ಕಲ್ಪ ಮೀಡಿಯಾ ಹೌಸ್ | ಹೈದರಾಬಾದ್ |
ಪಂಚರಾಜ್ಯ ಚುನಾವಣೆಯ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿ ಬೀಗುತ್ತಿದ್ದರೆ, ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಅಸ್ಥಿತ್ವ ಉಳಿಸಿಕೊಳ್ಳಲು ಹೆಣಗಾಡಿದ್ದು, ಇದರಲ್ಲಿ ಎಐಎಂಐಎಂ ಇನ್ನಿಲ್ಲದಂತೆ ಕಳೆದುಹೋಗಿದೆ.
ಹೌದು… ಅಸಾವುದ್ದೀನ್ ಓವೈಸಿ ನೇತೃತ್ವದ ಹೈದರಾಬಾದ್ ಮೂಲದ ಎಐಎಂಐಎಂ ಪಕ್ಷದಿಂದ ಉತ್ತರ ಪ್ರದೇಶದಲ್ಲಿ 100 ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿತ್ತು. ಆದರೆ, ಇದರಲ್ಲಿ 99 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದು, ಹೀನಾಯವಾಗಿ ಸೋತಿದ್ದಾರೆ. ಅಲ್ಲದೇ ಕೇವಲ ಒಂದೇ ಒಂದು ಕ್ಷೇತ್ರದಲ್ಲೂ ಸಹ ಗೆಲ್ಲಲು ಸಾಧ್ಯವಾಗಿಲ್ಲ.೨೦೧೭ರ ಚುನಾವಣೆಗೆ ಹೋಲಿಸಿದರೆ ಅದು ಸ್ವಲ್ಪ ಹೆಚ್ಚು ಮತಗಳನ್ನು ಸಂಗ್ರಹಿಸಿದೆಯಾದರೂ, ಅಸಾದುದ್ದೀನ್ ಓವೈಸಿ ನೇತೃತ್ವದ ಪಕ್ಷವು ವಿಶೇಷವಾಗಿ ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ತಾನು ಬಿಂಬಿಸಿದ ರೀತಿಯಲ್ಲಿ ಸಾಧಿಸಲು ವಿಫಲವಾಗಿದೆ.
ಗಮನಾರ್ಹವಾಗಿ ಹೆಚ್ಚಿನ ಶೇಕಡಾವಾರು ಮುಸ್ಲಿಂ ಜನಸಂಖ್ಯೆ ಮತ್ತು ಮತದಾರರನ್ನು ಹೊಂದಿರುವ ಕ್ಷೇತ್ರಗಳಲ್ಲಿ ಎಐಎಂಐಎಂ ತನ್ನ ಹೆಚ್ಚಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು ಎಂಬುದು ಗಮನಾರ್ಹ. ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ಸಹ, ಎಐಎಂಐಎಂ ಇಂತಹ ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರಗಳಿಂದ 38 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಅಲ್ಲೂ ಸಹ ಎಐಎಂಐಎಂನ ಬಹುತೇಕ ಎಲ್ಲಾ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post