ಕಲ್ಪ ಮೀಡಿಯಾ ಹೌಸ್
ಇತ್ತೀಚಿಗೆ ಟ್ರೆಂಡಿಂಗ್ ಆಗಿರೋ ಚೇತನ್ ಅಹಿಂಸಾ ಅವರ ಜಾಲತಾಣದ ವೀಡಿಯೋ ನೋಡಿದ ನಂತರದ ಪ್ರತಿಕ್ರಿಯೆ ಇದು…
ಭಾರತದ ಯಾವುದೇ ರಾಜ್ಯದಲ್ಲೂ ಬ್ರಾಹ್ಮಣರಿಗೆ ಮೀಸಲು ಇಲ್ಲ. ಮೀಸಲಾತಿ ಹಿಂದೆ ಎಂದೂ ಬಿದ್ದೋರಲ್ಲ ಬ್ರಾಹ್ಮಣರು, ಇನ್ನೂ ಕ್ಷತ್ರಿಯರಿಗೇ ಕ್ಷಾತ್ರ ವೃತ್ತಿ ಕಲಿಸುತ್ತಿದ್ದರು. ಪುರಾಣದ ಮಾತು ಬಿಡಿ, ನಮ್ಮ ಕರ್ನಾಟಕದ ಏಕೀಕರಣದಲ್ಲಿ ಶ್ರಮ ವಹಿಸಿದ ಆಲೂರು ವೆಂಕಟರಾಯರು, ಬಹುಷಃ ಎಷ್ಟೋ ಜನರಿಗೆ ಅವರ ನೆನಪೇ ಇಲ್ಲ ಇವತ್ತು. ಅದು ಕನ್ನಡದ ಜನ ಹಲವಾರು ಆಡಳಿತ ವ್ಯವಸ್ಥೆಗಳಡಿಯಲ್ಲಿ ಚದುರಿ ಹೋಗಿದ್ದ ಕಾಲ, ವೆಂಕಟರಾಯರ ಧೃಡ ಸಂಕಲ್ಪದಿಂದ ಮಲಗಿದ್ದ ಜನತೆಯನ್ನು ಎಚ್ಚರಗೊಳಿಸಲೆಂದೇ ಆದದ್ದು ಕರ್ನಾಟಕ ಏಕೀಕರಣ. ಅಂದೇ ಸಂಸ್ಕೃತವಾಯಿತು ಕರ್ನಾಟಕ ಗತ ವೈಭವ ಎಂಬ ಬೃಹತ್ ಗ್ರಂಥ.
ಭಾರತದ ಸಮೃದ್ದ ಸಂಸ್ಕೃತಿಗೆ ಕರ್ನಾಟಕದ ಎಲ್ಲ ರಾಜವಂಶದ ಕೊಡುಗೆಗಳು, ಭವ್ಯ ಮಂದಿರಗಳ ಇತಿಹಾಸ, ಬೃಹತ್ ಸ್ಮಾರಕಗಳು, ವ್ಯಾಪಾರ ವಹಿವಾಟುಗಳನ್ನು ಅಂದಿನ ಆಥಿಚಿಟಿsಣಥಿಗಳು ನಡೆಸುತ್ತಿದ್ದ ರೀತಿ, ಸಾಹಿತ್ಯ, ಕಲೆ ಪ್ರಚಾರ ಎಲ್ಲವೂ ಒಳಗೊಂಡಿತ್ತು. ಅದು ನಿಜವಾಗಲೂ ಮಲಗಿದ್ದ ಮಂದಮತಿಗಳಿಗೆ ಕರ್ನಾಟಕ ಕುಲ ಪುರೋಹಿತನ ಎಚ್ಚರ ಘಂಟೆಯ ನಾದ. ಒಂದು ವಿಷಯ ಏನೂ ಅಂದ್ರೆ. ನಮ್ಮ ರಾಜ್ಯದ ನಿರ್ಮಾತೃ, ಏಕೀಕರಣ ಸೂತ್ರಧಾರ ಕೂಡ ಒಬ್ಬ ಬ್ರಾಹ್ಮಣ ಸ್ವಾಮಿ.
ಇಂದಿನ ಪರಿಸ್ಥಿತಿಯಲ್ಲಿ ಬ್ರಾಹ್ಮಣರಿಗೆ ಸೌಲಭ್ಯಗಳ ಮಾತು ಇರಲಿ, ಕನಿಷ್ಠ ಮರ್ಯಾದೆಯೂ ಇಲ್ಲವಾದಂತಿದೆ. ತೀರ ಒiಟಿoಡಿiಣಥಿ ನಲ್ಲಿರುವ ಈ ಜನತೆ ಪರಿಗಣಿಸುವ ಯಾವ ಅನುಭೂತಿಯೂ ಇಂದಿನ ನಾಯಕರಿಗಿಲ್ಲ. ಬ್ರಾಹ್ಮಣ ಸಮುದಾಯ ವಂಚಿತವಾಗಿದೆ. ಹೌದು! ಬ್ರಾಹ್ಮಣರಿಗೆ ಈ ಸರಕಾರ ಖರ್ಚು ಮಾಡುವ ದುಡ್ಡೆಷ್ಟು? ಬಹಳ ಕಡಿಮೆ, ಬೇರೆ ಧರ್ಮದ ಸವಲತ್ತುಗಳೊಡನೆ ಹೋಲಿಕೆ ಕೂಡ ಮಾಡಕ್ಕಾಗಲ್ಲ . ಜಾತಿಗಳ ಸಂಖ್ಯಾಬಲದ ಪಟ್ಟಿಯಲ್ಲಿ ಕಟ್ಟ ಕಡೆಗಿರುವವರು ಬ್ರಾಹ್ಮಣರು, ಆದರೆ ಅವರ ಪ್ರತಿಭೆಯಿಂದಲೇ ಸಾಕಷ್ಟು ಮಂದಿ ಅಮೇರಿಕಾ ಲಂಡನ್‌ಗಳಲ್ಲಿ ಕೆಲಸ ಮಾಡುತ್ತಿದ್ಡಾರೆ. ಈ ಬಡ ಬ್ರಾಹ್ಮಣ ಸುಮ್ನಿದ್ರೆ ಸಾಧಾರಣ. ಆಕ್ರಮಣಕಾರಿ ಆದ್ರೆ ಅದು ದಾರುಣ…
ಬ್ರಾಹ್ಮಣನ ತೇಜೋವಧೆ ಮಾಡಿದ ವಂಶಗಳೇ ನಿರ್ವಂಶ ಅಗಿರೋ ಪ್ರಸಂಗಗಳೂ ನಾವು ಇತಿಹಾಸದಲ್ಲಿ ನೋಡಬಹುದು. ಈಗಂತೂ ಬ್ರಾಹ್ಮಣರ ಆಹಾರ ಕ್ರಮ ಖಂಡಿಸೋದು ಸಾಮಾನ್ಯವಾಗಿದೆ. ಬ್ರಾಹ್ಮಣ ಶಿಖೆ ಅಂತೂ ಪುಂಡ-ಪೋಕರಿಗಳಿಗೆ ಪಿಳ್ಜುಟ್ಟು ಅನ್ನದಿದ್ರೆ ನಿದ್ರೆ ಬರೋಲ್ಲ. ನೆನಪಿರಲಿ! ಅದೇ ಪುಂಡ-ಪೊಕರಿಗಳಿಗೆ ಹುಟ್ಟಿದಾಗ ಲಗ್ನ ನೋಡಿ, ಹೆಸರಿಟ್ಟಿದ್ದೂ ಒಬ್ಬ ಬ್ರಾಹ್ಮಣನೇ… ಎಲ್ಲ ಕಾಲಕ್ಕೂ ಬ್ರಾಹ್ಮಣನ ಅಸ್ತಿತ್ವ ಗಮನಾರ್ಹನೇ…
ಜನನ, ಅನ್ನ ಪ್ರಾಷನ, ಚೌಲ, ನಾಮಕರಣ, ಮದುವೆ, ಗುದ್ಲಿ ಪೂಜೆ, ಗೃಹಪ್ರವೇಶ, ಮಳೆ ನಕ್ಷತ್ರ ವಿವರಣೆ, ಮರಣ ಸಂಸ್ಕಾರ ಎಲ್ಲಕ್ಕೂ ಯಾವಾಗಲೂ ಬ್ರಾಹ್ಮಣನೇ ಬೇಕಿತ್ತು ಸ್ವಾಮಿ. ಬ್ರಾಹ್ಮಣರು ಎಂದೂ ರಾಜಾಶ್ರಯಿಗಳೇ. ಅಥವಾ ಊರಿನ ಜನ ಕೇಳೋ ಪ್ರಶ್ನೆಗಳಿಗೆ ಉತ್ತರ ಕೊಡ್ತಾ… ಜನಕ್ಕೆ ಮಾರ್ಗದರ್ಶನ ಮಾಡುತ್ತಲೇ ಬಂದ ಸಮುದಾಯ. ಇಂದು ಬ್ರಾಹ್ಮಣ ಅಂತ ಹೇಳೋದೇ ಒಂದು ಅವಮಾನಕ್ಕೆ ಆಸ್ಪದ ಆಗಿದೆ. ಕೋಮುವಾದಿ, ಮೂಲಭೂತವಾದಿ ಎಂದೆಲ್ಲ ಜಾತಿವಾದದ ಮಾತುಗಳು. ಆದರೆ ಬೇರೆ ವರ್ಗಗಳು, ಧರ್ಮಗಳು ಗತ್ತಿನಿಂದ ಹೇಳುವಂತೆ ಬ್ರಾಹ್ಮಣ ಎಂದೂ ತನ್ನತನವನ್ನು ಕೂಗಲಾರ. ನಮ್ಮವರೇ ಆದ ಬುದ್ದಿಜೀವಿಗಳೂ ಅಷ್ಟೇ. ತಮ್ಮ ಕೃತಿಯಲ್ಲಿ ಬ್ರಾಹ್ಮಣ ಆಚರಣೆ ಅನುಷ್ಠಾನನಗಳನ್ನು ಹಳಿದು, ಅಂತಿಮ ಇಚ್ಚೆಯಲ್ಲಿ ಬ್ರಾಹ್ಮಣ ರೀತ್ಯಾ ಸಂಸ್ಕಾರಗಳು ಆಗಬೇಕು ಎಂದು ಬರೆದಿಡೋದು. ಇದರಿಂದ ಏನು ಅರ್ಥವಾಗೋದು ಅಂದ್ರೆ ತಮ್ಮತಮ್ಮ ಏಳಿಗೆಗಾಗಿ ಎಲ್ಲರೂ ಏನು ಹೇಳಿದರೂ ಸುಮ್ಮನಿರುವ ಬ್ರಾಹ್ಮಣನನ್ನೆ ಟಾರ್ಗೆಟ್ ಮಾಡೋದು.
ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಆಧಾರ ರಹಿತ ಮಾತಾಡುತ್ತಿರುವ ಚೇತನ್ ಅಹಿಂಸ ಅವರೇ. ಇದೇ ಕಳಂಕವನ್ನ ಜಾತಿಪದ್ಧತಿಯಲ್ಲೇ ಇರುವ ಪ್ರಭಾವಿತ ಸಮುದಾಯದ ವಿರುದ್ಧ ಏಕೆ ಮಾಡೋಲ್ಲ? ಜಾತಿ ಹೇರಿಕೆ ಬರೀ ಬ್ರಾಹ್ಮಣರಿಂದಲೇ? ನೀವೂ ಚೆನ್ನಾಗಿ ಬಲ್ಲಿರಿ ತಮ್ಮತಮ್ಮ ಏಳಿಗೆಗಾಗಿ ಎಲ್ಲರೂ ಏನು ಹೇಳಿದರೂ ಸುಮ್ಮನಿರುವ ಬ್ರಾಹ್ಮಣನನ್ನೆ ಟಾರ್ಗೆಟ್ ಮಾಡೋದು. ನಿಮಗೆ ಏನೋ ಹೇಳಿದ ತೃಪ್ತಿ, ಹೇಳಿದ ಮೇಲೆ ಏನೂ ಆಗೋಲ್ಲ ಅನ್ನೋ ನಂಬಿಕೆ. ಅಷ್ಟೇ… ನೀವು ಯಾರನ್ನೇ ಹಳಿದರು, ಎಷ್ಟೇ ಕೀಳುಮಟ್ಟಕ್ಕಿಳಿದರೂ ಬ್ರಾಹ್ಮಣ್ಯದ ಒಂದು ಗುಲಗಂಜಿ ತೂಕವೂ ಕಮ್ಮಿ ಆಗೋಲ್ಲ…
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post