್ನು ಪರಿಚಯಿಸುವುದು ಇತ್ಯಾದಿ ನಡೆಸಲಾಯಿತು.

ಅಲ್ಲದೇ, ಪ್ಲಾಸ್ಟಿಕ್ ಮುಕ್ತ ಪರಿಸರ, ಇ-ತ್ಯಾಜ್ಯ ಸಂಗ್ರಹಣೆ, ಸಸಿಗಳನ್ನು ನೆಡುವುದು ಇತ್ಯಾದಿ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸುವುದು ಗುರಿಯಾಗಿತ್ತು. ಈ ಪರಿಸರ ಪಾಲಕರುಗಳಿಗೆ ಪರಿಸರ ತಜ್ಞರಿಂದ ಹಾಗೂ ಹಲವಾರು ವಿಷಯಗಳಲ್ಲಿ ನುರಿತ ವ್ಯಕ್ತಿಗಳಿಂದ ಮಾರ್ಗದರ್ಶನವನ್ನು ಹೆಸರಾಂತ ಪಶು ವೈದ್ಯಾಧಿಕಾರಿಗಳು ಹಾಗೂ ಪರಿಸರ ಪ್ರೇಮಿಗಳಾದ ಡಾ. ಜೆ.ಎಸ್. ಅಶ್ವತ್ಥ್‌ ಕುಮಾರ್ ಅವರಿಂದ ಜಾಗೃತಿ ಕಾರ್ಯಕ್ರಮ ಆಯೋಜಿಸಿಲಾಗಿತ್ತು. ಸುಮಾರು 150 ಕ್ಕೂ ಅಧಿಕ ಆಯ್ದ ವಿದ್ಯಾರ್ಥಿಗಳಿಗೆ ಪರಿಸರ ರಕ್ಷಕ ಹುದ್ದೆಯನ್ನು ನೀಡಿ ನಾಗರಿಕರು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪರಿಸರ ಮಾರ್ಗದರ್ಶಕರಾಗಿ ಮುಂದುವರೆಯಲು ರೂಪುರೇಷೆ ಮಾಡಲಾಯಿತು.

(ಸಂಗ್ರಹ ಚಿತ್ರ)

ಜುಲೈ ಮತ್ತು ಆಗಸ್ಟ್‌ ತಿಂಗಳಿನಲ್ಲಿ ಪರಿಸರ ಸಂರಕ್ಷಣೆ ಅಡಿಯಲ್ಲಿ ಹತ್ತಿರದ ಮತ್ತು ಕಾರ್ಖಾನೆಯ ಸುತ್ತಮುತ್ತಲಿನ ಶಹಪುರ, ಬೇವಿನಹಳ್ಳಿ ಮತ್ತು ಜಿಲ್ಲಾ ಕೇಂದ್ರ ಕೊಪ್ಪಳದ ಕಾಲೇಜು ಮತ್ತು ಶಾಲೆಗಳ ಆವರಣದಲ್ಲಿ ಸಸಿ ನೆಡುವ ಕಾರ್ಯವನ್ನು ಯಶಸ್ವಿಯಾಗಿ ಮಾಡಲಾಯಿತು.

ಆಗಸ್ಟ್‌ 16ರಂದು ಹೊಸಹಳ್ಳಿ ಗ್ರಾಮದ ಹತ್ತಿರದ ಹೊನ್ನೂರು ಮಟ್ಟಿ ಗ್ರಾಮದಲ್ಲಿ ‘‘ಬಹುಗ್ರಾಮ ಪಂಚಾಯತ್ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸ ಶೇಖರಣೆ, ವಿಲೇವಾರಿ ಮತ್ತು ಬೇರ್ಪಡಿಸುವ ವಿಧಾನಗಳನ್ನು ಸುತ್ತಮುತ್ತಲಿನ ಬೇವಿನಹಳ್ಳಿ, ಲಿಂಗದಹಳ್ಳಿ ಮತ್ತು ಶಹಪುರಗ್ರಾಮ ಪಂಚಾಯ್ತಿಯ ನೌಕರರು ಮತ್ತು ಸಂಘ ಸಂಸ್ಥೆಗಳ ಯುವ ಸದಸ್ಯರಿಗೆ ಕಾರ್ಯಗಾರ ಆಯೋಜಿಸಲಾಗಿತು.್ತ ಇದರಲ್ಲಿ 150 ಕ್ಕೂ ಅಧಿಕ ಸದಸ್ಯರು ಮತ್ತು ಪಂಚಾಯ್ತಿಯ ನೌಕರರು ಪ್ರಯೋಜನ ಪಡೆದರು.

(ಸಂಗ್ರಹ ಚಿತ್ರ)

ಅಕ್ಟೋಬರ್ 20ರಂದು‘‘ಸ್ವಚ್ಚ ಭಾರತ ಅಭಿಯಾನ’’ದಡಿಯಲ್ಲಿ ಕಾರ್ಖಾನೆಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗಿತ್ತು. ಹತ್ತಿರದ ಬೇವಿನಹಳ್ಳಿ ಗ್ರಾಮದಲ್ಲಿ ಸ್ವಚ್ಚತಾ ಕಾರ್ಯಕ್ರಮ ಮತ್ತು ಕಸ ಶೇಖರಣೆ ಮತ್ತು ವಿಲೇವಾರಿ ಕಾರ್ಯಕ್ರಮವನ್ನು ಆಯೋಜಿಸುವುದರ ಮೂಲಕ ಉತ್ತಮ ಪರಿಸರದಿಂದ ಆಗುವ ಲಾಭಗಳು ಹಾಗೂ ಪರಿಸರವನ್ನು ಹೇಗೆ ಸಂರಕ್ಷಿಸಬಹುದು ಎಂಬುದನ್ನು ಗ್ರಾಮಸ್ಥರಿಗೆ ತಿಳಿಸಿಕೊಡಲಾಯಿತು. ಯುವಕರು, ಪರಿಸರ ಪ್ರೇಮಿಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಕಿರ್ಲೋಸ್ಕರ್ ಉದ್ಯೋಗಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

ಹೆಚ್ಚಿನ ಮಾಹಿತಿಗಾಗಿ ಶ್ರೀ ಉದ್ದವ ಕುಲಕರ್ಣಿ-9449253268/9742058423, ಶ್ರೀ ವೈ. ಮೇಘರಾಜ್-7353472177/9986818206 ಅವರನ್ನು ಸಂಪರ್ಕಿಸಬಹುದಾಗಿದೆ.

ಬನ್ನಿ ಈ ಕಾರ್ಯಕ್ರಮದಲ್ಲಿ ನೀವು ನಮ್ಮೂಡನೆ ಭಾಗವಹಿಸಿ ಪರಿಸರ ಉಳಿವಿಗಾಗಿ ಕೈಜೋಡಿಸಿ

ಪೃಥ್ವಿಯನ್ನು ರಕ್ಷಿಸಿ, ಸಂರಕ್ಷಿಸಿ, ಉಳಿಸಿ ಮುಂದಿನ ಪೀಳಿಗೆಗಾಗಿ!

ಧನ್ಯವಾದಗಳೊಂದಿಗೆ,

ಪಿ. ನಾರಾಯಣ
ಹಿರಿಯ ಉಪಾಧ್ಯಕ್ಷರು-ಮಾನವ ಸಂಪನ್ಮೂಲ ಮತ್ತು ಸಾ. ಆಡಳಿತ ಮತ್ತು
ಉಪಾಧ್ಯಕ್ಷರು – ಸಮನ್ವಯ ಸಮಿತಿ
ಕಿರ್ಲೋಸ್ಕರ್ -ವಸುಂಧರಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

Get In Touch With Us info@kalpa.news Whatsapp: 9481252093

Tags: Bayalu Seeme NewsEnvironmental protectionKannada Newskirloskar ferrous industries limitedKirloskar-Vasundhara International Film FestivalKoppalNo to Plastic Yes to EarthShivananda KalaveVasundhara Eco Rangersಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ಕಿರ್ಲೋಸ್ಕರ್-ವಸುಂಧರಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕೊಪ್ಪಳಚಲನಚಿತ್ರೋತ್ಸವಪರಿಸರ ರಕ್ಷಣೆ
Share199Tweet123Send
Previous Post

ಈ ಎಲ್ಲಾ ರೈಲುಗಳಲ್ಲಿ ಇನ್ನು ಮುಂದೆ ಆಹಾರ ದುಬಾರಿ! ಇಲ್ಲದೆ ನೋಡಿ ದರ ಪಟ್ಟಿ

Next Post

ನಿವೃತ್ತಿಗೂ ಮುನ್ನ ತಿಮ್ಮಪ್ಪನ ದರ್ಶನ ಪಡೆದ ಸಿಜೆಐ ರಂಜನ್ ಗೊಗೋಯ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ನಿವೃತ್ತಿಗೂ ಮುನ್ನ ತಿಮ್ಮಪ್ಪನ ದರ್ಶನ ಪಡೆದ ಸಿಜೆಐ ರಂಜನ್ ಗೊಗೋಯ್

ನಿವೃತ್ತಿಗೂ ಮುನ್ನ ತಿಮ್ಮಪ್ಪನ ದರ್ಶನ ಪಡೆದ ಸಿಜೆಐ ರಂಜನ್ ಗೊಗೋಯ್

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
National Safety Week 2026 Observed at Carriage Repair Workshop, Hubballi

National Safety Week 2026 Observed at Carriage Repair Workshop, Hubballi

March 18, 2026
7 ತಿಂಗಳಲ್ಲಿ 355 ವಿಶೇಷ ರೈಲುಗಳ ಸಂಚಾರದಿಂದ ನೈಋತ್ಯ ರೈಲ್ವೆ ಗಳಿಸಿದ್ದು ಎಷ್ಟು ಕೋಟಿ ಆದಾಯ?

ಹುಬ್ಬಳ್ಳಿ | ರೈಲ್ವೆ ಇಲಾಖೆ ಪರೀಕ್ಷೆ ಮುಂದೂಡಿಕೆ

March 18, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

ಯುಗಾದಿ ಹಬ್ಬ ಹಿನ್ನೆಲೆ: ಯಶವಂತಪುರ ಮತ್ತು ಹೊಸಪೇಟೆ ನಡುವೆ ವಿಶೇಷ ರೈಲು ಸೇವೆ

March 18, 2026
ನವೋದಯ ಪ್ರವೇಶ ಪರೀಕ್ಷೆ | ಅಪೂರ್ವಗೆ ಉತ್ತಮ ಅಂಕ

ನವೋದಯ ಪ್ರವೇಶ ಪರೀಕ್ಷೆ | ಅಪೂರ್ವಗೆ ಉತ್ತಮ ಅಂಕ

March 18, 2026
ಬಡವರ ಆರೋಗ್ಯದ ಜೊತೆ ಸರ್ಕಾರದ ಚೆಲ್ಲಾಟ | ಉಗ್ರಾಣಗಳಲ್ಲಿ 7 ತಿಂಗಳಾದರೂ ಔಷಧಿ ಪೂರೈಕೆಯಿಲ್ಲ: ಶಾಸಕ ಡಾ. ಧನಂಜಯ ಸರ್ಜಿ

ಬಡವರ ಆರೋಗ್ಯದ ಜೊತೆ ಸರ್ಕಾರದ ಚೆಲ್ಲಾಟ | ಉಗ್ರಾಣಗಳಲ್ಲಿ 7 ತಿಂಗಳಾದರೂ ಔಷಧಿ ಪೂರೈಕೆಯಿಲ್ಲ: ಶಾಸಕ ಡಾ. ಧನಂಜಯ ಸರ್ಜಿ

March 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL