ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನಾ ವೈರಸ್ ಮಣಿಸುವ ಸಲುವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಲುವಾಗಿ ಪ್ರತಿ ಮನೆಗೂ ಆರ್ಯುವೇದ ಔಷಧಿ ಕಿಟ್ ನೀಡಲು ನಿರ್ಧರಿಸಲಾಗಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಈ ಕುರಿತಂತೆ ಮಾತನಾಡಿದ ಅವರು, ಕೋವಿಡ್19 ಸೋಂಕು ತಡೆಗಟ್ಟಲು ಸರ್ಕಾರದ ಸಹಾಯವಿಲ್ಲದೆ ಕೋವಿಡ್ ಸುರಕ್ಷಾ ಪಡೆ ಹೆಸರಿನಲ್ಲಿ ಹಂಚಲಾಗುತ್ತಿದೆ. ಈ ಕಾರ್ಯಕ್ಕೆ ಖ್ಯಾತ ವೈದ್ಯ ಡಾ. ಗಿರಿಧರ್ ಕಜೆ ಚಾಲನೆ ನೀಡಲಿದ್ದಾರೆ ಎಂದರು.
ಜನರ ಮನೆಗಳಿಗೆ ಇದನ್ನು ತಲುಪಿಸಲಿದ್ದು, ಇದನ್ನು ಪಡೆದುಕೊಳ್ಳುವವರು ಆಧಾರ್ ಕಾರ್ಡ್ ನೀಡುವುದು ಕಡ್ಡಾಯವಾಗಿದೆ ಎಂದರು.
Get In Touch With Us info@kalpa.news Whatsapp: 9481252093
Discussion about this post